ಎ24-26- ಸುರಭಿ ಕಲಾಸಿರಿ ಸಾಂಸ್ಕ್ರತಿಕ ವೈಭವ

Call us

kala siri surabhi

Call us

Call us

ಬೈಂದೂರು: ಇಲ್ಲಿನ ಕಲಾಸಂಸ್ಥೆ ಸುರಭಿಯ ಆಶ್ರಯದಲ್ಲಿ ಬೈಂದೂರಿನ ಮನ್ಮಹಾರಥೋತ್ಸವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ ಗಂಟೆ 6 ಕ್ಕೆ ನಾಲ್ಕು ದಿನಗಳ ಸಾಂಸ್ಕ್ರತಿಕ ವೈಭವ (ರಂಗೋತ್ಸವ – ನೃತ್ಯೋತ್ಸವ – ಯಕ್ಷೋತ್ಸವ – ರಂಗವೈಭವ) ಅನಾವರಣಗೊಳ್ಳಲಿದೆ.

ಎಪ್ರಿಲ್ 24ರಂದು ಉಡುಪಿಯ ಕೊಡವೂರಿನ ನೃತ್ಯ ನಿಕೇತನ ಕಲಾತಂಡದಿಂದ ನೃತ್ಯ ಸಿಂಚನ, ಎ.25ರಂದು ಬ್ರಹ್ಮಾವರದ ಭೂಮಿಕಾ ಹಾರಾಡಿ ರಂಗತಂಡದಿಂದ ಅಗ್ನಿ ಲೋಕ ನಾಟಕ, ಎ.26 ರಂದು ಸುರಭಿ ಬೈಂದೂರಿನ ಆಯ್ದ ಹಿರಿಯ ಕಲಾವಿದರಿಂದ ವೀರವೃಷಸೇನ ಯಕ್ಷಗಾನ, ದಿನಾಂಕ ೨೯-೦೪-೨೦೧೫ ರಂದು ನೀನಾಸಂ ಪದವೀಧರರ ರಂಗ ತಂಡ ಥಿಯೇಟರ್ ಸಮುರಾಯ್ ಸಾಗರ ಇವರಿಂದ ಹಸಿದ ಕಲ್ಲುಗಳು ನಾಟಕ ನಡೆಯಲಿದ್ದು, ಹಿರಿಯಪತ್ರಕರ್ತ ಶ್ರೀ ಎಸ್ ಜನಾರ್ಧನ ಮರವಂತೆಯವರ ಸಮಾರೋಪ ನುಡಿಗಳೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

14 − 14 =