‘ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಫಿ 2020’: 8 ಸ್ಟಾರ್ ಉಪ್ಪುಂದಕ್ಕೆ ಪ್ರಥಮ ಬಹುಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಗ್ಗರ್ಸೆ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಇಲ್ಲಿನ ಕಂಬಳಗದ್ದೆಯ ಹತ್ತಿರ ನಡೆದ ದ್ವಿತೀಯ ವರ್ಷದ ಹಗಲು-ರಾತ್ರಿಯ ’ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಫಿ 2020’ ಕ್ರಿಕೆಟ್ ಪಂದ್ಯಾಟದಲ್ಲಿ 8 ಸ್ಟಾರ್ ಉಪ್ಪುಂದ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಓಂ ಕಲಾ ಮೊಗೇರಿ ತಂಡ ದ್ವಿತೀಯ ಸ್ಥಾನವನ್ನು ಪಡೆದು ಬಹುಮಾನ ಸ್ವೀಕರಿಸಿದರು.

ಕ್ರಿಕೆಟ್ ಪಂದ್ಯಾಟದಲ್ಲಿ 60ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ಎಸೆತಗಾರ, ಗೂಟರಕ್ಷಕ, ದಾಳಿಗಾರ, ಕ್ಷೇತ್ರರಕ್ಷಕ ಮತ್ತು ಬೆಸ್ಟ್ ರನೌಟ್ ಪ್ರಶಸ್ತಿಗಳನ್ನು ಆಟಗಾರರಿಗೆ ನೀಡಲಾಯಿತು. ಈ ಸಂದರ್ಭ ಆಯೋಜಕರಾದ ಪ್ರಮೋದ್ ಆಚಾರ್ಯ, ಹರ್ಷೆಂದ್ರ ಆಚಾರ್ಯ, ರವಿ ಗಾಣಿಗ, ಶ್ರೀನಿವಾಸ ಆಚಾರ್ಯ, ಸಂತೋಷ ಆಚಾರ್ಯ, ಪ್ರವೀಣ ಆಚಾರ್ಯ, ಅಣ್ಣಪ್ಪ ಮೊದಲಾದವರು ಇದ್ದರು.

 

Leave a Reply

Your email address will not be published. Required fields are marked *

5 × five =