ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಆಶಾಕಿರಣ ಕಿರಿಮಂಜೇಶ್ವರದ ಶುಭದಾ ಆಂಗ್ಲಮಾಧ್ಯಮ ಶಾಲೆ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಗುಣಮಟ್ಟದ ಶಿಕ್ಷಣ ಕನಸು ಹೊತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಳೆದೆರಡು ದಶಕಗಳಿಂದ ಉತ್ಕೃಷ್ಟ ಹಾಗೂ ಶಿಸ್ತುಬದ್ಧ ಶಿಕ್ಷಣವನ್ನು ಕಲ್ಪಿಸಿ ಸಾರ್ಥಕತೆ ಕಂಡುಕೊಂಡ ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯು ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವೆನಿಸಿಕೊಂಡಿದೆ. ಸಮುದ್ರ ತೀರದ ನಯನಮನೋಹರ ಪ್ರಾಕೃತಿಕ ಮಡಿಲಿನಲ್ಲಿರುವ ಸಂಸ್ಥೆಯು ಉತ್ಕೃಷ್ಠ ಶೈಕ್ಷಣಿಕ ಸೇವೆಯಿಂದ ಜನಪ್ರಿಯತೆಯನ್ನು ಗಳಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡುವ ಮಹತ್ಕಾರ್ಯದಲ್ಲಿ ಸಾರ್ಥಕ್ಯ ಕಂಡಿದೆ.

Click Here

Call us

Call us

ಶುಭದಾ ಎಜ್ಯುಕೇಶನ್ ಟ್ರಸ್ಟ್ ರಿ. ಆಡಳಿತಕ್ಕೊಳಪಟ್ಟ ಶುಭದಾ ಆಂಗ್ಲ ಶಾಲೆಯು ನಾವುಂದ ಮತ್ತು ಕಿರಿಮಂಜೇಶ್ವರ ಗ್ರಾಮಗಳ ಗಡಿಭಾಗವಾದ ಮಸ್ಕಿ ಎಂಬಲ್ಲಿ 1996ರಲ್ಲಿ ಸ್ಥಾಪಿಸಲ್ಪಟ್ಟಿದೆ. ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಪರಿಸರದಲ್ಲಿ ತನ್ನ ಉತ್ಕೃಷ್ಠ ಶಿಕ್ಷಣ ಸೇವೆಯಿಂದ ಜನಪ್ರಿಯತೆಯನ್ನು ಗಳಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕಾಗಿದೆ. ಸುಸಜ್ಜಿತ ಹಾಗೂ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಔಪಚಾರಿಕ ಶಿಕ್ಷಣದೊಂದಿಗೆ ಮಕ್ಕಳ ಕ್ರಿಯಾಶೀಲ ಮತ್ತು ಸೃಜನಶೀಲ ಪ್ರವೃತ್ತಿಯನ್ನು ಪೋಷಿಸುವ ನಿಟ್ಟಿನಲ್ಲಿ ಕಲೆ, ಕ್ರೀಡೆ, ಸಂಸ್ಕೃತಿ ಮುಂತಾದ ಹತ್ತು-ಹಲವು ರಚನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದ್ದು, ಮಕ್ಕಳ ಭವಿಷ್ಯವನ್ನು ಪರಿಪೂರ್ಣವಾಗಿ ರೂಪಿಸುವ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.

Click here

Click Here

Call us

Visit Now

ಎಸ್‌ಎಸ್‌ಎಲ್‌ಸಿಯಲ್ಲಿ ಗಮನಾರ್ಹ ಸಾಧನೆ:
ಶುಭದಾ ಶಾಲೆಯಲ್ಲಿ ವ್ಯಾಸಂಗ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ ಆರು ಬಾರಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿದ ಕೀರ್ತಿ ಹೊಂದಿದ್ದಾರೆ. ಬೈಂದೂರು ವಲಯದ ಆಂಗ್ಲಮಾಧ್ಯಮ ಶಾಲೆಗಳ ಸಾಲಿನಲ್ಲಿ ಶುಭದಾ ಶಾಲೆ ತನ್ನದೇ ಆದ ಪ್ರತಿಷ್ಠೆಯನ್ನು ಉಳಿಸಿಕೊಂಡಿದ್ದು, 2016-17ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ. Shubhada-school

