ಕುಂದಾಪುರ: ಸಿ.ಎ. ಪರೀಕ್ಷೆಯಲ್ಲಿ ಶಿಕ್ಷಪ್ರಭಾ ಆಕಾಡೆಮಿ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇನ್ಟಿಟ್ಯೂಟ್ ಆಫ್ ಚಾರ್ಟರ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಮತ್ತು ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಶಿಕ್ಷಪ್ರಭಾ ಅಕಾಡಮಿ ಆಫ್ ಕಾಮರ್ಸ್ ಏಜುಕೇಶನ್ (ಸ್ಪೇಸ್) ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳು ವಿಶೇಷ ಸಾ‍ಧನೆ ಮಾಡಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ವಿಲಾಸ್ ಶೆಟ್ಟಿ, ಸಿಎ ಅಂತಿಮ ಪರೀಕ್ಷೆಯಲ್ಲಿ 528 ಅಂಕ ಗಳಿಸುವುದರೊಂದಿಗೆ ಸಿ.ಎ. ಕೋರ್ಸ್ ಪೂರ್ಣಗೊಳಿಸಿ ಲೆಕ್ಕ ಪರಿಶೋಧಕರಾಗಿ ಆಯ್ಕೆಯಾಗಿದ್ದಾರೆ. ಪುನೀತ್ ಶೆಟ್ಟಿ 215 ಅಂಕಗಳೊಂದಿಗೆ ಸಿ.ಎ. ಅಂತಿಮ ಪರೀಕ್ಷೆಯ ಪ್ರಥಮ ಗ್ರೂಪಿನಲ್ಲಿ ತೇರ್ಗಡೆ ಹೊಂದಿದ್ದಾರೆ.

ಸಿ.ಎ. ಪೌಂಡೇಶನ್ ಪರೀಕ್ಷೆಯಲ್ಲಿ ಅನುಷ್ಕಾ ಎ. ಕುಂದರ್ – 332, ಅಭಿಷೇಕ್ ಡಿ. 302, ಕಿರಣ್ ಕಾಮತ್ 299, ಆದಿತ್ಯ ದೇವಾಡಿಗ -298, ಜೆಸಿತಾ ಡಿ. -284, ರಾಮನಾಥ ಶೆಣೈ -282, ಸುಪ್ರೀತಾ- 274, ಶ್ರೇಯಾ ಭಟ್ -268, ರೋಹನ್ ಶೆಟ್ಟಿ- 266, ಅಭಿಶ್ರೀ- 263, ಮಂದಾರಾ – 260, ಭುವನ್ ರಾಜ್ ಶೆಟ್ಟಿ -252, ಹರೀಶ್ ನಾಯಕ್- 248, ವಿಖ್ಯಾತ್ 248, ಚೇತನಾ -245, ರವಿಕಿರಣ್ -245, ಅಮೃತಾ ಕೆ. -243, ನಾದಶ್ರೀ -240, ಶ್ರೀಷನ್ ಶೆಟ್ಟಿ- 240, ರಾಘವೇಂದ್ರ ಪೂಜಾರಿ- 238, ಅಕ್ಷಿತಾ -234, ದೀಕ್ಷಾ ಶಾನುಭಾಗ್ -229, ಮನೀಷ್ ಕೋಟ- 226, ಸಿಂಚನಾ -226, ವಿಜೇಂದ್ರ ಕಿಣಿ – 224, ಸಹನಾ ಎಸ್. – 223, ಶಮಂತ್ ಕೊಠಾರಿ- 223, ಶಾಂಭವಿ ಬಂಗೇರ – 222, ಆಹಿಷ್ ಶೆಟ್ಟಿ -216, ಪ್ರಿಯಾ ಶೆಟ್ಟಿ -215, ಶ್ರೀಮಾ ಶೆಟ್ಟಿ -215, ಅಕ್ಷತಾ- 214, ಸ್ನೇಹಾ -214, ಅಕ್ಷತಾ ಟಿ. – 209, ಅನುಷಾ – 208, ಅರ್ಪಣ್ ಪೂಜಾರಿ -207, ಗ್ಲೇವಿತಾ- 204, ವೈಷ್ಣವಿ ಶೆಟ್ಟಿ -204, ಮನೋಜ್ -202, ಚಿರಾಗ್ ಶೆಟ್ಟಿ -201, ಇಂಚರಾ -201 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಮತ್ತು ಭೋಧಕ ಸಿಬ್ಭಂದಿಗಳ ಪ್ರಯತ್ನಕ್ಕೆ ಫಲ ದೊರಕಿದೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಸಂಸ್ಥೆಯ ಬೋಧಕ ಸಿಬ್ಬಂದಿಗಳ ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು – ಪ್ರತಾಪ್ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ, ಶಿಕ್ಷಪ್ರಭಾ ಅಕಾಡಮಿ ಆಫ್ ಕಾಮರ್ಸ್ ಏಜುಕೇಶನ್, ಕುಂದಾಪುರ

