ಬಿಜೂರು: ತಂದೆ ತಾಯಿಗೆ ಹಲ್ಲೆಗೈದ ಮಗ ಮನನೊಂದು ಆತ್ಮಹತ್ಯೆಗೆ ಶರಣು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಂದೆ ತಾಯಿಗೆ ಹಲ್ಲೆ ನಡೆಸಿದ ಕಾರಣಕ್ಕೆ ಮನನೊಂದು ಮಗನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬಿಜೂರು ಸಾಲಿಮಕ್ಕಿಯ ಉಡುಪರಅಡಿ ಎಂಬಲ್ಲಿ ನಡೆದಿದೆ. ಉಡುಪರ ಅಡಿ ನಿವಾಸಿ ಮಂಜು ಪೂಜಾರಿ ಎಂಬುವವರ ಪುತ್ರ ರಾಘವೇಂದ್ರ (32) ಮೃತ ಯುವಕ.

ಉಡುಪರ ಅಡಿಯಲ್ಲಿ ತಂದೆ ತಾಯಿಯೊಂದಿಗೆ ವಾಸವಿದ್ದ ರಾಘವೇಂದ್ರ, ದೇವರ ದರ್ಶನಕ್ಕಾಗಿ ಧರ್ಮಸ್ಥಳಕ್ಕೆ ತೆರಳಿ ಇಂದು ಬೆಳಿಗ್ಗೆ ಸುಮಾರಿಗೆ ಮನೆಗೆ ಮರಳಿದ್ದಾರೆ. ಮನೆಯಲ್ಲಿ ಬಾಗಿಲು ತೆರೆಯಲು ತಡವಾಯಿತು ಎಂಬ ಕಾರಣಕ್ಕೆ ತಾಯಿ ಹಾಗೂ ತಂದೆಗೆ ಅಲ್ಲೇ ಇದ್ದ ಕೋಲಿನಿಂದ ಹಲ್ಲೆ ನಡೆಸಿ ಬಳಿಕ ಅಲ್ಲಿಂದ ಹೊರಕ್ಕೆ ನಡೆದಿದ್ದಾರೆ. ಹೊರಗೆಲ್ಲೊ ಇರಬಹುದು ಎಂದು ತಂದೆ ತಾಯಿ ಇಬ್ಬರೂ ಬಾವಿಸಿ ಸುಮ್ಮನಾಗಿದ್ದರು. ಆದರೆ ಬೆಳಿಗ್ಗೆಯ ವೇಳೆಗೆ ಬಾವಿಯನ್ನು ನೋಡುವಾಗ ಮಗ ಮೃತಪಟ್ಟಿರುವುದು ತಿಳಿದುಬಂದಿತ್ತು. ಕುಂದಾಪ್ರ ಡಾಟ್ ಕಾಂ.

ಘಟನಾ ಸ್ಥಳಕ್ಕೆ ಎಸ್ಪಿ ಡಾ. ಸಂಜೀವ ಪಾಟೀಲ್, ಡಿವೈಎಸ್ಪಿ ಪ್ರವೀಣ ನಾಯ್ಕ್, ಬೈಂದೂರು ವೃತ್ತನಿರೀಕ್ಷಕ ರಾಘವ ಪಡೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ರಾಘವೇಂದ್ರ ಅವರ ಹಲ್ಲೆಗೊಂಡಿರುವ ತಂದೆ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ ಮೊದಲಾದವರು ಭೇಟಿ ನೀಡಿದರು.

Leave a Reply

Your email address will not be published. Required fields are marked *

5 × 5 =