ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಂಗೀತ, ಕಲೆ, ಸಂಸ್ಕೃತಿಯ ಉಪಾಸನೆ ಇದ್ದಲ್ಲಿ ಮನುಷ್ಯ ಮನುಷ್ಯನಾಗಿರುತ್ತಾನೆ. ಅಂತಹದ್ದೊಂದು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಪ್ರಜ್ಞಾವಂತ ಸಮಾಜದ ಜವಾಬ್ದಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಅವರು ಸುರಭಿ ರಿ. ಬೈಂದೂರು ಹಾಗೂ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಂಗ ಸುರಭಿ ೨೦೨೦ – ಶಿಶಿರ ನಾಟಕೋತ್ಸವ ಎರಡನೇ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯ ಜೀವವಿಮಾ ಅಭಿವೃದ್ಧಿ ಅಧಿಕಾರಿ ಸೋಮನಾಥನ್ ಆರ್, ಬೈಂದೂರು ಶಿಶುಮಂದಿರದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಬೈಂದೂರು ಡಾ. ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಲಕ್ಷ್ಮಣ ಯಡ್ತರೆ, ಬೈಂದೂರು ಮಾದರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್, ಉದ್ಯಮಿ ಕೆ.ಎ ಸತೀಶ್ ಉಡುಪಿ, ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ವೈ. ಕೊರಗ ಉಪಸ್ಥಿತರಿದ್ದರು.
ಗಾಯಕಿ ಗೀತಾ ಬಂಕೇಶ್ವರ ಅವರನ್ನು ಸನ್ಮಾನಿಸಲಾಯಿತು. ಸುರಭಿ ಸದಸ್ಯ ಸುಬ್ರಹ್ಮಣ್ಯ ಗಾಣಿಗ ತಗ್ಗರ್ಸೆ ಸ್ವಾಗತಿಸಿ, ಗಣೇಶ್ ಟೈಲರ್ ತಗ್ಗರ್ಸೆ ವಂದಿಸಿದರು. ಜೊತೆಕಾರ್ಯದರ್ಶಿ ರಾಘವೇಂದ್ರ ಕೆ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗಾಯಣ ಮೈಸೂರು ಪ್ರಸ್ತುತಿಯ, ಗಿರೀಶ್ ಕಾರ್ನಾಡ್ ರಚಿಸಿ, ಚಿಂದಬರ್ ರಾವ್ ಜಂಬೆ ನಿರ್ದೇಶಿಸಿದ ಬೆಂದಕಾಳು ಆನ್ ಟೋಸ್ಟ್ ನಾಟಕ ಪ್ರದರ್ಶನಗೊಂಡಿತು.