ಮಾ.10ರಿಂದ ಸುರಭಿ ಆಶ್ರಯದಲ್ಲಿ ತ್ರಿದಿನ ನಾಟಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಸ್ಕೋರ್ಡ್ ಟ್ರಸ್ಟ್ ರಿ. ಹಾಗೂ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ತ್ರಿದಿನ ನಾಟಕೋತ್ಸವ ರಂಗ ಸುರಭಿ – ೨೦೧೯ ಮಾರ್ಚ್ ೧೦ರಿಂದ ೧೨ವರೆಗೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ ಗಂಟೆ ೬-೩೦ಕ್ಕೆ ಜರುಗಲಿದೆ.

ಮಾರ್ಚ್ 10ರ ಭಾನುವಾರ ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಸುರಭಿ ರಿ. ಬೈಂದೂರು’ ಪ್ರಸ್ತುತಿಯ ಗಣೇಶ್ ಎಂ. ಉಡುಪಿ ನಿರ್ದೇಶನದ ನಾಟಕ ‘ಚೋಮನ ದುಡಿ’ ಪ್ರದರ್ಶನಗೊಳ್ಳಲಿದೆ. ಮಾರ್ಚ್ 11ರ ಸೋಮವಾರ ಎಸ್. ಎನ್. ಸೇತೂರಾಮ್ ಕಥೆ ಸಂಭಾಷಣೆ ಆಧಾರಿತ ಭೂಮಿಕಾ ಹಾರಾಡಿ ಪ್ರಸ್ತುತಿಯ, ಬಿ.ಎಸ್ ರಾಂ ಶೆಟ್ಟಿ ಹಾರಾಡಿ ನಿರ್ದೇಶನದ ’ಕಾತ್ಯಾಯಿನಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ಮಾಚ್ 12 ಮಂಗಳವಾರ ವಿಜಯ ತೆಂಡುಲ್ಕರ್‌ರವರ ಮರಾಠಿ ಮೂಲಕದ ಕೃತಿ ಆಧಾರಿತ ವೆಂಕಟೇಶ ಪ್ರಸಾದ ಅನುವಾದ ಹಾಗೂ ನಿರ್ದೇಶನದ ’ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಪ್ರಸ್ತುತಿಯ ’ಒಂದು ಪ್ರೀತಿಯ ಕಥೆ’ ನಾಟಕ ಪ್ರದರ್ಶನಗೊಳ್ಳಲಿ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

thirteen + 6 =