ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ನಮ್ಮದಲ್ಲದ ವ್ಯಕ್ತಿತ್ವವನ್ನು ಅಭಿನಯಿಸುವ ಮೂಲಕ ರಂಗಭೂಮಿಯಲ್ಲಿ ಸರಿ ತಪ್ಪುಗಳನ್ನು ವಿಮರ್ಷಿಸುವ ಕಾರ್ಯವಾಗುತ್ತದೆ. ಇದರಿಂದಲೇ ಬದುಕು ಹಾಗೂ ಮನುಷ್ಯತ್ವವನ್ನು ಕಟ್ಟಿಕೊಳ್ಳಲು, ಮನುಷ್ಯ ಸಂಬಂಧ ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿದೆ ಎಂದು ರಂಗಭೂಮಿ ಹಾಗೂ ಕಿರುತೆರೆ ನಟ ಪ್ರದೀಪಚಂದ್ರ ಕುತ್ಪಾಡಿ ಹೇಳಿದರು.
ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ 2021 ಮೂರು ದಿನಗಳ ನಾಟಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ದಿನದ ಗೌರವ ಸ್ವೀಕರಿಸಿ ಮಾತನಾಡಿ ಕನ್ನಡದ ಮೇರು ಕೃತಿಗಳನ್ನು ರಂಗಕ್ಕೆ ತರುವ ಮೂಲಕ ಸುರಭಿ ಸಂಸ್ಥೆಯು ಹೊಸ ಪ್ರಯತ್ನಗಳಿಗೆ ತೆರೆದುಕೊಳ್ಳುತ್ತಲೇ ಬಂದಿರುವುದು ಶ್ಲಾಘನಾರ್ಹ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮಾಲಿನಿ ಕೆ., ಲೇಖಕ ಹಾಗೂ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ, ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಶೆಟ್ಟಿ, ಶಿರೂರು ಜೆಸಿಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣ್ಕರ್, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಪೂಜಾರಿ, ಜೆಸಿಐ ಉಪ್ಪುಂದದ ಅಧ್ಯಕ್ಷ ಪುರುಷೋತ್ತಮ್ ದಾಸ್ ಉಪಸ್ಥಿತರಿದ್ದರು.
ಸುರಭಿ ರಿ. ಬೈಂದೂರು ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಕಾರ್ಯದರ್ಶಿ ಭಾಸ್ಕರ ಬಾಡ ವಂದಿಸಿದರು. ಸದಸ್ಯರಾದ ರಾಘವೇಂದ್ರ ಕೆ. ಪಡುವರಿ, ಸೌಮ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಸ್ತುತಪಡಿಸಿದ, ಶಶಿರಾಜ್ ಕಾವೂರು ರಚಿಸಿ ನಿರ್ದೇಶಿಸಿದ ‘ದಾಟ್ಸ್ ಆಲ್ ಯುವರ್ ಆನರ್’ ನಾಟಕ ಪ್ರದರ್ಶನಗೊಂಡಿತು.
ಇದನ್ನೂ ಓದಿ
► ಸುರಭಿ ತ್ರಿದಿನ ನಾಟಕೋತ್ಸವಕ್ಕೆ ಚಾಲನೆ – https://kundapraa.com/?p=46890 .