ಎ.26: ರಂಗಮನೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ

Call us

ಸುಳ್ಯ: ಹಳೆಗೇಟಿನ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಏಪ್ರಿಲ್ 26ರಿಂದ ಯಕ್ಷಗಾನ ನಾಟ್ಯ ತರಬೇತಿ ಆರಂಭಗೊಳ್ಳಲಿದೆ. ಯಕ್ಷಗುರು ಶ್ರೀ ಸಬ್ಬಣಕೋಡಿ ರಾಮಭಟ್‌ ನಾಟ್ಯ ತರಬೇತಿಯನ್ನು ನೀಡಲಿದ್ದಾರೆ.
ಉಳಿದಂತೆ ಯಕ್ಷಗಾನದ ವಿವಿಧ ಪ್ರಾಕಾರಗಳ ತರಬೇತಿ ನೀಡಲು ಅತಿಥಿ ಗುರುಗಳಾಗಿ ಮತ್ತು ಮಾರ್ಗದರ್ಶಕರಾಗಿ ಯಕ್ಷಗಾನದ ಪ್ರಸಿದ್ಧ ಹಿರಿಯ ಕಲಾವಿದರಾದ ಶ್ರೀ ಕೋಳ್ಯೂರು ರಾಮಚಂದ್ರ ರಾವ್, ಸೂರಿಕುಮೇರಿ ಗೋವಿಂದ ಭಟ್, ದೇವಕಾನ ಕೃಷ್ಣಭಟ್, ಪೆರುವೋಡಿ ನಾರಾಯಣ ಭಟ್, ಎಂ.ಎಲ್.ಸಾಮಗ, ಬನ್ನಂಜೆ ಸಂಜೀವ ಸುವರ್ಣ, ಕುಂಬಳೆ ಸುಂದರ ರಾವ್, ಡಾ.ಪ್ರಭಾಕರ ಜೋಶಿ, ಕುಮಾರ ಸುಬ್ರಹ್ಮಣ್ಯ, ಮಹಾಬಲ ಕಲ್ಮಡ್ಕ, ತಾರಾನಾಥ ಬಲ್ಯಾಯ ವರ್ಕಾಡಿ ಮುಂತಾದವರು ಸಂದರ್ಭೋಚಿತವಾಗಿ ಭಾಗವಹಿಸಲಿದ್ದಾರೆ. ಹೆಜ್ಜೆಗಾರಿಕೆ, ಮಾತುಗಾರಿಕೆ, ವಸ್ತ್ರವಿನ್ಯಾಸ, ಬಣ್ಣಗಾರಿಕೆ, ಪುರಾಣ ವಾಚನ, ಹಿಮ್ಮೇಳ, ಧ್ವನಿ, ಬೆಳಕು ಇತ್ಯಾದಿಗಳನ್ನು ನಾಟ್ಯದ ಜೊತೆಜೊತೆಗೆ ತರಬೇತಿ ನೀಡುವ ಈ ಕೇಂದ್ರದ ವಿದ್ಯಾರ್ಥಿಗಳಾಗ ಬಯಸುವವರು ಎಪ್ರಿಲ್ 21ರೊಳಗೆ ಹೆಸರು ನೋಂದಾಯಿಸಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗಾಗಿ 9448215946(ಜೀವನ್‌ರಾಂ ಸುಳ್ಯ), 9449831600(ಪ್ರಕಾಶ ಮೂಡಿತ್ತಾಯ), 9448951859 (ಡಾ|ಸುಂದರ ಕೇನಾಜೆ) ಇವರಿಗೆ ಫೋನಾಯಿಸಬಹುದು ಎಂದು ರಂಗಮನೆಯ ರೂವಾರಿ ಜೀವನ್‌ರಾಂ ಸುಳ್ಯ ತಿಳಿಸಿದ್ದಾರೆ.

Call us

Call us

Leave a Reply

Your email address will not be published. Required fields are marked *

17 − 6 =