ಮೊಬೈಲ್‌ನಿಂದ ಖಾಸಗಿ ಬದುಕಿನ ಕ್ಷಣಗಳು ಜಗಜ್ಜಾಹಿರು: ಕಾರ್ಟೂನು ಹಬ್ಬ ಸೈಬರ್ ಖಬರ್ ಕಾರ್ಯಕ್ರಮದಲ್ಲಿ ಎಸ್ಪಿ ಕೆ. ಅಣ್ಣಾಮಲೈ ಅಭಿಮತ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಕಾನೂನು 18ನೇ ಶತಮಾನದಲ್ಲಿದ್ದರೇ, ಮನುಷ್ಯನ ಮನಸ್ಥಿತಿ 19ನೇ ಶತಮಾನದಲ್ಲಿದೆ. ಆದರೆ ಆತನ ಆಕಾಂಕ್ಷೆಗಳು 21ನೇ ಶತಮಾನದಲ್ಲಿದೆ. ಈ ಮೂರರ ತಿಕ್ಕಾಟದ ನಡುವೆ ಸಮಾಜವಿದೆ. ಬದಲಾದ ಸಮಾಜಕ್ಕೆ ತಕ್ಕಂತೆ ಸೈಬರ್ ಕ್ರೈಮ್ ಕಾನೂನು ಕೂಡ ಪ್ರಬಲವಾಗಿ ರೂಪುಗೊಂಡಿಲ್ಲ. ಸುಪ್ರಿಂ ಕೋರ್ಟ್ ಪಾರ್ಲಿಮೆಂಟ್‌ಗೆ ಕಾನೂನು ರಚಿಸಲು ನಿರ್ದೇಶನ ನೀಡಿದೆಯಾದರೂ, ಅಲ್ಲಿಯ ತನಕ ಅಸಹಾಯಕರಾಗಿ ಇರಬೇಕಾದ ಅನಿವಾರ್ಯತೆ ಇದೆ ಎಂದು ಚಿಕ್ಕಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು.

Call us

Call us

Visit Now

ಅವರು ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ಆಶ್ರಯದಲ್ಲಿ, ಕುಂದಾಪುರ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಇಲ್ಲಿನ ಕಲಾಮಂದಿರದಲ್ಲಿ ಶುಕ್ರವಾರ ಜರುಗಿದ ಕಾರ್ಟೂನು ಹಬ್ಬದಲ್ಲಿ ಸೈಬರ್ ಖಬರ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

Click here

Click Here

Call us

Call us

ಇಂದಿನ ಏಳು ನಿಮಿಷದಲ್ಲಿ ಆಗುತ್ತಿದ್ದ ಡಾಟಾ ವರ್ಗಾವಣೆ ನೂರು ವರ್ಷದ ಹಿಂದೆ ವರ್ಗಾವಣೆ ಆಗಲು ೩೫ ವರ್ಷ ಬೇಕಾಗುತ್ತಿತ್ತು. ಅಷ್ಟು ವೇಗದಲ್ಲಿ ಜಗತ್ತು ಸಾಗುತ್ತಿದೆ. ಒಂದು ಗಂಟೆಯಲ್ಲಿ ವಿಶ್ವದಲ್ಲಿ ೧.೧ ಟ್ರಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡುತ್ತಿದ್ದೇವೆ. ಇಷ್ಟು ವೇಗದಲ್ಲಿ ಜಗತ್ತು ಸಾಗುತ್ತಿದೆ.

ಮನುಷ್ಯನ ಕೈಯಲ್ಲಿರುವುದು ಮೊಬೈಲ್ ಮಾತ್ರವಲ್ಲ. ಅದು ಮೊಬೈಲ್ ಕಂಪ್ಯೂಟರ್ ಆಗಿ ಪರಿವರ್ತನೆಗೊಂಡಿದೆ. ಅದರಲ್ಲಿ ಎಲ್ಲಾ ಕಾರ್ಯವನ್ನೂ ನಿರ್ವಹಿಸಲು ಸಾಧ್ಯವಿದೆ. ಜೊತೆಗೆ ಮೊಬೈಲ್ ನಮ್ಮ ಖಾಸಗಿ ಬದುಕಿನ ಕ್ಷಣಗಳನ್ನು ಜಗಜ್ಜಾಹಿರು ಮಾಡುತ್ತಿವೆ. ನಮ್ಮ ಪ್ರತಿ ದಿನದ ಪ್ರತಿ ಕ್ಷಣವನ್ನೂ ಟ್ರಾಕ್ ಮಾಡಲಾಗುತ್ತಿದೆ. ಇನ್ನು ಹತ್ತು ವರ್ಷದಲ್ಲಿ ನಮ್ಮ ಬದುಕು ಬಿಗ್ ಡಾಟಾಗೆ ಒಗ್ಗಿಕೊಂಡು ತಂತ್ರಜ್ಞಾನದೊಂದಿಗೆ ಬದುಕಬೇಕಾದ ಅನಿವಾರ್ಯತೆ ಬರಲಿದೆ ಎಂದ ಅವರು ಪ್ರೈವೆಸಿ ನಮ್ಮ ಕೈನಲ್ಲಿಯೇ ಇದ್ದು ಅದನ್ನು ಕಾಪಾಡಿಕೊಳ್ಳುವ ಎಚ್ಚರಿಕೆ ಬೇಕಾಗಿದೆ. ತಂತ್ರಜ್ಞಾನದ ಬಗೆಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣಗಳನ್ನು ಬರುವ ಚಿತ್ರ ವಿಡಿಯೋಗಳ ನೈಜತೆಯನ್ನು ಅರಿತು ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯತೆ ಇದೆ ಇಲ್ಲವಾದಲ್ಲಿ ಕೈಯಲ್ಲಿರುವ ಮೊಬೈಲ್ ಕೇವಲ ಪೋನ್ ಆಗಿ ಉಳಿಯದೇ ಮೊಬೈಲ್ ಆಟಮ್ ಬಾಂಬ್ ಆಗಿ ಪರಿವರ್ತನೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

