ಭಗವಂತನ ಕಲ್ಯಾಣೋತ್ಸದಿಂದ ಸಮಾಜ ಸುಭೀಕ್ಷೆ: ಸ್ವರ್ಣವಲ್ಲಿ ಶ್ರೀ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಗವಂತನ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಅದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ಹೇಳಿದರು.

Call us

Call us

Visit Now

ಬುಧವಾರ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ 14ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಆದರೆ ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ. ಸೂಕ್ತ ವಯಸ್ಸಿನಲ್ಲಿ ವಿವಾಹ ಆಗದಿರುವುದು, ಧರ್ಮ ವಿರೋಧಿ ವಿವಾಹ ವಿಚ್ಛೇದನ ಹೆಚ್ಚುತ್ತಿರುವುದು, ಹಾಗೂ ಸಂತತಿ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿರುವುದೂ ಧರ್ಮವಲ್ಲ. ಇದರಿಂದ ತಲೆಮಾರಿನಿಂದ ತಲೆಮಾರಿಗೆ ಜನಸಂಖ್ಯೆ ಕಡಿಮೆಯಾಗಿ ನಮ್ಮ ದೇಶದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಬಹುದು. ಪ್ರಕೃತಿ ಸಹಜ ಸೃಷ್ಠಿಯಲ್ಲಿ ತಂದೆ, ತಾಯಿ, ಮಗುವಿನ ಪವಿತ್ರ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಾರದು. ಒಂದು ಸಂಸಾರಕ್ಕೆ ಕನಿಷ್ಠ ಮೂರು ಮಕ್ಕಳಾದರೂ ಬೇಕು ಎಂದು ಅವರು ಸಲಹೆ ನೀಡಿದರು.

Click here

Call us

Call us

ಮರ್ಯಾದಾ ಪುರುಷೋತ್ತಮ ಶ್ರೀರಾಮನ ವಿವಾಹ ಹಾಗೂ ಜೀವನ ಆದರ್ಶಮಯವಾಗಿದ್ದು, ಇತರರಿಗೆ ಅನುಕರಣೀಯವಾಗಿದೆ. ಪತಿ-ಪತ್ನಿಯರ ಪರಸ್ಪರ ನಿಷ್ಠೆ ಮತ್ತು ಅನ್ಯೊನತೆ ಸುಖಮಯ ಜೀವನದ ಮೊದಲ ಸೂತ್ರ ಇದೊಂದು ಪುಣ್ಯದ ಕಾರ್ಯವಾಗಿದ್ದರಿಂದ ಮಂಗಳಕಾರ್ಯ, ಶುಭವಿವಾಹವೆಂದು ಸಂಭೋಧಿಸುತ್ತಾರೆ. ಸಮರ್ಪಣಾ ಮನೋಭಾವದಿಂದ ಕಾರ್ಯತತ್ವರಾಗುವುದು ಧಾರ್ಮಿಕ ಮನೋಭಾವದ ಮೊದಲ ಹೆಜ್ಜೆಯಾಗಿದೆ ಎಂದರು.

ಭಗವದ್ಗೀತೆ ವೇದಗಳ ಸಾರವಾಗಿದ್ದು ದಿನನಿತ್ಯದ ಸಮಸ್ಯೆಗಳಿಗೂ ಸಮಾಧಾನ ಸ್ಫುರಿಸುತ್ತದೆ. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿಯಲ್ಲಿ ದಾರಿ ದೀಪವಾಗಬಲ್ಲುದು. ರಾಮತಾರಕ ಮಂತ್ರ, ಭಗವದ್ಗೀತೆ ಪಠಣ ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಿರಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಪ್ರತೀ ವರ್ಷ ಯೋಗಶಿಬಿರಗಳನ್ನು ಆಯೋಜಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯುವಂತೆ ಕರೆನೀಡಿದರು.

ಬೈಂದೂರು ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಪರಮೇಶ್ವರ ಹೋಬಳಿದಾರ್ ಅಧ್ಯಕ್ಷತೆವಹಿಸಿದ್ದರು. ಮಾತೃಮಂಡಲಿ ಅಧ್ಯಕ್ಷೆ ಸುಂದರಿ ಗಣಪತಿ, ಸೇವಾಕರ್ತರಾದ ಚೇತನಾ ಮತ್ತು ವೆಂಕಟರಮಣ ಬಿಜೂರು ಹಾಗೂ ಸುಮಿತಾ ಮತ್ತು ಗುರುಪ್ರಕಾಶ್ ಬಂಗ್ಲಮನೆ ಮಯ್ಯಾಡಿ, ಜಯಂತಿ ನಾರಾಯಣ ರಾವ್, ಗೌತಂ ಬಂಗ್ಲೆಮನೆ ಉಪಸ್ಥಿತರಿದ್ದರು. ಭಗವದ್ಗೀತಾ ಅಭಿಯಾನ ಜಿಲ್ಲಾ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಪ್ರಾಸ್ತಾವಿಸಿದರು. ಆನಂದ ಮದ್ದೋಡಿ ಸ್ವಾಗತಿಸಿ, ಸುಧಾಕರ ಪಿ. ನಿರೂಪಿಸಿ, ವಂದಿಸಿದರು.

ಇದನ್ನೂ ಓದಿ:
►  ಬೈಂದೂರು ಶ್ರೀ ರಾಮಕ್ಷತ್ರಿಯ ಸಂಘ: ಶ್ರೀ ಸೀತಾರಾಚಂದ್ರ ಕಲ್ಯಾಣೋತ್ಸವ ಸಂಪನ್ನ – https://kundapraa.com/?p=32280 .

Leave a Reply

Your email address will not be published. Required fields are marked *

five × three =