ಉಡುಪಿ ಜಿಲ್ಲೆ: ಮಕ್ಕಳು, ಗರ್ಭಿಣಿಯರಿಗೆ ನೀಡಲಾಗುತ್ತಿದ್ದ ಚುಚ್ಚುಮದ್ದು ಸೇವೆ ಪುನರಾರಂಭ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಲಾಕ್ ಡೌನ್ ನಿಂದ ಐದು ವರ್ಷದೊಳಗಿನ ಮಕ್ಕಳಿಗೆ ವಿವಿಧ ಹಂತದಲ್ಲಿ ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಚುಚ್ಚುಮದ್ದುಗಳನ್ನು ನಿಲ್ಲಿಸಲಾಗಿದ್ದು, ಗುರುವಾರದಿಂದ ಎಂದಿನಂತೆ ಈ ಚುಚ್ಚುಮದ್ದುಗಳನ್ನು ನೀಡಲಾಗುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.

Call us

Call us

ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸೋಮವಾರ ದಿಂದ ಶನಿವಾರದ ವರೆಗೆ ಮತ್ತು ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತೀ ಗುರುವಾರ, 1.5, 2.5, 3.5 ಮತ್ತು 9 ತಿಂಗಳು ಮಕ್ಕಳಿಗೆ ನೀಡುವ ವಿವಿಧ ಲಸಿಕೆಗಳು ಹಾಗೂ ಗರ್ಭಿಣಿಯರಿಗೆ ನೀಡಲಾಗುವ ಟಿಡಿ ಲಸಿಕೆಯನ್ನು ನೀಡಲಾಗುವುದು ಎಂದು ಡಾ. ಸೂಡಾ ತಿಳಿಸಿದ್ದಾರೆ.

ಲಸಿಕೆ ತೆಗೆದುಕೊಳ್ಳಲು ವಾಹನಗಳಲ್ಲಿ ಬರುವಾಗ ತಾಯಿ ಕಾರ್ಡ್ ಅಥವಾ ಲಸಿಕೆ ಕಾರ್ಡ್ ಗಳನ್ನು ಪೊಲೀಸರಿಗೆ ತೋರಿಸುವ ಮೂಲಕ , ಆರೋಗ್ಯ ಕೇಂದ್ರಕ್ಕೆ ಬರಲು ಲಾಕ್‌ಡೌನ್ ನ ನಿರ್ಬಂಧವಿರುವುದಿಲ್ಲ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ.ರಾಮ ಸ್ಪಷ್ಟಪಡಿಸಿದ್ದಾರೆ.

Call us

Call us

Leave a Reply

Your email address will not be published. Required fields are marked *

15 + thirteen =