ಬೈಂದೂರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌. 36.19 ಕೋಟಿ ವ್ಯವಹಾರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೈಂದೂರು 2015-16ನೇ ಸಾಲಿನಲ್ಲಿ 36.19 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ 34,96,115 ರೂ. ಲಾಭಗಳಿಸಿದೆ. ಹಿಂದಿನ ನಾಲ್ಕು ಆರ್ಥಿಕ ವರ್ಷಗಳಿಗೆ ಹೋಲಿಸಿದರೇ ಲಾಭಾಂಶ ಶೇ.೩೬ರಷ್ಟು ವೃದ್ಧಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

Call us

Call us

Visit Now

ಭಾನುವಾರ ಸಂಘದ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸಹಕಾರಿಯು 8,16,20,756 ರೂ. ಠೇವಣಿ ಸಂಗ್ರಹಿಸಿದ್ದರೇ 7,94,42,775 ರೂ. ಸಾಲರುವುದಲ್ಲದೇ ಆರ್ಥಿಕ ವರ್ಷದಲ್ಲಿ ಒಟ್ಟು 36.19ಕೋಟಿ ವಹಿವಾಟು ನಡೆಸಿದೆ. 34.96ಲಕ್ಷ ಲಾಭಾಂಶದಲ್ಲಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಲಾಗಿದೆ ಎಂದರು.

Click Here

Click here

Click Here

Call us

Call us

ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಮುನ್ನಡೆಯುತ್ತಿದ್ದರೇ, ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಆಡಿಟ್ ವರ್ಗೀಕರಣದಲ್ಲಿ ಸಂಸ್ಥೆ ‘ಎ’ ತರಗತಿಯನ್ನು ಹೊಂದಿದೆ ಎಂದರು.

ಸೌಹಾರ್ದ ಸಹಕಾರಿಯ ವ್ಯಾಪ್ತಿಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪ್ರಸಕ್ತ ವರ್ಷದಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರ್ಪಡೆಗೊಂಡ ವಿದ್ಯಾರ್ಥಿನಿಯೋರ್ವಳಿಗೆ ಆರ್ಥಿಕ ನೆರವು ನೀಡಲಾಯಿತು.

ನಿರ್ದೇಶಕರುಗಳಾದ ಮಂಜು ಪೂಜಾರಿ, ಪ್ರಶಾಂತ್, ಅಣ್ಣಪ್ಪ ಪೂಜಾರಿ, ಶಿವರಾಮ ಪೂಜಾರಿ ಹಾಗೂ ರತಿ ರಾಜು ಪೂಜಾರಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ವಾರ್ಷಿಕ ವರದಿ ವಾಚಿಸಿದರು. ಶಾಖಾ ಪ್ರಬಂಧಕ ರಾಜೇಂದ್ರ ದೇವಾಡಿಗ ವಂದಿಸಿದರು.

 Sri Ram souharda credit co-operative byndoor annula general meeting 2016 (2) Sri Ram souharda credit co-operative byndoor annula general meeting 2016 (3) Sri Ram souharda credit co-operative byndoor annula general meeting 2016 (16)Sri Ram souharda credit co-operative byndoor annula general meeting 2016 (4) Sri Ram souharda credit co-operative byndoor annula general meeting 2016 (5) Sri Ram souharda credit co-operative byndoor annula general meeting 2016 (6) Sri Ram souharda credit co-operative byndoor annula general meeting 2016 (7) Sri Ram souharda credit co-operative byndoor annula general meeting 2016 (8)Sri Ram souharda credit co-operative byndoor annula general meeting 2016 (9) Sri Ram souharda credit co-operative byndoor annula general meeting 2016 (10) Sri Ram souharda credit co-operative byndoor annula general meeting 2016 (11) Sri Ram souharda credit co-operative byndoor annula general meeting 2016 (12) Sri Ram souharda credit co-operative byndoor annula general meeting 2016 (13)Sri Ram souharda credit co-operative byndoor annula general meeting 2016 (14) Sri Ram souharda credit co-operative byndoor annula general meeting 2016 (15)Sri Ram souharda credit co-operative byndoor annula general meeting 2016 (1)

Leave a Reply

Your email address will not be published. Required fields are marked *

four × four =