ಎ.28ರಿಂದ ರಾಜ್ಯಮಟ್ಟದ ಕ್ರಿಕೆಟ್: ಬೈಂದೂರು ಟ್ರೋಫಿ 2017

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸ್ಪೋರ್ಟ್ಸ್ ಕ್ಲಬ್ ರಿ. ಬೈಂದೂರು ಆಶ್ರಯದಲ್ಲಿ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ‘ಬೈಂದೂರು ಟ್ರೋಪಿ 2017’ ಎಪ್ರಿಲ್ 28, 29, 30ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ಜರುಗಲಿದೆ.

Call us

Call us

Call us

ಬೈಂದೂರು ಟ್ರೋಫಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 2,00,001 ಹಾಗೂ ಆಕರ್ಷಕ ಟ್ರೋಫಿ ದೊರೆಯಲಿದ್ದು ದ್ವಿತೀಯ ಬಹುಮಾನ 1,00,001 ಹಾಗೂ ಆಕರ್ಷಕ ಟ್ರೋಫಿ ಇರಲಿದೆ. ಸರಣಿ ಶ್ರೇಷ್ಠ, ಪಂದ್ಯ ಪುರುಷೋತ್ತಮ, ಉತ್ತಮ ಎಸೆತಗಾರ, ಉತ್ತಮ ಕ್ಷೇತ್ರ ರಕ್ಷಕ ಉತ್ತಮ ಗೂಟ ರಕ್ಷಕ, ಉತ್ತಮ ದಾಂಡಿಗ ಮೊದಲಾದ ಬಹುಮಾನಗಳೊಂದಿಗೆ ಟ್ರೋಫಿ ಆಟಗಾರರಿಗೆ ದೊರೆಯಲಿದೆ.

ಎ.28ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ರಿದಂ ನೃತ್ಯ ಶಾಲೆ ಬೈಂದೂರು ಇವರಿಂದ ನೃತ್ಯ ವೈಭವ, ರಾಜಾಯದು ಉಡುಪಿ ಹಾಗೂ ಜ್ಯೂನಿಯರ್ ರಾಜಕುಮಾರ್ ಖ್ಯಾತಿಯ ಶ್ರೀರಾಮ ಬೈಂದೂರು ಇವರಿಂದ ಸಂಗೀತ ರಸಸಂಜೆ ಜರುಗಲಿದೆ.

ಎ.30ರಂದು ಸಮಾರೋಪ ಸಮಾರಂಭ ಅದ್ದೂರಿಯಾಗಿ ಜರುಗಲಿದ್ದು ಸಾಧಕರಿಗೆ ಸನ್ಮಾನ ಹಾಗೂ ಹಲವು ವೈವಿಧ್ಯಗಳು, ವಿಜೇತರಿಗೆ ಬಹುಮಾನ ವಿತರಣೆ ಜರುಗಲಿದೆ. ಬೈಂದೂರಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿವಂತೆ ಸಂಘಟಕರು ಕೋರಿದ್ದಾರೆ.

Leave a Reply

Your email address will not be published. Required fields are marked *

5 × 5 =