ಉದ್ಯೋಗ ಸಂದರ್ಶನದ ತಯಾರಿಗೆ ಒಂದಿಷ್ಟು ಟಿಪ್ಸ್

Call us

Call us

ಸಂದರ್ಶನಕ್ಕೆ ಹೋಗೋದು ಅಂದರೆ ಸುಲಭವಲ್ಲ. ಅದಕ್ಕೆ ಪೂರ್ಣ ಪ್ರಮಾಣದ ತಯಾರಿ ನಡೆದಿರಬೇಕು. ಆದರೆ ಆ ಬಗ್ಗೆ ಅತಿಯಾದ ಆತ್ಮವಿಶ್ವಾಸ ಇದ್ದರೆ ಮಾತ್ರ ಒಳ್ಳೇದಲ್ಲ. ನನಗೆಲ್ಲಾ ಗೊತ್ತಿದೆ, ಏನೇ ಪ್ರಶ್ನೆಗೆ ಉತ್ತರ ನೀಡಬಹುದು ಎಂದು ವಿಶ್ವಾಸ ಇದ್ದರೆ ನೀವು ಎಡವಬಹುದು. ಇದರಿಂದ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಂದರ್ಶನಕ್ಕೆ ಹೊರಡುವ ಸಮಯದಲ್ಲಿ ಹೇಗೆ ಸಂದರ್ಶನ ಎದುರಿಸುವುದು, ಹೇಗೆ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಉತ್ತರ ನೀಡುವುದು ಹೀಗೆ ಹಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಷ್ಟು ಮಾತ್ರವಲ್ಲ ಅದಕ್ಕೂ ಮಿಗಿಲಾಗಿ ಇನ್ನಷ್ಟು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

Call us

Call us

ಸಂದರ್ಶನಕ್ಕೆ ತಡವಾಗಿ ಹೊರಡೋದು:
ಸಂದರ್ಶನಕ್ಕೆ ಯಾವತ್ತೂ ತಡವಾಗಿ ಹೋಗಲೇಬೇಡಿ. ಅರ್ಧ ಗಂಟೆ ಮೊದಲೇ ಅಲ್ಲಿ ಇದ್ದರೆ ಉತ್ತಮ. ಸಮಯದ ಮಹತ್ವ ಕೂಡ ಇಂಟರ್ವ್ಯೂ ಸಮಯದಲ್ಲಿ ಮುಖ್ಯ

ನಡವಳಿಕೆ:
ಹೌದು ನೀವು ಮಾತನಾಡಲು ಬಳಕೆ ಮಾಡುವ ಪದಗಳು ಗೌರವಯುತವಾಗಿರಲಿ. ಕಠೋರವಾಗಿ ಅಥವಾ ಅತ್ಯಂತ ಸಲುಗೆಯಿಂದ ಮಾತನಾಡಬೇಡಿ.

Click here

Click Here

Call us

Call us

Visit Now

ಮೊಬೈಲ್ ಬಳಸಬೇಡಿ:
ಇಂಟರ್ವ್ಯೂ ಭವಿಷ್ಯವನ್ನು ರೂಪಿಸುತ್ತದೆ. ಆದುದರಿಂದ ಇಂಟರ್ವ್ಯೂಗೆ ಹೋಗುವ ಮುನ್ನ ಮೊಬೈಲ್ ಸ್ವಿಚ್ಆಫ್ ಅಥವಾ ಸೈಲೆಂಟ್ ಮೋಡ್ನಲ್ಲಿಡಿ. ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಮಾಡಬೇಡಿ.

ಓವರ್ ಕಾಂನ್ಫಿಡೆಂಟ್:
ಕಾನ್ಫಿಡೆಂಟ್ ಆಗಿರಿ ಆದರೆ ಓವರ್ ಕಾನ್ಫಿಡೆಂಟ್ ಒಳ್ಳೆಯದಲ್ಲ. ಕೆಲಸ ಬೇಕಾಗಿದೆ ನಿಜಾ. ಆದರೆ ಇಂಟರ್ವ್ಯೂ ಸಂದರ್ಭ ಆ ಕೆಲಸ ನನಗೇನೆ ಬೇಕು ಎಂದು ಹೇಳಬೇಡಿ. ಬದಲಾಗಿ ವೃತ್ತಿಪರತೆ ಕಾಯ್ದುಕೊಳ್ಳಿ.

Call us

ಪ್ರೊಫೆಷನಲ್ ಆಗಿರಿ:
ಹಾಸ್ಯ ಪ್ರವೃತ್ತಿಯಿಂದ ಕೆಲಸ ಗಿಟ್ಟಿಸಿಕೊಳ್ಳಬಹುದು ಎಂದು ಅಂದುಕೊಂಡರೆ ಅದು ತಪ್ಪು. ಇದರಿಂದ ಭವಿಷ್ಯ ಹಾಳಾಗೋದು ಖಂಡಿತಾ. ಆದುದರಿಂದ ಪ್ರೊಫೆಷನಲ್ ಆಗಿರಿ.

ಡ್ರೆಸ್ಸಿಂಗ್ ಸೆನ್ಸ್:
ಸಂದರ್ಶನಕ್ಕೆ ತೆರಳುವಾಗ ಡ್ರೆಸ್ ಪರ್ಫೆಕ್ಟ್ ಆಗಿರುವುದು ಮುಖ್ಯ. ಈ ಸಂದರ್ಭದಲ್ಲಿ ಫಾರ್ಮಲ್ ಧರಿಸಿ. ಆದರೆ ಹೆಚ್ಚು ಹೆವಿಯಾಗಿರುವ ಡ್ರೆಸ್ ಧರಿಸಬೇಡಿ.

ಮಾಹಿತಿ ನಿಖರವಾಗಿರಲಿ:
ಸಂದರ್ಶನದ ಸಮಯದಲ್ಲಿ ಎಷ್ಟು ಪ್ರಶ್ನೆ ಕೇಳಿದ್ದಾರೆಯೋ ಅಷ್ಟಕ್ಕೇ ಮಾತ್ರ ಉತ್ತರ ನೀಡಿ. ನೀವಾಗಿಯೇ ಏನೇನೋ ಉತ್ತರ ನೀಡಿ ಅವರಿಗೆ ಅದು ಅಧಿಕಪ್ರಸಂಗ ಎನಿಸಬಹುದು. ಆದುದರಿಂದ ನಿಖರ ಉತ್ತರ ನೀಡಿ ಸಾಕು.

ನೇರವಾಗಿ ಕುಳಿತುಕೊಳ್ಳಿ:
ಸಂದರ್ಶನ ಎದುರಿಸುವಾಗ ನೇರವಾಗಿ ಕುಳಿತು, ಸಂದರ್ಶಕರ ಕಣ್ಣನ್ನು ನೋಡಿ ಉತ್ತರ ನೀಡಿ. ಹೀಗೆ ಮಾಡುವುದರಿಂದ ನಿಮ್ಮಲ್ಲಿರುವ ಕಾನ್ಫಿಡೆನ್ಸ್ ಬಗ್ಗೆ ಅವರಿಗೆ ತಿಳಿಯುತ್ತದೆ.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

5 × 3 =