ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿಗೆ ಬಂದಿದೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಜಾರಿಗೆ ಬರುವಂತೆ ಹೊಸ ನಿಯಮಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ವಿದ್ಯಾಗಮ ಸೇರಿದಂತೆ 6-9ನೇ ತರಗತಿ ಸ್ಥಗಿತ, ಜಿಮ್, ಪಾರ್ಟಿ ಹಾಲ್, ಕ್ಲಬ್, ಈಜು ಕೊಳ ಬಂದ್, ರ್ಯಾಲಿ ಮುಷ್ಕರಗಳಿಗೆ ನಿಷೇಧ, ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಗದಿಪಡಿಸಿದ ಆಸನ ಸಂಖ್ಯೆ ಮೀರುವಂತಿಲ್ಲ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣಕನ್ನಡ, ಉಡುಪಿ, ಕಲಬುರಗಿ, ಧಾರವಾಡ, ಮೈಸೂರು, ಬೀದರ್ ಜಿಲ್ಲೆಗಳಲ್ಲಿ ಸಿನೆಮಾ ಹಾಲ್ 50% ಮೀರುವಂತಿಲ್ಲ, ಪಬ್, ಬಾರ್, ರೆಸ್ಟೊರೆಂಟ್, ಬಾರಿನಲ್ಲಿ 50% ಹೆಚ್ಚಿನ ಗ್ರಾಹಕರು ಸೇರುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಜಾತ್ರಾ ಮಹೋತ್ಸವ, ಮೇಳಗಳು ಗುಂಪು ಸೇರುವುದು ನಿಷೇಧ ಸೇರಿದಂತೆ ಟಫ್ ರೂಲ್ಸ್ ಜಾರಿಯಾಗಿದೆ.
ಏಪ್ರಿಲ್ 20ರವರೆಗೆ ಈ ಕೆಳಗಿನ 16 ನಿಯಮಗಳು ಜಾರಿಯಲ್ಲಿರಲಿದೆ.