ಕುಂದಾಪುರದ ವೈದ್ಯ ಡಾ.ಮಲ್ಲಿ ಕುಂಚದಲ್ಲಿ ಮೂಡಿತು ಸುಂದರ ಕಲಾಕೃತಿಗಳು

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕಲೆಗೆ ವಯಸ್ಸಿನ ಹಂಗಿಲ್ಲ. ಸಮಯದ ಪರಿಧಿ ಇಲ್ಲ. ತನ್ನನ್ನು ಆರಾಧಿಸುವ ಯಾರಿಗೇ ಆದರೂ ಒಲಿಯದೇ ಉಳಿಯೊಲ್ಲ. ಏನನ್ನಾದರೂ ಸಾಧಿಸುವನೆಂಬ ಛಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ಕಷ್ಟವಲ್ಲ. ಹೌದು ಕುಂದಾಪುರ ಬಹುಪರಿಚಿತ ವೈದ್ಯ ಡಾ. ಎಚ್. ಎಸ್. ಮಲ್ಲಿ ಅವರೊಳಗಿನ ಕಲಾಕಾರ ಕೊಂಚದಿಂದ ಹೊರಬಂದು ಕಲಾಕೃತಿಗಳಾಗಿರುವುದನ್ನು ಕಂಡವರಿಗೆ ಹೀಗೆ ಅನ್ನಿಸದಿರದು.

Call us

Call us

Visit Now

ಕುಂದಾಪುರದ ಕಲಾಮಂದಿರದಲ್ಲಿ ಇತ್ತಿಚಿಗೆ ಡಾ. ಸುಭೋಧ್‌ಕುಮಾರ್ ಮಲ್ಲಿ ಅವರ ’ಸೃಜನಾ’ ಚಿತ್ರಕಲಾ ಪ್ರದರ್ಶನ ಮೂರು ದಿನಗಳ ಕಾಲ ಏರ್ಪಡಿಸಲಾಗಿತ್ತು. 76ರ ಹರೆಯದ ಮಲ್ಲಿಯವರು ಪ್ರಥಮ ಬಾರಿಗೆ ತಾವು ರಚಿಸಿದ ಚಿತ್ರಕಲೆ ಪ್ರದರ್ಶನವನ್ನು ಏರ್ಪಡಿಸಿ ಚಿತ್ರಕಲಾ ಪ್ರಿಯರ ಮನ ಸೂರೆಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರ ಪ್ರದರ್ಶನ ಮಾತ್ರವಲ್ಲದೇ ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದು ಇದರಿಂದ ಸಂಗ್ರಹವಾದ ಹಣವನ್ನು ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ನೀಡುತ್ತಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

Click here

Call us

Call us

ಬಹಮುಖ ವ್ಯಕ್ತಿತ್ವ:
ವೃತ್ತಿಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿ ೪೫ ವರ್ಷಗಳ ಕಾಲ ವೈದ್ಯಕೀಯ ಸೇವೆ ನೀಡಿದ ಡಾ. ಎಚ್.ಎಸ್.ಮಲ್ಲಿಯವರು ಕಳೆದ ೨೫ ವರ್ಷಗಳಿಂದ ಕುಂದಾಪುರದಲ್ಲಿ ಯಡ್ತರೆ ಆಸ್ಪತ್ರೆಯನ್ನು ನಡೆಸಿಕೊಂಡು ಬಂದವರು. ಪರಿಸರ ಪ್ರೇಮಿಯಾಗಿ ಕುಂದಾಪುರದಲ್ಲಿ ಗೆಳಯರೊಂದಿಗೆ ಸೇರಿ ಪ್ಲೋರಾ ಎಂಡ್ ಫೌನಾ ಕ್ಲಬ್‌ನ್ನು ಸ್ಥಾಪಿಸಿ ತನ್ಮೂಲಕ ಪರಿಸರ ಮತ್ತು ಜೀವ ವೈವಿಧ್ಯ, ಪ್ರಕೃತಿಯ ರಕ್ಷಣೆಯ ಅಗತ್ಯತೆಗಳನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ. ಛಾಯಾಚಿತ್ರ ಗ್ರಹಣ, ಚಾರಣ, ಪಕ್ಷಿ ವೀಕ್ಷಣೆ ಇವರ ಪ್ರಿಯ ಹವ್ಯಾಸ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಮಲ್ಲಿಯವರು ಮಂಗಳೂರಿನ ಪ್ರಖ್ಯಾತ ಬಿಜಿಎಂ ಫೈನ್ ಆರ್ಟ್ಸ್‌ನಲ್ಲಿ ತರಬೇತಿಯನ್ನು ಪಡೆದವರು. ಕಾಲೇಜು ಜೀವನದಿಂದ ಚಿತ್ರಕಲೆಯ ಹವ್ಯಾಸವನ್ನು ಪೋಷಿಸಿಕೊಂಡು ಬಂದ ಇವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವರ್ಷವು ವರ್ಷದ ಅತ್ಯುತ್ತಮ ಚಿತ್ರಕಲಾವಿದ ಪ್ರಶಸ್ತಿಗೆ ಭಾಜನರಾದವರು.

Srujana - Dr Subhodkumar Malli's Art exhibition at Kundapura kala mandira- Dr H.S. Malli (25) Srujana - Dr Subhodkumar Malli's Art exhibition at Kundapura kala mandira- Dr H.S. Malli (14) Srujana - Dr Subhodkumar Malli's Art exhibition at Kundapura kala mandira- Dr H.S. Malli (13) Srujana - Dr Subhodkumar Malli's Art exhibition at Kundapura kala mandira- Dr H.S. Malli (11) Srujana - Dr Subhodkumar Malli's Art exhibition at Kundapura kala mandira- Dr H.S. Malli (10) Srujana - Dr Subhodkumar Malli's Art exhibition at Kundapura kala mandira- Dr H.S. Malli (9)Srujana - Dr Subhodkumar Malli's Art exhibition at Kundapura kala mandira- Dr H.S. Malli (30) Srujana - Dr Subhodkumar Malli's Art exhibition at Kundapura kala mandira- Dr H.S. Malli (27) Srujana - Dr Subhodkumar Malli's Art exhibition at Kundapura kala mandira- Dr H.S. Malli (26) _MG_6547 _MG_6545 _MG_6559

Leave a Reply

Your email address will not be published. Required fields are marked *

7 + 15 =