ಸಾಮಾಜಿಕ ಕಾರ್ಯಕರ್ತ, ಪಿಎಫ್ಐ ಸಂಘಟನೆ ನೆರವಿಂದ ಕೋವಿಡ್ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋವಿಡ್ ಬಾಧಿತರಾಗಿ  ಮೃತಪಟ್ಟಿದ್ದ ಮೊಳಹಳ್ಳಿ ಗ್ರಾಮದ 70 ವರ್ಷದ ವೃದ್ಧರೊಬ್ಬರ ಅಂತ್ಯಸಂಸ್ಕಾರಕ್ಕೆ ಯಾರೂ ಲಭ್ಯರಾಗದೆ ಇದ್ದಾಗ  ಸಾಮಾಜಿಕ ಕಾರ್ಯಕರ್ತರು ಹಾಗೂ ಪಿಎಫ್ಐ ಸಂಘಟನೆ ಸದಸ್ಯರು ಅಂತಸಂಸ್ಕಾರಕ್ಕೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

Click Here

Call us

Call us

ಬುಧವಾರ ರಾತ್ರಿ ವೃದ್ಧ ಮೃತಪಟ್ಟಿದ್ದು, ಅವರ ಪತ್ನಿ ಕೂಡ ಕೋವಿಡ್‌ ಪಾಸಿಟಿವ್‌ ಆಗಿ ಆಸ್ಪತ್ರೆಯಲ್ಲಿದ್ದಾರೆ.  ದಂಪತಿಗೆ ಮಕ್ಕಳಿಲ್ಲ. ಸಮೀಪದ ಸಂಬಂಧಿಗಳ 2 ಮನೆ ಸೀಲ್ಡೌನ್ ಆಗಿದೆ. ಮೃತದೇಹವನ್ನು ಮುಟ್ಟಲು ಯಾರೂ ಸಿದ್ಧರಿಲ್ಲದ ಸ್ಥಿತಿ ಬಂದಿತ್ತು. ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ, ಪಿಎಫ್ಐ ಸಂಘಟನೆಯ ಆಸಿಫ್, ಉಸಾಮಾ, ಸಿದ್ದಿಕ್, ಸಮೀರ ಅವರು ತಾಲೂಕು ಆರೋಗ್ಯಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಿದರು.

Click here

Click Here

Call us

Visit Now

ಸರಕಾರಿ ನಿಯಮಾವಳಿಯಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಆಡಳಿತಾಧಿಕಾರಿ ಕೋವಿಡ್’ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಬೇಕೆಂಬ ನಿಯಮವಿದೆ. ಆದರೆ ಆ ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟ ಪ್ರತಿಕ್ರಿಯೆ ಬಾರದಿರುವುದರಿಂದ ವೈದ್ಯಾಧಿಕಾರಿಗಳ ನಿರ್ದೇಶನದಂತೆ ಸಮಾಜಸೇವಕರೇ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತೆಂದು  ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದವರೊರ್ವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

nine + eleven =