ಕಂಪ್ಯೂಟರ್ ವಿಕಿರಣದಿಂದ ಕಣ್ಣು ಹಾಗೂ ತ್ವಚೆಯ ರಕ್ಷಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

Call us

Call us

ತಂತ್ರಜ್ಞಾನವು ನಮ್ಮ ಜೀವನವನ್ನು ಸರಳಗೊಳಿಸಿರುವುದೇನೋ ನಿಜ. ಆದರೆ ಅಷ್ಟೇ ಅನಾನುಕೂಲಗಳು ಇವೆ. ಕಂಪ್ಯೂಟರ್, ಮೊಬೈಲ್ ಎಲ್ಲವೂ ಇಂದಿನ ಆಧುನಿಕ ಕಚೇರಿ ಕೆಲಸದಲ್ಲಿ ಅಗತ್ಯ. ದಿನಕ್ಕೆ ಎಂಟು- ಒಂಬತ್ತು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಕಂಪ್ಯೂಟರ್ ನೋಡುತ್ತೀರಿ. ಜೊತೆಗೆ ಯಾವುದಾದ್ರೂ ಇಂಪಾರ್ಟೆಂಟ್ ಮೆಸೇಜ್ ಬಂತಾ ಅಂತ ಮೊಬೈಲ್ ನೋಡುವುದು ಇದ್ದದ್ದೇ.

Call us

Call us

ಇದೆಲ್ಲದರಿಂದ ಕಣ್ಣು ಉರಿಯಲು ಶುರುವಾಗಬಹುದು, ನೀರು ಬರಬಹುದು, ತಲೆನೋವು ಉಂಟಾಗಬಹುದು. ಒಂದು ಬದಿ ಮೈಗ್ರೇನ್ ಅಂತೂ ಕಚೇರಿ ಕೆಲಸದ ಒತ್ತಡಕ್ಕೇ ಸಂಬಂಧಪಟ್ಟದ್ದು. ಇದೆಲ್ಲದರ ಮೂಲ ಇರೋದು ನೀವು ಕಣ್ಣಿನ ಮೇಲೆ ಹೆಚ್ಚು ಒತ್ತಡ ಹಾಕೋದರಿಂದ. ಇನ್ನು ಕಂಪ್ಯೂಟರ್ ಹೊರಸೂಸುವ ವಿಕಿರಣಗಳು ತ್ವಚೆಯ ಮೇಲೆ ಕೂಡ ಪರಿಣಾಮ ಬೀರಲಿದ್ದು, ಅದರಿಂದ ರಕ್ಷಣೆ ಪಡೆಯುವುದು ಮುಖ್ಯ./ಕುಂದಾಪ್ರ ಡಾಟ್ ಕಾಂ/

