ಶ್ರೀ ಸೇನೆಶ್ವರ ದೇವಸ್ಥಾನ ಬೈಂದೂರು

Click Here

Call us

Call us

ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿರುವ ಬೈಂದೂರಿಗೆ ಐತಿಹಾಸಿಕ ಹಾಗೂ ಧಾರ್ಮಿಕ ಗಟ್ಟಿತನವನ್ನು ತಂದುಕೊಟ್ಟ ದೇವಾಲಯಗಳ ಪೈಕಿ ಪ್ರಮುಖವಾದುದು ಮಹಾತೋಭಾರ ಶ್ರೀ ಸೇನೇಶ್ವರ ದೇವಸ್ಥಾನ. ಬೈಂದೂರಿನ ಅಧಿದೇವತೆಯಾಗಿ ಪೂಜಿಸಲ್ಪಡುವ ಶ್ರೀ ಸೇನೇಶ್ವರ ಭಕ್ತರ ಇಷ್ಟಾರ್ಥ ಸಿದ್ಧಿಸಿ ಪೊರೆಯುತ್ತಾನೆ ಎಂಬ ನಂಬಿಕೆ ಭಕ್ತರದ್ದು.

Call us

Call us

Visit Now

ಶ್ರೀ ರಾಮನು ಕಪಿಸೇನೆಯೊಂದಿಗೆ ಸೀತಾನ್ವೇಷಣೆಗೆ ಹೊಗುವಾಗ ಮಾರ್ಗ ಮಧ್ಯೆ ತಪಸ್ವಿ ಬಿಂದುಋಷಿಗಳ ಕೋರಿಕೆಯಂತೆ ರಾತ್ರಿ ಬೆಳಗಾಗುವುದರೊಳಗೆ ಕಪಿ ಸೇನೆಯಿಂದ ನಿರ್ಮಿಸಿದ ದೇವಾಲಯವಾಗಿದ್ದರಿಂದ ಇದಕ್ಕೆ ಸೇನೇಶ್ವರ ಎಂಬ ಹೆಸರು ಬಂತು ಎಂಬ ಐತಿಹಾಸಿಕ ಕಥೆ ಚಾಲ್ತಿಯಲ್ಲಿದೆ. ಹನ್ನೊಂದನೇ ಶತಮಾನದ ವೇಳೆಗೆ ಚಾಲುಕ್ಯ ರಾಜರ ಸಾಮಂತರಾಗಿದ್ದ ಸೇನಾ ಅರಸರು ಈ ದೇವಾಲಯವನ್ನು ಚಾಲುಕ್ಯ ಶಿಲ್ಪಕಲಾ ಶೈಲಿಯಲ್ಲಿ ಕಟ್ಟಿಸಿದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಇದಕ್ಕೆ ಪುಷ್ಟಿ ನೀಡುವಂತೆ ದೇವಳದ ಕಲ್ಲಿನ ಕೆತ್ತನೆ ಚಾಲುಕ್ಯರ ಶೈಲಿಯನ್ನೇ ಹೊಲುತ್ತದೆ.

Click here

Click Here

Call us

Call us

Shri Seneshwara temple Byndoor (1)ಇಲ್ಲಿನ ಅದ್ಬುತವಾದ ಶಿಲ್ಪಕಲೆ ಎಂತವರಲ್ಲಿಯೂ ಬೆರಗು ಹುಟ್ಟಿಸುತ್ತದೆ. ದೇವಾಲಯದ ಗರ್ಭಗುಡಿ, ಸುಖನಾಸಿ, ನಂದಿ ಮಂಟಪ, ನವರಂಗ ಶಿಖರಗಳನ್ನು ಶಿಲೆಯಿಂದಲೇ ನಿರ್ಮಿಸಲಾಗಿದ್ದು, ಇದರಲ್ಲಿನ ಕೆತ್ತನೆಗಳು ಮನಮೋಹಕವಾಗಿವೆ. ಸೇನಾಧಿಪತಿಯಂತೆ ವಿರಾಜಿಸುವ ಶ್ರೀ ಸೇನೆಶ್ವರ ಗರ್ಭಗೃಹದ ಮೂರು ಪಾಣಿಪೀಠದ ಮೇಲೆ ಲಿಂಗರೂಪಿಯಾಗಿದ್ದಾನೆ.

ದೇವಕೋಷ್ಠಕದ ಕಾಲಭೈರವ, ಚತುರ್ಮುಖ ಬ್ರಹ್ಮ, ಚಾಮುಂಡೇಶ್ವರಿ ಮೂರ್ತಿಗಳು, ನವರಂಗದ ದಶದಿಕ್ಕುಗಳಲ್ಲಿಯೂ ಮೈತಳೆದು ನಿಂತಿರುವ ಕಲಾ ಮೂರ್ತಿಗಳು, ಲೇಪಾಕ್ಷಿ, ಸುಕನಸಿಯ ಜಾಲಂದ್ರಗಳ ಮಧ್ಯದಲ್ಲಿರುವ ದ್ವಾರದ ಮೇಲ್ಗಡೆಯ ಮಕರ ತೋರಣ, ನಂದಿ ಮಂಟಪ ಮತ್ತು ಮಂಟಪದ ಕಂಬಗಳಲ್ಲಿ ಮೂಡಿರುವ ಕಲಾ ಕಸೂತಿ, ದೇವಳದ ಹಿಂಭಾಗದ ವಾಸ್ತು ವಿನ್ಯಾಸಗಳು ಹೀಗೆ ಸಂಪೂರ್ಣ ದೇವಾಲಯ ಅದ್ಬುತವಾದ ಕಲಾಕೃತಿಗಳಿಂದ ಕೂಡಿದ್ದು ಬೇಲೂರಿನ ಕಲಾವೈಭವವನ್ನು ಸರಿಗಟ್ಟುವಂತಿದೆ.

Click Here

ದೇವಳದ ಮುಂಭಾಗದಲ್ಲಿ ತಮಿಳುನಾಡು ಶೈಲಿಯ ಸಿಮೆಂಟಿನ ಗೋಪುರ ಹಾಗೂ ಶಿಲೆಯ ಧ್ವಜಸ್ತಂಭ ಆಕರ್ಷಕವಾಗಿದೆ. ದೇವಳದ ಎದುರಿನ ಪುಷ್ಕರಣಿಯನ್ನು ಸುಂದರವಾಗಿ ಕಟ್ಟಲಾಗಿದೆ.

ಮುಜರಾಯಿ ಇಲಾಖೆಯಡಿಯಲ್ಲಿ ಬರುವ ದೇವಾಲಕ್ಕೆ ಆಡಳಿತ ಸಮಿತಿ ಇದ್ದು ಪಡುವರಿಯ ಸೋಮೇಶ್ವರ ಹಾಗೂ ಬಂಕೇಶ್ವರ-ಗಣಪತಿ ದೇವಸ್ಥಾನವೂ ಇದರ ಆಡಳಿತಕ್ಕೆ ಒಳಪಡುತ್ತದೆ. ಪ್ರತಿವರ್ಷ ಚಿತ್ರಪೂರ್ಣಿಮೆಯಂದು ರಥೋತ್ಸವ ಜರುಗುತ್ತದೆ.

ಸಂಪರ್ಕ:

ಶ್ರೀ ಸೇನೇಶ್ವರ ದೇವಸ್ಥಾನ

ರಥಬೀದಿ ಬೈಂದೂರು

ಪೋನ್: 08254 251900

– ಸುನಿಲ್ ಬೈಂದೂರು

Leave a Reply

Your email address will not be published. Required fields are marked *

4 × two =