ಕುಂದಾಪುರ: ಬ್ಯಾಂಕಿನಲ್ಲಿ ಸರತಿ ಸಾಲಿನಲ್ಲಿ ನಿಂತ ಜನರಿಗೆ ನೆರವಾದ ವಿದ್ಯಾರ್ಥಿಗಳು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಳೆಯ ೫೦೦, ೧೦೦೦ ನೋಟುಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್, ಪೋಸ್ಟ್ ಆಫೀಸ್‌ಗಳಲ್ಲಿ ಜನರ ಸರತಿಸಾಲು ನಿಂತು ಅರ್ಜಿ ತುಂಬಿಸಲು ಪರದಾಡುತ್ತಿರುವ ಜನರಿಗೆ ಕುಂದಾಪುರ ಎಜುಕೇಶನ್ ಸೊಸೈಟಿಯ ವಿ. ಕೆ. ಆರ್ ಆಚಾರ್ಯ ಹಾಗೂ ಎಚ್ ಎಮ್ ಎಮ್ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನೆರವಾದರು.

Call us

Call us

ಕುಂದಾಪುರದ ವಿಜಯ, ಕಾರ್ಪೊರೇಶನ್, ಕೆನರಾ, ಎಸ್. ಬಿ. ಎಮ್, ಸಿಂಡಿಕೇಟ್ ಬ್ಯಾಂಕ್‌ಗಳಿಗೆ ಶಿಕ್ಷಕರೊಡಗೂಡಿ ತೆರಳಿದ ಇಪ್ಪತ್ತು ವಿದ್ಯಾರ್ಥಿಗಳು ಬ್ಯಾಂಕಿನ ಗ್ರಾಹಕರಿಗೆ ಸಹಾಯ ಹಸ್ತವನ್ನು ನೀಡಿದರು. ಸಂಸ್ಥೆಯ ಸಂಚಾಲಕರಾದ ಬಿ. ಎಮ್. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಚಿಂತನಾ ರಾಜೇಶ್ ಇಂತಹ ಅಪೂರ್ವ ಕಾರ್ಯವನ್ನು ತಮ್ಮ ಸಂಸ್ಥೆಯ ಮೂಲಕ ಹಮ್ಮಿಕೊಂಡು ಸಾರ್ವಜನನಿಕರಿಗೆ ಸಹಕರಿಸಿ ಬದಲಾವಣೆಯಲ್ಲಿ ಅಳಿಲುಸೇವೆ ಸಲ್ಲಿಸಿರುವುದಕ್ಕೆ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

5 × two =