Click here

Click Here

Call us

Call us

Visit Now

  • ಆಗಾಗ, ಸಾಕೆನಿಸುವಷ್ಟು ನೀರು ಕುಡಿಯವುದು ಕಣ್ಣುಗಳು ಒಣಗದಂತೆ ಕಾಪಾಡಿಕೊಳ್ಳಲು ತುಂಬಾ ಮುಖ್ಯ. ಕಣ್ಣು ಒಣಗಿದಂತೆನಿಸಿದರೆ, ನೀರು ಚಿಮುಕಿಸುವುದು, ಮುಚ್ಚಿ ತೆರೆಯುವುದು, ಹಸಿರನ್ನು ದಿಟ್ಟಿಸುವುದು ಮಾಡುತ್ತಿರಿ.
  • ಪ್ರತಿ ಮುಕ್ಕಾಲು ಗಂಟೆಗೊಮ್ಮೆ ಬ್ರೇಕ್ ಕೊಡಿ. ವಾಕ್ ಮಾಡಿ ಬನ್ನಿ. ಅಥವಾ ಕಣ್ಣು ಮುಚ್ಚಿ ಐದು ನಿಮಿಷ ಕೂತಿರಿ.
  • ಆಗಾಗ ಕಣ್ಣು ಮುಚ್ಚಿ ತೆರೆಯಲು ಮರೆಯಬೇಡಿ. ಐದು ನಿಮಿಷಕ್ಕಿಂತಲೂ ಅಧಿಕ ಸಮಯ ಕಣ್ಣು ತೆರೆದೇ ನೋಡುತ್ತಿದ್ದರೆ ಕಣ್ಣಿನ ರೆಟಿನಾಗೆ ಹಾನಿಯಾಗುತ್ತದೆ.
  • ನೀವು ಮಲಗುವುದಕ್ಕೆ ಅರ್ಧ ಗಂಟೆ ಮೊದಲು ಕಂಪ್ಯೂಟರನ್ನಾಗಲಿ, ಮೊಬೈಲನ್ನಾಗಲಿ ನೊಡಲೇಬೇಡಿ. ಇದರಿಂದ ನಿದ್ರೆಗೆ ಹಾನಿ. ಒಳ್ಳೆಯ ನಿದ್ರೆ ಕಣ್ಣಿನ ಆರೋಗ್ಯಕ್ಕೆ ಅತ್ಯವಶ್ಯ.
  • ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ. ಇದರಲ್ಲಿ ಬೀಟಾ ಕೆರೋಟಿನ್ ಇರುತ್ತದೆ. ಇದು ಇದು ವಿಟಮಿನ್ ಎ ಹಾಗೂ ಕಣ್ಣಿನ ಆರೋಗ್ಯ ಕಾಪಾಡುವ ಲ್ಯುಟೇನ್ಗಳನ್ನು ಸೃಷ್ಟಿಸುತ್ತದೆ. ದಿನದಲ್ಲಿ ಒಂದು ಹೊತ್ತಾದರೂ ಕ್ಯಾರೆಟ್ ಜಗಿಯುವುದು ಒಳ್ಳೆಯದು.
  • ದಿವಸಕ್ಕೆ ಒಂದು ಹೊತ್ತು ಚಪಾತಿಯ ಜೊತೆ ಸೊಪ್ಪಿನ ಪಲ್ಯ ಒಳ್ಳೆಯದು. ಎಲೆಕೋಸು, ಪಾಲಕ್, ಕೊತ್ತಂಬರಿ ಹೀಗೆ..ಸೊಪ್ಪುಗಳೆಲ್ಲಾ ಆರೋಗ್ಯಕರ. ಸೊಪ್ಪಿನ ತಂಬುಳಿ ಕೂಡ ಮಾಡಿಕೊಂಡು ಸೇವಿಸಬಹುದು.
  • ತರಕಾರಿ ಬೀಜಗಳು ಒಳ್ಳೆಯದು. ಕುಂಬಳ- ಸಿಹಿಕುಂಬಳದ ಬೀಜಗಳು ಆರೋಗ್ಯಕಾರಿ. ಇವುಗಳನ್ನು ಹುರಿದು ಸೇವಿಸಿ ಅಥವಾ ಇವುಗಳನ್ನು ಹೊಂದಿದ ಕಾರ್ನ್ಫ್ಲೇಕ್ಸ್ ಮಾರುಕಟ್ಟೆಯಲ್ಲಿ ಲಭ್ಯ
  • ಬಾದಾಮಿ, ಪಿಸ್ತಾ, ಗೋಡಂಬಿ, ಅಂಜೂರ, ಖರ್ಜೂರ ಮುಂತಾದ ಒಣ ಹಣ್ಣುಗಳಲ್ಲಿ ಸಾಕಷ್ಟು ಒಮೆಗಾ-3 ಮತ್ತು ವಿಟಮಿನ್ ಇ ಇರುತ್ತವೆ. ಇವು ಕಣ್ಣಿನ ಆರೋಗ್ಯಕ್ಕೆ ಪರಮ ಫಲಕಾರಿ.
  • ಸಿಟ್ರಸ್ ಹಣ್ಣುಗಳಾದ ಆರೆಂಜ್, ಮೂಸುಂಬಿ, ನಿಂಬೆಹಣ್ಣು, ದ್ರಾಕ್ಷಿ ನಿಮ್ಮ ಡಯಟ್ನಲ್ಲಿರಲಿ
  • ಪ್ರೊಟೀನ್ ಸಾಕಷ್ಟು ಹೊಂದಿರುವ ಆಹಾರವನ್ನು ಸೇವಿಸಿ. ಉದಾಹರಣೆಗೆ- ಮೊಟ್ಟೆ
  • ಆಹಾರದಲ್ಲಿ ಸಾಕಷ್ಟು ಜಿಡ್ಡಿನ ಅಂಶವಿರಬೇಕು. ತುಪ್ಪ- ತೆಂಗಿನೆಣ್ಣೆ ಸೇವಿಸಬಹುದು. ಆದರೆ ಕರಿದ ಪದಾರ್ಥಗಳು ಅಷ್ಟು ಒಳ್ಳೆಯದಲ್ಲ./ಕುಂದಾಪ್ರ ಡಾಟ್ ಕಾಂ/

ಕಂಪ್ಯೂಟರ್ ವಿಕಿರಣದಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಕೆಲವು ಸಲಹೆಗಳು:
ಫೇಸ್ ಪ್ಯಾಕ್: ಸ್ಥಿರ ವಿದ್ಯುತ್ನಿಂದಾಗಿ ವಿಕಿರಣಗಳು ಗಾಳಿಯಲ್ಲಿನ ಧೂಳನ್ನು ಹೀರಿಕೊಳ್ಳುತ್ತವೆ ಮತ್ತು ಇದು ತ್ವಚೆಯ ರಂಧ್ರಗಳನ್ನು ಮುಚ್ಚುತ್ತದೆ. ಫೇಸ್ ಮಾಸ್ಕ್ ಅನ್ನು ಅನ್ವಯಿಸುವ ಮೂಲಕ ವಾರಕ್ಕೊಮ್ಮೆ ನಿಮ್ಮ ಚರ್ಮಕ್ಕೆ ವಿಶ್ರಾಂತಿ ನೀಡುತ್ತದೆ, ಏಕೆಂದರೆ ಅದು ನಿಮ್ಮ ಚರ್ಮಕ್ಕೆ ಒಂದು ಸೇಫ್ ಪದರವನ್ನು ನಿರ್ಮಿಸುತ್ತದೆ. ಟೊಮೆಟೊ, ಅನಾನಸ್, ಜೇನುತುಪ್ಪ ಅಥವಾ ನಿಮ್ಮ ತ್ವಚೆಗೆ ಹೊಂದುವ ಪದಾರ್ಥಗಳಿಂದ ತಯಾರಿಸಿದ ವಿವಿಧ ರೀತಿಯ ಫೇಸ್ ಪ್ಯಾಕ್ಗಳನ್ನು ನೀವು ಬಳಸಬಹುದು.

