ರಂಗ ಚಟುವಟಿಕೆ ಮೂಲಕ ಸಾಮಾಜಿಕ ಬದಲಾವಣೆಯ ಗುರಿ: ಬಾಸುಮ ಕೊಡಗು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ಧರ್ಮ, ಜಾತಿ, ಸ್ಥಳ ಮೀರಿದ ಪ್ರಕ್ರಿಯೆ. ಅದು ತನ್ನ ಚಟುವಟಿಕೆಗಳ ಮೂಲಕ ಸಾಮಾಜಿಕ ಬದಲಾವಣೆಯ ಗುರಿ ಹೊಂದಿದೆ ಎಂದು ಹಿರಿಯ ರಂಗಕರ್ಮಿ ಬಾಸುಮ ಕೊಡಗು ಹೇಳಿದರು.

Call us

ಇಲ್ಲಿನ ಸುರಭಿ ಸಂಸ್ಥೆ ನಡೆಸುತ್ತಿರುವ 7 ದಿನಗಳ ಶಿಶಿರ ನಾಟಕೋತ್ಸವದ ಅಂಗವಾಗಿ ಶನಿವಾರ ಸುರಭಿ ಕಲಾ ಗ್ರಾಮದಲ್ಲಿ ಆಯೋಜಿಸಿದ್ದ ’ರಂಗಭೂಮಿಯಲ್ಲಿ ಸಂಘಟನೆಯ ಪಾತ್ರ’ ಕುರಿತು ರಂಗಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ವಿಚಾರ ಮಂಡಿಸಿದರು.

Call us

ರಂಗಭೂಮಿಯ ಯಶಸ್ಸಿನಲ್ಲಿ ಅದರ ಹಿಂದಿರುವ ಸಂಘಟನೆಯ ಪಾತ್ರ ನಿರ್ಣಾಯಕವಾದುದು. ಅದರ ಸದಸ್ಯರಿಗೆ ರಂಗಚಟುವಟಿಕೆಯಲ್ಲಿ ಇರುವ ಬದ್ಧತೆಯೇ ಅದರ ಬಲ. ಅದರ ಎಲ್ಲ ಸದಸ್ಯರಿಗೆ ತಮ್ಮನ್ನು ಜನ ಗುರುತಿಸಬೇಕು ಎಂಬ ಹಂಬಲ ಇರುತ್ತದೆ. ಆಗ ಪರಸ್ಪರ ಅಸೂಯೆಯೂ ಇರುತ್ತದೆ. ಎಲ್ಲರಿಗೆ ಆಯ್ಕೆಯ ಸ್ವಾತಂತ್ರ್ಯ ಮತ್ತು ಅವಕಾಶ ನೀಡುವ ಮೂಲಕ ಅದನ್ನು ಮೀರಬಹುದು. ಅದರಲ್ಲಿ ಹೊಣೆಗಳ ವಿಭಜನೆ ಆಗಬೇಕು. ಸಂಘಟನೆಯ ಪರಿಣಾಮಕಾರಿ ನಿರ್ವಹಣೆಯೂ ಅದಕ್ಕೆ ಯಶಸ್ಸು ತಂದುಕೊಡುತ್ತದೆ. ಅದು ಶುದ್ಧ ಚಾರಿತ್ರ್ಯ ಹೊಂದಿರಬೇಕು ಎಂದು ಅವರು ಹೇಳಿದರು.

ಗಣಪತಿ ಹೋಬಳಿದಾರ್ ಎತ್ತಿದ ಗುಣಮಟ್ಟದ ಹೆಸರಿನಲ್ಲಿ ಜನರಿಗೆ ಅರ್ಥವಾಗದ ನಾಟಕಗಳ ಪ್ರದರ್ಶನ ಕುರಿತಾದ ಅಂಶಕ್ಕೆ ಪ್ರತಿಕ್ರಿಯಿಸಿದ ಬಾಸುಮ ಅಂತಹ ನಾಟಕ ಪ್ರದರ್ಶಿಸಿದರೆ ಪ್ರೇಕ್ಷಕರು ಅದರಿಂದ ದೂರ ಸರಿಯುತ್ತಾರೆ. ನಾಟಕಗಳಲ್ಲಿ ಮನೋರಂಜನೆಯ ಅಂಶವೂ ಇರಬೇಕು ಎಂದರು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರ್ಕಾರದ ಅನುದಾನದ ನೀತಿಯ ಕುರಿತು ಸುಧಾಕರ ಪಿ. ಮಾತನಾಡಿದರು. ಅಂತಹ ಚಟುವಟಿಕೆಗಳು ಅಧಿಕಾರಶಾಹಿಯ ತೀವ್ರತರ ನಿಯಂತ್ರಣಕ್ಕೆ ಸಿಲುಕಿದಾಗ ರಂಗಭೂಮಿಗೆ ಹಾನಿಯಾಗುತ್ತದೆ ಎಂದರು. ಎಸ್. ಜನಾರ್ದನ ಮರವಂತೆ ನಾಟಕ ಪ್ರದರ್ಶನಗಳನ್ನು ಶಿಸ್ತು, ಸಮಯಪ್ರಜ್ಞೆಯ ಚೌಕಟ್ಟಿಗೆ ಅಳವಡಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ ರಂಗಭೂಮಿ ಒಂದು ಪ್ರಕ್ರಿಯೆ ಆಗಬೇಕೇ ಹೊರತು ಫಲ ಆಗಬಾರದು. ಅದು ತನ್ನ ಚಟುವಟಿಕೆಗಳನ್ನು ಚಿಂತನೆಯ ಕಿಡಿ ಹೊತ್ತಿಸುವುದಕ್ಕಷ್ಟೇ ಸೀಮಿತಗೊಳಿಸಬೇಕು ಎಂದು ಹೇಳಿದರು. ರಂಗಪರಿಣತ ಸದಾನಂದ ಬೈಂದೂರು ಸಂವಾದವನ್ನು ನಿರ್ವಹಿಸಿದರು.

Leave a Reply

Your email address will not be published. Required fields are marked *

sixteen − four =