ಶಿಕ್ಷಣಕ್ಕೆ ಪೂರಕ ಸೌಕರ್ಯ:
ಒನ್ ಪ್ಲಾನೆಟ್ ರಿಸರ್ಚ್ ಸಂಸ್ಥೆಯಿಂದ ಅತ್ಯುತ್ತಮ ಖಾಸಗಿ ಶಾಲೆ ಎಂದು ಗುರುತಿಸಲ್ಪಟ್ಟು ಎಕ್ಸಲೆನ್ಸಿ ಅವಾರ್ಡ್ ಪಡೆದಿರುವ ಶುಭದಾ ಶಾಲೆಯು 1 ತರಗತಿಯಿಂದ ರಿಂದ 10 ತರಗತಿಯ ತನಕ ರಾಜ್ಯ ಸರಕಾರದ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹದೊಂದಿಗೆ ಪ್ರತೀ ಮಗುವಿನ ಮಾನಸಿಕ, ನೈತಿಕ, ಬೌದ್ಧಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯ ಕಡೆಗೆ ವಿಶೇಷ ಗಮನ ಹರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ, ನರ್ಸರಿ ಮತ್ತು ಪ್ರಾಥಮಿಕ ಮಕ್ಕಳಿಗೆ ಆಡಿಯೋ ಮತ್ತು ಟಿ.ವಿ.ಯನ್ನು ಒಳಗೊಂಡ ಮನೋರಂಜನಾ ವಿಭಾಗದ ವ್ಯವಸ್ಥೆ, ನಾಯಕತ್ವ ತರಬೇತಿಗೆ ವಿಶೇಷ ಆದ್ಯತೆ, ಯೋಗ, ಕರಾಟೆ, ನೃತ್ಯ, ಸಂಗೀತ ಹಾಗೂ ಯಕ್ಷಗಾನ ತರಬೇತಿಗೆ ಒತ್ತು, ಸುಸಜ್ಜಿತ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಕೊಠಡಿ, ಉತ್ತಮ ಗಾಳಿಬೆಳಕನ್ನೊಳಗೊಂಡ ವಿಶಾಲವಾದ ಶಾಲಾ ಕೊಠಡಿ, ಮಧ್ಯಾಹ್ನದ ಭೋಜನಕ್ಕೆ ಪೌಷ್ಠಿಕಾಂಶಯುಕ್ತ ಆಹಾರ, ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ. ಪ್ರಸಕ್ತ ವರ್ಷದಿಂದ ಈ ಶಾಲೆಯಲ್ಲಿ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದ 23 ಮಕ್ಕಳಿಗೆ 1ನೇ ತರಗತಿಗೆ ಪ್ರವೇಶಾತಿಯನ್ನು ಕಲ್ಪಿಸಲಾಗಿದೆ. 1,000ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯ ಪೂರೈಸುವಲ್ಲಿ 42ಕ್ಕೂ ಅಧಿಕ ಶಿಕ್ಷಕರು, 30ಕ್ಕೂ ಅಧಿಕ ಮಂದಿ ಭೋಧಕೇತರ ಸಿಬ್ಬಂಧಿಗಳು ಶ್ರಮಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಸಂಸ್ಥೆಯ ಕನಸು ದೊಡ್ಡದಿದೆ:
ಬೈಂದೂರು ವಲಯದ ಶಿಕ್ಷಣಾಕಾಂಕ್ಷಿಗಳ ಪಾಲಿಗೆ ವರವಾಗಿರುವ ಶುಭದಾ ಆಂಗ್ಲಮಾಧ್ಯಮ ಶಾಲೆಯು ನಿರಂತರ ಹೊಸ ಯೋಜನೆಗಳನ್ನು ರೂಪಿಸಿ ಯಶಕಂಡಿದೆ. ಇಲ್ಲಿನ ಗ್ರಾಮೀಣ ಪ್ರತಿಭಾವಂತ ಹಾಗೂ ಬಡಮಕ್ಕಳ ಶೈಕ್ಷಣಿಕ ಜೀವನವನ್ನು ಹಸನಾಗಿಸುವ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣವನ್ನು ಅಳವಡಿಸುವ ಚಿಂತನೆ ಆಡಳಿತ ಮಂಡಳಿಯ ಮುಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲುವ ಸಲುವಾಗಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ಸಾಗುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದ್ದು ಅದು ಹೀಗೆಯೇ ಮುಂದುವರಿಯಲಿದೆ. ಉತ್ಕೃಷ್ಠ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಸಂಸ್ಥೆಯ ಕೀರ್ತಿಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಎನ್. ಕೆ. ಬಿಲ್ಲವ, ಮೆನೇಜಿಂಗ್ ಟ್ರಸ್ಟಿ ಬಿ. ಎ. ರಜಾಕ್ ಮತ್ತು ಟ್ರಸ್ಟಿಗಳಾದ ಮಂಜು ಪೂಜಾರಿ, ಆಡಳಿತ ನಿರ್ದೇಶಕ ಎಚ್. ಎನ್. ಐತಾಳ್, ಮುಖ್ಯಶಿಕ್ಷಕ ಪ್ರವೀಣ್‌ಕುಮಾರ್ ಹಾಗೂ ಶಿಕ್ಷಕ ವೃಂದ ನಿರಂತರವಾಗಿ ಶ್ರಮಿಸುತ್ತಿದೆ.

