ಕೇಂದ್ರ ಸರ್ಕಾರದ ಯೋಜನೆಗೆ ಸಿದ್ದರಾಮಯ್ಯ ಶಿಲಾನ್ಯಾಸ: ಬಿಜೆಪಿ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇಂದ್ರ ಸರ್ಕಾರ ರಾಜ್ಯಕ್ಕೆ ಹಲವಾರು ಯೋಜನೆ, ಅನುದಾನ ನೀಡಿದ್ದರೂ ಸಂಬಂಧಪಟ್ಟ ಸಂಸದರು, ಕೇಂದ್ರ ಸರ್ಕಾರ ಅಧಿಕಾರಿಗಳ ಗಮನಕ್ಕೂ ತಾರದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆಗಳ ಇಂಪ್ಲಿಮೆಂಟ್ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡದೆ, ತನ್ನದೇ ಯೋಜನೆ ಎಂದು ಪ್ರತಿಬಿಂಬಿಸುತ್ತಿದೆ. ಕೇಂದ್ರ ಸರ್ಕಾರದ ಅನುದಾನ, ಯೋಜನೆಗಳ ಕೂಸಿಗೆ ರಾಜ್ಯ ಸರ್ಕಾರ ನಾಮಕರಣ ಮಾಡುತ್ತಿದೆ ಎಂದು ಸಂಸದ ಬಿ.ಎಸ್.ಯಡಿಯೂರಪ್ಪ ಆಪ್ತ ಕಾರ‍್ಯದರ್ಶಿ ಪುರುಷೋತ್ತಮ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡವರು.

ಕುಂದಾಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದ ಬಿ. ಎಸ್. ಯಡಿಯೂರಪ್ಪ ಬೈಂದೂರು ಕ್ಷೇತ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದು, ಆ ಯೋಜನೆಗಳ ಶಿಲಾನ್ಯಾಸಕ್ಕೆ ಎಲ್ಲಾ ನಿಯಮ ಗಾಳಿಗೆ ತೂರಿ, ತಮ್ಮದೇ ಸಾಧನೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದು, ಇದು ಗೌರವ ತರುವ ಸಂಗತಿಯಲ್ಲ. ಕೇಂದ್ರ ಸರ್ಕಾರದಯೋಜನೆ ಹಾಗೂ ಅನುದಾನದ ಕಾರ‍್ಯಕ್ರಮಗಳಿಗೆ ಸಂದರನ್ನೂ ಕರೆಯುವ ಸೌಜನ್ಯ ತೋರಿಸಬೇಕು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಸದಸ್ಯರಾದ ನಂತರ ವಿವಿಧ ಯೋಜನೆಗಳ ಮೂಲಕ ಕೋಟಿ ಲೆಕ್ಕದಲ್ಲಿ ಅನುದಾನ ತಂದಿದ್ದಾರೆ. ತಾರಾಪತಿ, ಸೌಡ, ಆಲೂರು ಸೇತುವೆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಿ, ಮಂಜೂರು ಮಾಡಿಕೊಂಡಿದ್ದು, ಟೆಂಡರ್ ಮುಗಿದಿದೆ. ಸಧ್ಯದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಈ ಭಾಗದಜನರ ಬಹುದಿನದ ಕನಸು ಈಡೇರಲಿದೆ ಎಂದರು. ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಕೆರಾಡಿ ಗ್ರಾಮ ಆಯ್ಕೆಮಾಡಿಕೊಂಡಿದ್ದು, 1079 ಕುಟುಂಬಗಳ ಬೇಸ್ಲೈನ್ ಸರ್ವೆ ಮಾಡಿ, ಆನ್‌ಲೈನ್‌ನಲ್ಲಿ ಅಳವಡಿಸಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 31.89 ಕೋಟಿ, ಎಂಪಿ ಫಂಡ್‌ನಲ್ಲಿ 10 ಕಾಮಗಾರಿ, ಎಂಎಲ್ಸಿ ಫಂಡ್‌ನಲ್ಲಿ 6 ಕಾಮಗಾರಿ ಮಾಡಲಾಗಿದ್ದು, ಕಪ್ಪನಕೆರೆ ರಸ್ತೆ ಅಭಿವೃದ್ಧಿ ಮಾಡಲಾಗಿದೆ.

