ಕುಂದಾಪುರ: ತಂದೆಯನ್ನೇ ಕೊಡಲಿಯಿಂದ ಕಡಿದು ಕೊಂದ ಮಗ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೌಟುಂಬಿಕ ಕಲಹದ ಕಾರಣದಿಂದ ಮಗನೇ ತಂದೆಯನ್ನು ಹತ್ಯೆಗೈದ ಅಮಾನುಷ ಘಟನೆ ತಾಲೂಕಿನ ಗೋಪಾಡಿ ಗ್ರಾಮದಲ್ಲಿ ನಡೆದಿದೆ. ಗೋಪಾಡಿಯ ಹಾಲಾಡಿ ಮನೆ ನಿವಾಸಿ ನರಸಿಂಹ ಮರಕಾಲ(74) ಕೋಲೆಯಾದ ವ್ಯಕ್ತಿ. ಆರೋಪಿ ಪುತ್ರನನ್ನು ರಾಘವೇಂದ್ರ (36) ಎಂದು ಗುರುತಿಸಲಾಗಿದೆ.

Call us

Call us

ಶನಿವಾರ ತಡರಾತ್ರಿ ಘಟನೆ ನಡೆದಿದೆ. ಆರೋಪಿ ರಾಘವೇಂದ್ರ ಜಾಗದ ವಿಚಾರದಲ್ಲಿ‌ ತಂದೆಯೊಂದಿಗೆ ಜಗಳ ಮಾಡಿಕೊಂಡಿದ್ದು, ಪ್ರತ್ಯೇಕವಾಗಿ ವಾಸವಿದ್ದ. ಶನಿವಾರ ರಾತ್ರಿ ರಾಘವೇಂದ್ರ ಮನೆಯ ಅಂಗಳದಲ್ಲಿ ಕಸಕಡ್ಡಿಗೆ ಬೆಂಕಿ ಹಾಕಿದ್ದಾನೆ. ಪಕ್ಕದಲ್ಲಿ ದನದ ಕೊಟ್ಟಿಗೆ, ಹುಲ್ಲು ರಾಶಿ ಇದ್ದ ಕಾರಣ ನರಸಿಂಹ ಮರಕಾಲ ಅವರು ಬೆಂಕಿಗೆ ನೀರು ಹಾಕಿ ಆರಿಸಲು ಹೋದ ವೇಳೆ ರಾಘವೇಂದ್ರ ಏಕಾಏಕಿ ತಂದೆ ಮೇಲೆ ಮುಗಿಬಿದ್ದು, ಮನೆಯ ಒಳಗಿದ್ದ ಕಬ್ಬಿಣದ ಕೊಡಲಿಯನ್ನು ತಂದು ನರಸಿಂಹ ಮರಕಾಲ ಅವರ ತಲೆಗೆ ಮುಖಕ್ಕೆ ಬಲವಾಗಿ ಕಡಿದಿದ್ದಾನೆ. ಅಲ್ಲೇ ಸ್ಥಳದಲ್ಲಿದ್ದ ನರಸಿಂಹ ಅವರ ಪುತ್ರಿ ತಪ್ಪಿಸಲು ಹೋದಾಗ ಅವರಿಗೂ ಕೊಡಲಿಯನ್ನು ಬೀಸಿ ಗಾಯಗೊಳಿಸಿದ್ದಾನೆ. ನರಸಿಂಹ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ

ಕುಂದಾಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

eight + four =