ದ್ವಿತೀಯ ಪಿಯುಸಿ ಫಲಿತಾಂಶ: ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಹಲವು ರ‍್ಯಾಂಕ್ ಪಡೆಯುವುದರ ಮೂಲಕ ಕಾಲೇಜಿನ ಗರಿಮೆಯನ್ನು ಹೆಚ್ಚಿಸಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮೈತ್ರೇಯಿ (594) ರಾಜ್ಯಕ್ಕೆ ಐದನೇ ರ‍್ಯಾಂಕ್, ಮನಿಷ್ ಆರ್. ಹೆಬ್ಬಾರ್ (592) ಏಳನೇ ರ‍್ಯಾಂಕ್, ಪ್ರಾಚಿ ಎನ್ (590) 9ನೇ ರ‍್ಯಾಂಕ್, ಕಾರ್ತಿಕ್ ಐತಾಳ್ (589) ಹತ್ತನೇ ರ‍್ಯಾಂಕ್ ಪಡೆದಿದ್ದಾರೆ.

Call us

Call us

Visit Now

ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ದೀಕ್ಷಾ ಭಟ್ ಮತ್ತು ಪಂಚಮಿ ಕಿಣಿ (592) ಐದನೇ ರ‍್ಯಾಂಕ್ ಹಾಗೂ ಶ್ರೀಶ (591) 6ನೇ ರ‍್ಯಾಂಕ್, ಕೃತಿಕಾ (590) 7 ನೇ ರ‍್ಯಾಂಕ್, ಅದಿತಿ, ಶ್ರದ್ಧಾ ಸಾಲಿಯಾನ್ (589) ಎಂಟನೇ ರ‍್ಯಾಂಕ್, ದೇವಾಡಿಗ ಅಂಜಲಿ ಚಂದ್ರ, ರಕ್ಷಿತಾ ಆನಂದ ಪೂಜಾರಿ (588) ಒಂಭತ್ತನೇ ರ‍್ಯಾಂಕ್ ಗಳಿಸುವುದರ ಮೂಲಕ 12 ವಿದ್ಯಾರ್ಥಿಗಳು ರಾಜ್ಯದ ಅಗ್ರ ಸ್ಥಾನಿಯರಲ್ಲಿ ಸ್ಥಾನ ಪಡೆದಿರುವುದು ಪ್ರಶಂಸನೀಯ.

Click here

Call us

Call us

ವಾಣಿಜ್ಯ ವಿಭಾಗದಲ್ಲಿ 216 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 120 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 87 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ವಿಜ್ಞಾನ ವಿಭಾಗದಲ್ಲಿ 337 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 166 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 155 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಲೆಕ್ಕಶಾಸ್ತçದಲ್ಲಿ 46 ವಿದ್ಯಾರ್ಥಿಗಳು, ಗಣಿತಶಾಸ್ತçದಲ್ಲಿ 45 ವಿದ್ಯಾರ್ಥಿಗಳು, ಕಂಪ್ಯೂಟರ್ ಸೈನ್ಸ್ನಲ್ಲಿ 26 ವಿದ್ಯಾರ್ಥಿಗಳು, ಸಂಖ್ಯಾಶಾಸ್ತçದಲ್ಲಿ 25 ವಿದ್ಯಾರ್ಥಿಗಳು, ರಸಾಯನಶಾಸ್ತçದಲ್ಲಿ 15 ವಿದ್ಯಾರ್ಥಿಗಳು ಸಂಸ್ಕೃತದಲ್ಲಿ 11 ವಿದ್ಯಾರ್ಥಿಗಳು, ವ್ಯವಹಾರಿಕ ಅಧ್ಯಯನದಲ್ಲಿ 10 ವಿದ್ಯಾರ್ಥಿಗಳು, ಭೌತಶಾಸ್ತçದಲ್ಲಿ 9 ವಿದ್ಯಾರ್ಥಿಗಳು ಕನ್ನಡದಲ್ಲಿ 2 ವಿದ್ಯಾರ್ಥಿಗಳು, ಜೀವಶಾಸ್ತçದಲ್ಲಿ 1 ವಿದ್ಯಾರ್ಥಿ ಅರ್ಥಶಾಸ್ತçದಲ್ಲಿ1 ವಿದ್ಯಾರ್ಥಿ, ಬೇಸಿಕ್ ಮ್ಯಾಥ್ಸ್ 1 ವಿದ್ಯಾರ್ಥಿ, ಹಿಂದಿಯಲ್ಲಿ 1 ವಿದ್ಯಾರ್ಥಿ ವಿಷಯವಾರು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಕಾಲೇಜಿನ ಮೆರುಗನ್ನು ಹೆಚ್ಚಿಸಿದ್ದಾರೆ.

ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ ರಾಧಾಕೃಷ್ಣ ಶೆಣೈ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

13 + ten =