ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ್ ಅಧ್ಯಕ್ಷರಾಗಿ ಶ್ರೀಧರ ಬಿಜೂರು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ್ ಅಧ್ಯಕ್ಷರಾಗಿ ಶ್ರೀಧರ್ ಬಿಜೂರು ಆಯ್ಕೆಯಾಗಿದ್ದಾರೆ.

Call us

ಉಡುಪಿ ಅದಮಾರು ಮಠದ ಸಭಾಂಗಣದಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವಿಶೇಷ ಜಿಲ್ಲಾ ಬೈಠಕ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಬೈಂದೂರು ಘಟಕದ ಪ್ರಖಂಡ್ ಆಗಿ ಶ್ರೀಧರ್ ಬಿಜೂರು ಅವರನ್ನು ಹೆಸರನ್ನು ಘೋಷಿಸಿದ್ದಾರೆ. ವಿಶೇಷ ಬೈಠಕ್‌ನಲ್ಲಿ ಬಜರಂಗದಳ ವಿಭಾಗ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ಶ್ರೀಧರ ಬಿಜೂರು ಅವರು ಬಜರಂಗದಳ ಹಾಗೂ ಧರ್ಮ ಜಾಗರಣ ವೇದಿಕೆಯ ತಾಲೂಕು ಸಂಚಾಲಕರಾಗಿ, ಭಗವದ್ಗೀತಾ ಅಭಿಯಾನದ ತಾಲೂಕು ಸಂಚಾಲಕರಾಗಿ ಹಿಂದೂ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾಗಿದ್ದಲ್ಲದೇ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

20 + 3 =