ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇನ್ ಸೈಟ್ ಫೌಂಡೇಶನ್ ಯು.ಎಸ್.ಎ.ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ವಿಭಾಗದ ಆನ್ ಲೈನ್ ಭರತನಾಟ್ಯ ಸ್ಪರ್ಧೆಯಲ್ಲಿ ಕುಂದಾಪುರ ವೆಂಕಟರಮಣ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನ ನೆಂಪು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕುಂದಾಪುರದ ರಾಜ್ ಕುಮಾರ್ ನೆಂಪು ಮತ್ತು ಪ್ರತಿಮಾ ಇವರ ಪುತ್ರಿಯಾಗಿರುವ ಸಿಂಚನ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜರುಗಿದ ಹಂಸ ಭ್ರಮರಿ ಬೆಂಗಳೂರು, ಹೆಜ್ಜೆ ಗೆಜ್ಜೆ ಉಡುಪಿ, ಡ್ಯಾನ್ಸ್ ಜಾತ್ರೆ ಧಾರವಾಡ, ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್, ಹನಿವೆಲ್ ಕಂಪೆನಿ ಬೆಂಗಳೂರು, ದಿಕ್ಸೂಚಿ ನಾಟ್ಯಾಲಯ ಬೆಂಗಳೂರು, ಇವರು ನಡೆಸಿದ ನ್ರತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುತ್ತಾರೆ.
ಕಲಿಕೆಯಲ್ಲಿಯೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಈಕೆ ವಿದುಷಿ ಪ್ರವೀತಾ ಅಶೋಕ್ ಇವರ ಮಾರ್ಗದರ್ಶನದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು, ಪ್ರಸ್ತುತ ವಿದ್ವತ್ ಪೂರ್ವದ ವಿದ್ಯಾರ್ಥಿನಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.