ಎಸ್.ಎಸ್.ಎಲ್‌.ಸಿ ಪರೀಕ್ಷೆ ಫಲಿತಾಂಶ: ಉಡುಪಿ ಜಿಲ್ಲೆಗೆ ಎ ಗ್ರೇಡ್, 7ನೇ ಸ್ಥಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು,ಈ ಕುರಿತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಫಲಿತಾಂಶದ ಮಾಹಿತಿ ನೀಡಿದ್ದಾರೆ.

Call us

Call us

ಈ ಭಾರಿ ಗ್ರೇಡ್ ಪದ್ದತಿ ಇದ್ದು 10 ಜಿಲ್ಲೆಗಳು ಎ ಗ್ರೇಡ್, 20 ಜಿಲ್ಲೆಗಳು ಬಿ ಗ್ರೇಡ್ ಹಾಗೂ 4 ಜಿಲ್ಲೆಗಳು ಸಿ ಗ್ರೇಡ್ ಪಡೆದಿವೆ. (34 ಶೈಕ್ಷಣಿಕ ಜಿಲ್ಲೆಗಳು) ಒಟ್ಟಾರೆ ಶೇ. 71.81 ಫಲಿತಾಂಶ ಈ ಬಾರಿ ಬಂದಿದೆ. ಕಳೆದ ಬಾರಿ ಶೇ.73.70 ರಷ್ಟು ಫಲಿತಾಂಶ ಬಂದಿತ್ತು. ಉಡುಪಿ ಜಿಲ್ಲೆ ಎ ಗ್ರೇಡ್‌ನಲ್ಲಿದ್ದು 7ನೇ ಸ್ಥಾನದಲ್ಲಿದೆ, ಉತ್ತರ ಕನ್ನಡ ಜಿಲ್ಲೆ ಎ ಗ್ರೇಡ್‌ನಲ್ಲಿದ್ದು, 10ನೇ ಸ್ಥಾನದಲ್ಲಿದೆ, ದ.ಕ ಜಿಲ್ಲೆ ಬಿ. ಗ್ರೇಡ್‌ನಲ್ಲಿದ್ದು 12ನೇ ಸ್ಥಾನ ಪಡೆದುಕೊಂಡಿದೆ.

ಎ ಗ್ರೇಡ್ ಜಿಲ್ಲೆಗಳು: ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ, ಉಡುಪಿ, ರಾಮನಗರ, ಹಾಸನ, ಉತ್ತರ ಕನ್ನಡ ಜಿಲ್ಲೆಗಳು, ಬಿ ಗ್ರೇಡ್ ಜಿಲ್ಲೆಗಳು:  ಚಾಮರಾಜನಗರ, ಮಂಗಳೂರು, ಬಳ್ಳಾರಿ, ತುಮಕೂರು, ಸಿರಸಿ, ಬೆಂಗಳೂರು ನಾರ್ಥ್, ದಾವಣಗೆರೆ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕಲಬುರ್ಗಿ, ಕೊಪ್ಪಳ, ಬೀದರ್, ವಿಜಯವಾಡ, ಬಾಗಲಕೋಟೆ, ಧಾರವಾಡ, ರಾಯಚೂರು, ಬೆಂಗಳೂರು ಸೌಥ್, ಚಿಕ್ಕೂಡಿ ಹಾಗೂ ಸಿ ಗ್ರೇಡ್ ಜಿಲ್ಲೆಗಳು:  ಬೆಳಗಾವಿ, ಗದಗ, ಹಾವೇರಿ, ಯಾದಗಿರಿ ಜಿಲ್ಲೆಗಳು ಪಡೆದುಕೊಂಡಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸನ್ನಿಧಿ ಮಹಾಬಲೇಶ್ವರ ಹೆಗಡೆ (ಸಿರಸಿ), ಚಿರಾಯು (ನಾರಸಂದ್ರ) ನಿಖಿಲೇಶ್ ಮರಳಿ (ಬೆಂಗಳೂರು), ಧೀರಜ್ ಶೆಡ್ಡಿ (ಮಾರದೇವನಹಳ್ಳಿ), ಅನುಶ್ (ಸುಬ್ರಹ್ಮಣ್ಯ), ತನ್ಮಯಿ (ಚಿಕ್ಕಮಗಳೂರು) ಈ ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದುಕೊಂಡಿದ್ದಾರೆ.

Call us

ಒಟ್ಟು 6 ವಿದ್ಯಾರ್ಥಿಗಳು 625 ರಲ್ಲಿ 625 ಅಂಕ ಗಳಿಸಿದ್ದಾರೆ. 11 ವಿದ್ಯಾರ್ಥಿಗಳು 625ರಲ್ಲಿ 624 ಅಂಕ, 43 ವಿದ್ಯಾರ್ಥಿಗಳು 623, 56 ವಿದ್ಯಾರ್ಥಿಗಳು 622 ಅಂಕ, 68 ವಿದ್ಯಾರ್ಥಿಗಳು 621 ಹಾಗೂ 117 ವಿದ್ಯಾರ್ಥಿಗಳು 620 ಅಂಕ ಪಡೆದುಕೊಂಡಿದ್ದಾರೆ. 37,450 ವಿದ್ಯಾರ್ಥಿಗಳು ಎ+ ಗ್ರೇಡ್, 10,5,345 ಎ ವಿದ್ಯಾರ್ಥಿಗಳು ಗ್ರೇಡ್, 1,47,801 ಬಿ+ ಗ್ರೇಡ್ ಪಡೆದುಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಈ ಭಾರಿ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ 71.81% ಫಲಿತಾಂಶ ಬಂದಿದೆ. ಸರಕಾರಿ ಶಾಲೆಗಳು 72.79% ಫಲಿತಾಂಶ ದಾಖಲಿಸಿದೆ.  ಒಟ್ಟು 8,11,050 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,82,316 ವಿದ್ಯಾರ್ಥಿಗಳು ಉತ್ತಿರ್ಣ, 2,28,734 ವಿದ್ಯಾರ್ಥಿಗಳು ಅನುತ್ತಿರ್ಣರಾಗಿದ್ದಾರೆ. 18,067 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಮುಂದಿನ ಹಂತದಲ್ಲಿ ಪರೀಕ್ಷೆ ಬರೆಯಲಿದ್ದಾರೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

ಇಲಾಖೆಯ ಅಧಿಕೃತ ಜಾಲತಾಣಗಳಾದ kseeb.kar.nic.in ಅಥವಾ karresults.nic.in ನಲ್ಲಿಯೂ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು.

► ಉಪ್ಪುಂದದ ಸುರಭಿ ಎಸ್. ಶೆಟ್ಟಿ ರಾಜ್ಯಕ್ಕೆ ದ್ವಿತೀಯ. 625ರಲ್ಲಿ 624 ಅಂಕ – https://kundapraa.com/?p=40173 .

 

Leave a Reply

Your email address will not be published. Required fields are marked *

fourteen − 4 =