Click Here

ದೇಶದಲ್ಲಿ ಎಲ್ಲರಿಗೂ ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವೈರುಧ್ಯವಿರುತ್ತದೆ. ಒಬ್ಬ ವ್ಯಕ್ತಿ ಹೇಳುವುದು ಬಹಳಷ್ಟು ಭಾರಿ ಅರ್ಥವಾಗಿರುವುದಿಲ್ಲ. ಕೆಲವನ್ನೂ ವಿಚಾರಗಳನ್ನು ಒಪ್ಪಿಕೊಳ್ಳುವುದಕ್ಕೆ ತಯಾರಾಗುವುದಿಲ್ಲ. ಇದು ಗಲಭೆ ದಾರಿ ಮಾಡಿಕೊಡುತ್ತದೆ ಎಂದರು.

ಕಾರ್ಟೂನು ಮುಖಾಂತರ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿಶೇಷವಾಗಿ ಸೈಬರ್ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಆಗುತ್ತಿದೆ.

ಗೌರವ ಸ್ವೀಕರಿಸಿದ ವೆಬ್ ಡಿಸೈನರ್, ವ್ಯಂಗ್ಯಚಿತ್ರಕಾರ ದಿನೇಶ್ ಸಿ. ಹೊಳ್ಳ ಮಾತನಾಡಿ ಸತೀಶ್ ಆಚಾರ‍್ಯ ಅವರ ಕಾರ್ಟೂನು ವೆಬ್ಸೈಟ್ ಮೂಲಕ ಕಾರ್ಟೂನು ಪ್ರಪಂಚದ ವಿವಿಧ ಮಜಲುಗಳನ್ನು ತೆರೆದಿಡುವ ಪ್ರಯತ್ನ ಮಾಡಲಾಗುತ್ತದೆ. ದೈನಂದಿನ ಕಾರ್ಟೂನುಗಳನ್ನು ಪ್ರಕಟಿಸುವುದರೊಂದಿಗೆ, ಕಾರ್ಟೂನು ರಚನೆಯ ಬಗ್ಗೆ ಮಾಹಿತಿ, ಮುಂತಾದ ವೀಡಿಯೋಗಳನ್ನು ನಿರಂತರವಾಗಿ ಪ್ರಕಟಿಸಿ, ಕಾರ್ಟೂನು ಶಿಕ್ಷಣ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.

ಡಾ. ಅರುಲ್ ಕುಮಾರ್ ಕಾರ್ಟೂನಿಷ್ಠ್ ಸತೀಶ್ ಆಚಾರ‍್ಯ ಅವರ ವೆಬ್ಸೈಟ್ ಉದ್ಘಾಟಿಸಿದರು. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹಿರಿಯ ವಿಶೇಷ ವರದಿಗಾರ ಅಮಿತ್ ಉಪಾದ್ಯೆ, ಡಾ. ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ದೋಮ ಚಂದ್ರಶೇಖರ್ ಉಪಸ್ಥಿತರಿದ್ದರು.

ವೆಬ್ ಡಿಸೈನರ್ ಹಾಗೂ ವ್ಯಂಗ್ಯಚಿತ್ರಕಾರ ದಿನೇಶ್ ಸಿ ಹೊಳ್ಳ ಅವರನ್ನು ಗೌರವಿಸಲಾಯಿತು. ಕಾರ್ಟೂನಿಷ್ಠ್ ಜೀವನ್ ಶೆಟ್ಟಿ ಹಾಗೂ ಚಂದ್ರಶೇಖರ್ ಶೆಟ್ಟಿ ಲೈವ್ ಕಾರ್ಟೂನಿಂಗ್ ಮಾಡಿದರು. ಕಾರ್ಟೂನಿಷ್ಠ್ ಸತೀಶ್ ಆಚಾರ‍್ಯ ವಂದಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

three × 2 =