ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸೆಲೂನ್‌ಗಳಿಗೆ ಭಾನುವಾರ ಹೆಚ್ಚಿನ ಜನರು ತೆರಳುವ ರೂಢಿಯಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುವುದರಿಂದ ಮಂಗಳವಾರದ ಬದಲಿಗೆ ಭಾನುವಾರವೇ ಸೆಲೂನ್‌ಗಳಿಗೆ ರಜೆ ಘೋಷಿಸುವ ನಿರ್ಣಯಕ್ಕೆ ಬರಲಾಗಿದೆ.
ಉಡುಪಿಯ ಅಂಬಲಪಾಡಿ ಜಿಲ್ಲಾ ಸವಿತಾ ಸಮಾಜ ಕಟ್ಟಡದಲ್ಲಿ ಜಿಲ್ಲಾಧ್ಯಕ್ಷರಾದ ಭಾಸ್ಕರ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯ ಪದಾಧಿಕಾರಿಗಳು, ಏಳು ತಾಲೂಕುಗಳ ವಲಯ, ಘಟಕಗಳ ಅಧ್ಯಕ್ಷರು, ಸದಸ್ಯರ ತೀರ್ಮಾನದಂತೆ, ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡಿರುವ ಈ ನಿರ್ಣಯಕ್ಕೆ ಸವಿತಾ ಸಮಾಜದ ಬಂಧುಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಉಡುಪಿ ಜಿಲ್ಲೆ: ಬುಧವಾರ 62 ಕೊರೋನಾ ಪಾಸಿಟಿವ್ – https://kundapraa.com/?p=38228 .
► ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=38242 .
► ಉಡುಪಿ ಜಿಲ್ಲೆಯಲ್ಲಿ ಶೀಘ್ರ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್: ಡಾ. ಸುಧಾಕರ್ – https://kundapraa.com/?p=38214 .
► ಉಡುಪಿ ಜಿಲ್ಲೆಗಿಂದು ಅಮಂಗಳ: ಒಂದೇ ದಿನ 150 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38168 .
► ಕುಂದಾಪುರ ತಾಲೂಕು ಆಸ್ಪತ್ರೆ ಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ. ಸೇವೆಗಳು ಕೋಟಕ್ಕೆ ಶಿಫ್ಟ್: ಡಿಸಿ – https://kundapraa.com/?p=38175 .