ಬೈಂದೂರು ತಾಲೂಕಿನಲ್ಲಿ ಶ್ರೀಶಾಂತ್ ಸ್ಟೋರ್ಟ್ಸ್ ಅಕಾಡೆಮಿ: ಕ್ರಿಕೆಟಿಗ ಎಸ್. ಶ್ರೀಶಾಂತ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಭಾನ್ವಿತ ಕ್ರೀಡಾಪಟುಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಹಾಲ್ಕಲ್ ಸಮೀಪ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಅಕಾಡೆಮಿಯನ್ನು ಆರಂಭಿಸುವ ಯೋಜಿಸಲಾಗಿದೆ ಎಂದು ಕ್ರಿಕೆಟಿಗ, ನಟ ಎಸ್. ಶ್ರೀಶಾಂತ್ ತಿಳಿಸಿದ್ದಾರೆ.

ಬೈಂದೂರು ರುಪೀ ಮಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಅಕಾಡೆಮಿ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ತಯಾರು ಮಾಡುವುದು ಮತ್ತು ಪ್ರಪಂಚವೇ ಈ ಮಾದರಿ ಅಕಾಡೆಮಿಯ ಕಡೆಗೆ ತಿರುಗಿ ನೋಡುವಂತೆ ಮಾಡುವ ಗುರಿಯನ್ನು ಸಂಸ್ಥೆಯ ಮುಂದಿದೆ ಎಂದರು.

ಅಕಾಡೆಮಿಯ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದ ಅವರು, ಅಕಾಡೆಮಿಯು ಕ್ರಿಕೆಟ್, ಪುಟ್ಬಾಲ್, ವಾಲಿಬಾಲ್, ಬಾಸ್ಕೆಟ್ ಬಾಲ್, ಬ್ಯಾಡ್ಮಿಟನ್ ಮತ್ತು ಅಥ್ಲೆಟಿಕ್ಸ್ಗೆ ಪ್ರೋತ್ಸಾಹ ನೀಡಲಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ಭಾಗವಹಿಸುವಂತೆ ಕೋರಿಕೊಂಡಿದ್ದು, ಹಲವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ. ಕ್ರೀಡಾಪಟುಗಳು ಭವಿಷ್ಯದ ಆಟಗಾರರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಆರಂಭದಲ್ಲಿ ರಜೆಯ ಅವಧಿಯಲ್ಲಿ ೩, ೬, ೯ ಹಾಗೂ ೩೬ ದಿನಗಳ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದ ಅವರು ಪ್ರಪಂಚದ ವಿವಿಧೆಡೆ ಇರುವ ಪ್ರತಿಭಾನ್ವಿತರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ಟೋರ್ಟ್ಸ್ ಅಕಾಡೆಮಿಯು ಭಾರತದ ವಿವಿಧೆಡೆ ಹಾಗೂ ವಿದೇಶಗಳಲ್ಲಿಯೂ ಆರಂಭಿಸಲು ಯೋಜಿಸಲಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಆರ್.ಎಸ್ ವೆಂಚರ್ಸ್ನ ಪ್ರವರ್ತಕರಾದ ರಾಜೀವ್ ಕುಮಾರ್ ಮಾತನಾಡಿ ಅಕಾಡೆಮಿಯು ಸಂಪೂರ್ಣ ಕ್ರೀಡಾ ಚಟುವಟಿಕೆಗಳೊಂದಿಗೆ ಶೀಘ್ರವೇ ಸಾಕಾರಗೊಳ್ಳಲಿದೆ. ವಸತಿ ಸಹಿತ ತರಬೇತಿಯಲ್ಲಿ ಪರಿಣಾಮಕಾರಿ ತರಬೇತಿ, ಟೂರ್ನ್ಮೆಂಟ್, ಒನ್ ಟು ಒನ್ ಟ್ರೇನಿಂಗ್ ಮೊದಲಾದವುಗಳು ಇರಲಿದೆ. ಅಲ್ಲದೇ ವಿವಿಧ ಕ್ರೀಡಾ ಕ್ಷೇತ್ರದ ಗಣ್ಯರ ಸಲಹೆಯಂತೆ ಫಿಟ್ನೆಸ್, ಡಯಟ್ ಮಾಡಲಾಗುತ್ತದೆ. ಸ್ಪಿರಿಚ್ವಲ್ ಸೆಂಟರ್ನಲ್ಲಿ ಯೋಗ, ಧ್ಯಾನ, ಆಯುರ್ವೇದ ಚಿಕಿತ್ಸೆ, ಮತ್ತು ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ನಿಷ್ಪಕ್ಷಪಾತವಾಗಿ ತಿಳಿಸಿಕೊಡಲಾಗುತ್ತದೆ ಎಂದರು.

ಜನವರಿ ತಿಂಗಳಿನಲ್ಲಿ ಅಕಾಡೆಮಿಯು ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಎಪ್ರಿಲ್ನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆರಂಭಿಸಲು ತಯಾರಿ ನಡೆಸಲಾಗಿದೆ. ಶ್ರೀಶಾಂತ್ ಸ್ಟೋರ್ಟ್ಸ್ ಅಕಾಡೆಮಿಯ ಕಾರ್ಪೋರೇಟ್ ಆಫೀಸ್ ಬೈಂದೂರು ರೂಪೀ ಮಾಲ್ನಲ್ಲಿ ಕಾರ್ಯಾಚರಿಸಲಿದೆ ಎಂದರು.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರಿನ ಉದ್ಯಮಿ ಕೆ. ವೆಂಕಟೇಶ್ ಕಿಣಿ, ಆರ್.ಎಸ್ ವೆಂಚರ್ಸ್ನ ಪ್ರವರ್ತಕರಾದ ರಾಜೀವ್ ಕುಮಾರ್, ಸಾಜು ಪತ್ರಿಕಾಗೋಪ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

3 + six =