ನನ್ನ ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ನನ್ನ ಪೋಷಕರು ಮತ್ತು ನನ್ನ ಬೋಧಕ ಸಿಬ್ಬಂದಿಗಳಿಗೆ ಧನ್ಯವಾದಗಳು, ಶಿಕ್ಷಪ್ರಭ ಅಕಾಡೆಮಿಯು ಶಿಕ್ಷಣದ ಜೊತೆಗೆ ವ್ಯಕ್ತಿತ ವಿಕಸನಕ್ಕೆ ಮಹತವನ್ನು ನೀಡುತ್ತದೆ. ಶಿಕ್ಷಪ್ರಭ ಅಕಾಡೆಮಿಯ ಗುಣಮಟ್ಟದ ಬೋಧಕ ಸಿಬ್ಬಂದಿಗಳು ನನ್ನಂತಹ ಅನೇಕ ವಿಧ್ಯಾರ್ಥಿಗಳ ಜೀವನದ ದಿಕ್ಕನ್ನೇ ಬದಲಿಸಿದ್ದಾರೆ.– ಸಿ.ಎ. ವಿಲಾಸ್ ಶೆಟ್ಟಿ. (528 ಅಂಕಗಳು)

ಕೋವಿಡ್ ಸಂದರ್ಭದಲ್ಲಿ ಎರಡೆರಡು ಲಾಕ್ ಡೌನ್ ಅನುಭವಿಸಿದರೂ ಕೂಡ ಶಿಕ್ಷಪ್ರಭಾ ಸಂಸ್ಥೆಯು ನಿರಂತರವಾಗಿ ನಮ್ಮನ್ನು ಬೆಂಬಲಿಸುತ್ತಾ ಬಂದಿದೆ. ಸಂಸ್ಥೆಯ ಎಲ್ಲಾ ಬೋಧಕ ಸಿಬ್ಬಂದಿಗಳಿಗೆ ಚಿರೠಣಿಯಾಗಿದ್ದೇನೆ. ನನ್ನ ಮುಂದಿನ ಸಿ.ಎ. ಇಂಟರ್ಮಿಡಿಯೇಟ್ ಮತ್ತು ಸಿ.ಎ. ಪೈನಲ್ ಕೋರ್ಸ್ಗಳನ್ನು ಶಿಕ್ಷಪ್ರಭಾ ಅಕಾಡೆಮಿಯಲ್ಲಿ ಮುಂದುವರಿಸಿ ಪ್ರಥಮ ಪ್ರಯತ್ನದಲ್ಲೇ ಲೆಕ್ಕ ಪರಿಶೋಧಕನಾಗುವ ಕನಸನ್ನು ಹೊತ್ತಿದ್ದೇನೆ. – ಅನುಷ್ಕಾ ಕುಂದರ್, ಸಿ. ಎ. ಪೌಂಡೇಶನ್ ಉತ್ತೀರ್ಣ ವಿದ್ಯಾರ್ಥಿ (332 ಅಂಕಗಳು)

Leave a Reply

Your email address will not be published. Required fields are marked *

nine + 3 =