ಮಕ್ಕಳ ವಿಜ್ಞಾನ ಸಮಾವೇಶ: ಸಿದ್ಧಾಪುರ ಪ್ರೌಢಶಾಲೆಯ ಶ್ರೀನಿಧಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
30ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ ತಾಲೂಕಿನ ಸಿದ್ಧಾಪುರ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಶ್ರೀನಿಧಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

Click here

Click Here

Call us

Call us

Visit Now

Call us

Call us

“ಆರೋಗ್ಯ ಮತ್ತು ಯೋಗಕ್ಷೇಮಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಮುಖ್ಯ ವಿಷಯದ ಮೇಲೆ ನಡೆದ ಈ ಬಾರಿಯ ಸಮಾವೇಶದಲ್ಲಿ ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ತಾಂತ್ರಿಕ ನಾವಿನ್ಯತೆ ಎಂಬ ಉಪವಿಷಯವನ್ನು ಆಧರಿಸಿ ಶ್ರೀನಿಧಿ “ಗ್ರಾಮೀಣ ಜನರ ಚಿತ್ತ ಕಾಂಕ್ರೀಟೀಕರಣದತ್ತ” ಎಂಬ ಅಧ್ಯಯನವನ್ನು ನಡೆಸಿದ್ದಳು. ಶಾಲೆಯ ವಿಜ್ಞಾನ ಶಿಕ್ಷಕಿ ಪೂರ್ಣಿಮಾ ವಿ. ಭಟ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಅಧ್ಯಯನವನ್ನು ತನ್ನ ತರಗತಿಯ ಸಹಪಾಠಿ ರಚನಾಳ ಜೊತೆಗೂಡಿ ನಡೆಸಿದ್ದಳು.

ಮನೆಯಂಗಳಕ್ಕೆ ಬಳಸುವ ಇಂಟರ್ ಲಾಕ್ ಗಳಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಿಕೊಳ್ಳುವ ಮೂಲಕ ಹರಿದುಹೋಗಬಹುದಾದ ಮಳೆನೀರನ್ನು ಅಂತರ್ಜಲದ ಭಂಡಾರಕ್ಕೆ ಸೇರಿಸಬಹುದು ಎಂಬ ಸಲಹೆಯೂ ಈ ಅಧ್ಯಯನ ಒಳಗೊಂಡಿದೆ. ಈ ಅಧ್ಯಯನವನ್ನು ಪರಿಣಾಮಕಾರಿಯಾಗಿ ಮಂಡಿಸಿದ ಕುಮಾರಿ ಶ್ರೀನಿಧಿ ತೀರ್ಪುಗಾರರ ಪ್ರಶ್ನೆಗಳಿಗೆ ಅತ್ಯುತ್ತಮವಾಗಿ ಉತ್ತರಿಸಿ ರಾಷ್ಟ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದಾಳೆ.

ಆಜ್ರಿ ಯಡೂರಿನ ಗೋಕುಲಾನಂದ ಮತ್ತು ಸುಮಿತ್ರಾರವರ ಮಗಳಾದ ಶ್ರೀನಿಧಿ ಕಲಿಕೆ ಮತ್ತು ಸಾಂಸ್ಕೃತಿಕ ರಂಗಗಳೆರಡರಲ್ಲೂ ತನ್ನ ಛಾಪು ಮೂಡಿಸಿರುವ ಸಿದ್ಧಾಪುರ ಪ್ರೌಢಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ. ಇದೀಗ ಯುವ ವಿಜ್ಞಾನಿಯಾಗಿಯೂ ಆಕೆ ಗುರುತಿಸಲ್ಪಟ್ಟಿರುವುದಕ್ಕಾಗಿ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

twelve + eight =