ಸನ್‌ಸ್ಕ್ರಿನ್:  ನಾವು ಮಾಡಿದ ಹೂಡಿಕೆ ಎಂದಿಗೂ ವ್ಯರ್ಥವಾಗದ ಒಂದು ಉತ್ಪನ್ನವಿದ್ದರೆ ಅದು ಸನ್ಸ್ಕ್ರೀನ್. ಕನಿಷ್ಠ ಎರಡು ಅಥವಾ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಸನ್ಸ್ಕ್ರೀನ್ ಅನ್ವಯಿಸಿ. ಸನ್ಸ್ಕ್ರೀನ್ ಕೇವಲ ಹೊರಾಂಗಣಕ್ಕೆ ಮಾತ್ರವಲ್ಲ, ತ್ವಚೆಯ ಮುಚ್ಚಿದ ರಂಧ್ರಗಳ ಒಳಗೆ ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

ಕಣ್ಣಿನ ಕೆಳಗೆ ಜೆಲ್: ಮಾನವನ ಕಣ್ಣು ಅತ್ಯಂತ ಸೂಕ್ಷ್ಮವಾಗಿರುತ್ತದೆ ಮತ್ತು ವಿಕಿರಣಗಳು ಈ ಸ್ಥಳದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಕಂಪ್ಯೂಟರ್ ಪರದೆಯನ್ನು ಉತ್ತಮವಾಗಿ ನೋಡಲು ನಿಮ್ಮ ಕಣ್ಣುಗಳನ್ನು ಕಿರಿದಾಗಿಸುವುದರಿಂದ ನಿಮ್ಮ ಕಣ್ಣುಗಳ ಸುತ್ತ ಸುಕ್ಕುಗಳು ಉಂಟಾಗಬಹುದು. ಕಣ್ಣುಗಳು ಮತ್ತು ಕಣ್ಣಿನ ಸುತ್ತಲು ಜೆಲ್ ಅಥವಾ ಕೆನೆ ಹಚ್ಚುವುದರಿಂದ ಚರ್ಮವು ಒಣಗುವುದನ್ನು ತಡೆಯುತ್ತದೆ.

Call us

ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಿ: ಕಂಪ್ಯೂಟರ್ನ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಪ್ರತಿ 2 ಗಂಟೆಗಳಿಗೊಮ್ಮೆ ವಿರಾಮ ತೆಗೆದುಕೊಳ್ಳುವುದರಿಂದ ಈ ವಿಕಿರಣಗಳಿಗೆ ಹೆಚ್ಚು ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಬಹುದು. ಸ್ವಲ್ಪ ತಾಜಾ ಗಾಳಿಯನ್ನು ಉಸಿರಾಡಿ, ದಿನದಲ್ಲಿ ನಿತ್ಯ ಸ್ವಲ್ಪ ಸಮಯದವರೆಗೆ ಕಂಪ್ಯೂಟರ್ ಮಾನಿಟರ್ನಿಂದ ದೂರವಿರಲು

ಮುಖ ತೊಳೆಯಿರಿ: ನಾವು ಎಷ್ಟೇ ಪ್ರಯತ್ನಿಸಿದರೂ ಈ ಅಪಾಯಕಾರಿ ವಿಕಿರಣಗಳನ್ನು ದೀರ್ಘಕಾಲದಲ್ಲಿ ನಮಗೆ ಹಾನಿ ಮಾಡುವುದಂತೂ ಸತ್ಯ. ಆಗಾಗ್ಗೆ ಮುಖ ತೊಳೆಯಿರಿ, ಇದು ಧೂಳನ್ನು ನಿಮ್ಮ ಚರ್ಮದ ಮೇಲೆ ದೀರ್ಘಕಾಲ ಉಳಿಯಲು ಅನುಮತಿಸದೆ ತಕ್ಷಣ ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದ ನಿಮ್ಮ ತ್ವಚೆಯ ರಕ್ಷಣೆಗೆ ಬೆಸ್ಟ್ ಆಯ್ಕೆಯಾಗಿದೆ/ಕುಂದಾಪ್ರ ಡಾಟ್ ಕಾಂ/

 

Leave a Reply

Your email address will not be published. Required fields are marked *

eleven − nine =