30 ಲಕ್ಷರೂ ವೆಚ್ಚದಲ್ಲಿ ಆರೋಗ್ಯಉಪಕೇಂದ್ರ, 15 ಲಕ್ಷ ವೆಚ್ಚದಲ್ಲಿ ಆಯುರ್ವೇದ ಚಿಕಿತ್ಸಾ ಕಟ್ಟಡ, ಬಸವ ವಸತಿಯಲ್ಲಿ ಒಟ್ಟು 57 ಮನೆ, ಅಂಬೇಡ್ಕರ್ ವಸತಿ ಯೋಜನೆಯಲ್ಲಿ 18, ಇಂದಿರಾ ಆವಾಜ್ ಯೋಜನೆಯಲ್ಲಿ 17 ಮನೆ ನೀಡಲಾಗಿದೆ. 6.46 ಲಕ್ಷರೂ ತೋಟಗಾರಿಕಾ ಇಲಾಖೆ ವತಿಯಿಂದ ವಿತರಿಸಲಾಗಿದೆ. 10 ಲಕ್ಷವೆಚ್ಚದಲ್ಲಿ ಕಿಂಡಿಆಣೆಕಟ್ಟು, 20 ಲಕ್ಷಕುಡಿಯುವ ನೀರು ಯೋಜನೆ, 34 ಲಕ್ಷದಲ್ಲಿ ಎರಡು ಕೊಳವೆ ಬಾವಿ, 10 ಕೊರಗಕುಟುಂಬಕ್ಕೆ ವಸತಿ ಸೌಲಭ್ಯ ಎಸ್ಸಿಎಸ್ಟಿ ಕಾಲೋನಿ ರಸ್ತೆಅಭಿವೃದ್ಧಿಗೆ 1 ಕೋಟಿ , ಹಾಗೂ ವಿವಿಧ ಯೋಜನೆಗಳ ಮೂಲಕ ಕ್ಷೇತ್ರಕ್ಕೆ 75 ಲಕ್ಷಕ್ಕೂ ಮಿಕ್ಕ ಹಣ ವಿನಿಯೋಗಿಸಲಾಗಿದೆ ಎಂಬ ಮಾಹಿತಿ ನೀಡಿದರು.

ರಾಜ್ಯ ಬಿಜೆಪಿ ಕಾರ‍್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ ಶಿವಮೊಗ್ಗ ಲೋಕಸಭಾ ಸದಸ್ಯೆ ಬಿ.ಎಸ್.ಯಡಿಯೂರಪ್ಪ ಬೈಂದೂರು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಯೋಜನೆತಂದಿದ್ದು, ಅದೆಲ್ಲವನ್ನೂ ತಮ್ಮದೆ ಸರ್ಕಾರದ ಸಾಧನೆ ಎಂದು ಪ್ರಚಾರ ಮಾಡಲಾಗುತ್ತಿದೆ. ಕೊನೆ ಪಕ್ಷ ಸೌಜನ್ಯಕ್ಕಾದರೂ ಕಾರ‍್ಯಕ್ರಮಗಳ ಅನುಷ್ಠಾನ, ಶಿಲಾನ್ಯಾಸಕ್ಕೆ ಸಂಸದರ ಕರೆಯುವ ಸೌಜನ್ಯ ಕೂಡಾ ತೋರುತ್ತಿಲ್ಲ. ಕಳೆದ ಮೂರು ವರ್ಷದಲ್ಲಿ ಬೈಂದೂರು ಕ್ಷೇತ್ರಕ್ಕೆ ವಿವಿಧ ಯೋಜನೆ ಮೂಲಕ ಕೋಟ್ಯಾಂತರ ಅನುದಾನತಂದಿದ್ದು, ಬೈಂದೂರು ಕ್ಷೇತ್ರದ ಪ್ರಮುಖ ಮೂರು ಸಂಪರ್ಕ ಸೇತುವೆ ಮಂಜೂರು ಮಾಡಿಸಿಕೊಂಡಿದ್ದಲ್ಲದೆ, ಸೇತುವೆಗಳ ಟೆಂಡರ್ ನಡೆದ, ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದರು.

ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೀವ ಶೆಟ್ಟಿ ಇದ್ದರು.

 

Leave a Reply

Your email address will not be published. Required fields are marked *

4 × 2 =