Call us

[quote font_size=”16″ bgcolor=”#ffffff” bcolor=”#1e73be” arrow=”yes”]ಶಿಕ್ಷಣ ಸಂಸ್ಥೆಯ ಕಟ್ಟಿದ ಕನಸುಗಾರ ಡಾ. ಎನ್.ಕೆ. ಬಿಲ್ಲವ:
N.K-Billava-Navundaಶುಭದಾ ಶಾಲೆ ಎಂಬುದು ಉದ್ಯಮಿ ಡಾ. ಎನ್. ಕೆ. ಬಿಲ್ಲವ ಅವರ ಕನಸಿನ ಕೂಸು. ಕಿರಿಯ ವಯಸ್ಸಿನಲ್ಲಿಯೇ ಮುಂಬೈ ನಗರಿಯನ್ನು ಸೇರಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ಸು ಗಳಿಸಿದ ನಾವುಂದದ ಡಾ. ಎನ್. ಕೆ. ಬಿಲ್ಲವ ಅವರು ಹುಟ್ಟೂರಿನಲ್ಲಿ ಶಿಕ್ಷಣ ಸಂಸ್ಥೆ ತೆರೆಯಬೇಕೆಂಬ ಕನಸು ಹೊತ್ತಿದ್ದರು. ಅದರ ಫಲವಾಗಿ ಕ್ರಮೇಣ ಶುಭದಾ ಆಂಗ್ಲಮಾಧ್ಯಮ ಶಾಲೆ ಆರಂಭಗೊಂಡಿತು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟ ಹಾಗೂ ಶಿಸ್ತುಬದ್ಧ ಶಿಕ್ಷಣವನ್ನು ಒದಗಿಸಬೇಕೆಂಬ ಎನ್.ಕೆ ಬಿಲ್ಲವರ ಕನಸಿಗೆ ಅವರ ಮಡದಿ ಶುಭದಾ ಎನ್. ಬಿಲ್ಲವ ಸಮರ್ಥವಾಗಿ ಹೆಗಲುಗೊಟ್ಟಿದ್ದಾರೆ. ಇಂದು ಪ್ರತಿಷ್ಠಿತ ಸಂಸ್ಥೆಯಾಗಿ ರೂಪುಗೊಳ್ಳುವಲ್ಲಿ ಒಗ್ಗಟ್ಟಾಗಿ ಶ್ರಮಿಸಿದ್ದಾರೆ. ಉದ್ಯಮಿಯಾಗಿ ಗಮನಾರ್ಹ ಸಾಧನೆಗೈದ ಡಾ. ಎನ್. ಕೆ. ಬಿಲ್ಲವ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದ್ದು ಅವರ ಕಾರ್ಯಕ್ಷೇತ್ರದ ಸಫಲತೆಯನ್ನು ಸೂಚಿಸಿದರೇ, ಅವರೇ ಕಟ್ಟಿ ಬೆಳೆಸಿದ ಶುಭದಾ ಶಿಕ್ಷಣ ಸಂಸ್ಥೆಗೂ ಎಕ್ಸಲೆನ್ಸಿ ಅವಾರ್ಡ್ ದೊರೆತಿರುವುದು ಶೈಕ್ಷಣಿಕ ಕ್ಷೇತ್ರದ ಸಾಧನೆಯನ್ನು ತಿರುಗಿ ನೋಡುವಂತೆ ಮಾಡಿದೆ. // ಕುಂದಾಪ್ರ ಡಾಟ್ ಕಾಂ ವರದಿ// [/quote]

  • ಸಂಪರ್ಕಿಸಿ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ – 08254 255300

Leave a Reply

Your email address will not be published. Required fields are marked *

twenty − seven =