ಬ್ರಾಂಡ್ ಸ್ಕ್ಯಾನ್-2015: ಕುಂದಾಪುರದಲ್ಲಿ ಟ್ಯಾಪ್‌ಮಿ ವಿದ್ಯಾರ್ಥಿಗಳಿಂದ ಪ್ರತಿಭೆಯ ಅನಾವರಣ

Call us

Call us

Call us

Call us

ಕುಂದಾಪುರ: ಕರ್ನಾಟಕದ ಜನರು ಭಾಷಾ ಶ್ರೀಮಂತಿಕೆ ಹೊಂದಿದವರು. ಶಿಕ್ಷಣ ಹಾಗೂ ಇತರ ಉದ್ದೇಶಗಳಿಗಾಗಿ ಇಲ್ಲಿಗೆ ಬರುವ ಪ್ರತಿಯೊಬ್ಬರನ್ನು ನಮ್ಮ ಮನೆ ಮಂದಿಯಂತೆ ಸ್ವೀಕಾರ ಮಾಡುವ ಮನೋಭಾವವನ್ನು ಹೊಂದಿದ್ದಾರೆ. ನಮ್ಮ ರಾಜ್ಯ ಸಮೃದ್ದ ಭಾಷೆ ಹಾಗೂ ಅಭಿಮಾನವನ್ನು ಹೊಂದಿರುವ ಸುಂದರ ಹೂ ತೋಟ ಎಂದು ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಎಂ.ಮಂಜುನಾಥ ಶೆಟ್ಟಿ ಹೇಳಿದರು.

Call us

Click Here

Click here

Click Here

Call us

Visit Now

Click here

ಇಲ್ಲಿನ ಬೋರ್ಡ್ ಹೈಸ್ಕೂಲಿನಲ್ಲಿ ಮಣಿಪಾಲದ ಟಿ.ಎ ಪೈ ಮ್ಯಾನೇಜ್‌ಮೆಂಟ್ ಇನ್ಟಿಟ್ಯೂಟ್ (ಟ್ಯಾಪ್‌ಮಿ) ವಿದ್ಯಾರ್ಥಿಗಳು ಆಯೋಜಿಸಿದ್ದ ’ಬ್ರಾಂಡ್ ಸ್ಕ್ಯಾನ್-2015’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಾಭ್ಯಾಸದ ಜತೆಯಲ್ಲಿ ಶಿಕ್ಷಣೇತರ ಚಟುವಟಿಕೆಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಸ್ತುಪ್ತವಾಗಿರುವ ಪ್ರತಿಭೆಗಳು ಅನಾವಣಗೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಆರ್ ಶೆಟ್ಟಿಯವರು ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದ ತವರು. ಇಲ್ಲಿಗೆ ಶಿಕ್ಷಣ ಆಶ್ರಯಿಸಿ ಬರುವ ಪ್ರತಿಯೊಬ್ಬರಿಗೂ ಇಲ್ಲಿನ ಜನ ಮಾತೃ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಇಲ್ಲಿ ಶಿಕ್ಷಣ ಕಲಿತು ಭವಿಷ್ಯದಲ್ಲಿ ಯಶಸ್ಸು ಕಂಡ ವಿದ್ಯಾರ್ಥಿಗಳು. ಜಿಲ್ಲೆಯ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸುವ ಮೂಲಕ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡಬೇಕು. ತಂದೆ-ತಾಯಿ, ಕಲಿಸಿದ ಗುರು ಹಾಗೂ ಕಲಿತ ಶಿಕ್ಷಣ ಸಂಸ್ಥೆಗಳನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಪುರಸಭಾ ಸದಸ್ಯ ರಾಜೇಶ್ ಕಾವೇರಿ, ಸಂಚಾರಿ ಠಾಣೆಯ ಎಸ್.ಐ ಜಯ, ಟಿ.ಎ ಪೈ ಮ್ಯಾನೇಜ್‌ಮೆಂಟ್ ಇನ್ಟಿಟ್ಯೂಟ್‌ನ ಮಹಾದೇವನ್, ಗೌರವ್, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಉದ್ಯಮಿ ಹುಸೇನ್ ಎಚ್ ವೇದಿಕೆಯಲ್ಲಿದ್ದರು. ಟ್ಯಾಪ್‌ಮಿ ಶಿಕ್ಷಣ ಸಂಸ್ಥೆಯ ಮಹಾಲಸಾ ಕಿಣಿ ನಿರೂಪಿಸಿದರು, ಸುಶ್ಮೀತಾ ಪ್ರಾರ್ಥಿಸಿದರು.

ಏನಿದು ಬ್ರಾಂಡ್ ಸ್ಕ್ಯಾನ್

Call us

ಮ್ಯಾನೆಜಮೆಂಟ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಭಾಗವಾಗಿ ಜನರ ವ್ಯವಹಾರ ಮತ್ತು ಹೂಡಿಕೆಯ ಹವ್ಯಾಸಗಳು ಹೇಗಿರುತ್ತೆ ಎನ್ನುವುದನ್ನು ತಿಳಿಯುವುದಕ್ಕಾಗಿ ಬ್ಯಾಂಡ್ ಸ್ಕ್ಯಾನ್ ಎಂಬ ಹೆಸರಿನೊಂದಿಗೆ ಟ್ಯಾಪ್‌ಮಿ ಕಳೆದ ಮೂರು ವರ್ಷಗಳಿಂದ ಕುಂದಾಪುರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ. ಒಂದು ದಿನದ ಕಾರ್ಯಕ್ರಮದಲ್ಲಿ ಸಮೀಕ್ಷೆ ನಡೆಸುವುದರೊಂದಿಗೆ ನೃತ್ಯ ಸ್ವರ್ಧೆ, ಆದರ್ಶ ದಂಪತಿ, ಬಲೂನ್ ಪೇಂಟಿಂಗ್, ಕಿಡ್ಸ್ ಟ್ಯಾಲೆಂಟ್ ಶೋ, ಬೈಕ್ ಸ್ಟಂಟ್ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಬೈಕ್ ಸ್ಟಂಟ್ ಪ್ರಮುಖ ಆಕರ್ಷಣೆ:

ಕಾರ್ಯಕ್ರಮದ ಕೊನೆಯಲ್ಲಿ ಆಯೋಜಿಸಲಾದ ಬೈಕ್ ಸ್ಟಂಟ್ ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆ ಪಡೆಯಿತು. ಮಂಗಳೂರು ಆರ್‌ಡಿಎಕ್ಸ್ ತಂಡದ ಮೈ ನವಿರೇಳಿಸುವ ಬೈಕ್ ಸ್ಟಂಟ್ ನೆರದಿದ್ದ ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿತ್ತು.

ಒಟ್ಟಿನಲ್ಲಿ ಪ್ರಾಜೆಕ್ಟ್‌ವೊಂದನ್ನು ಪೂರ್ಣಗೊಳಿಸಲು ಟ್ಯಾಪ್‌ಮಿ ವಿದ್ಯಾರ್ಥಿಗಳು ಮಾರ್ಕೆಟಿಂಗ್ ತಂತ್ರದ ಮೂಲಕ ಯಶಸ್ವಿ ಕಾರ್ಯಕ್ರಮ ಆಯೋಜಿಸಿದ್ದು ಕುಂದಾಪುರದ ಜನರ ಮೆಚ್ಚುಗೆಗೆ ಪಾತ್ರವಾಯಿತು. (ಕುಂದಾಪ್ರ ಡಾಟ್ ಕಾಂ ಸುದ್ದಿ)

TAPMI Brandscan-2015 at Kundapur. Bike Stunt at Kundapur (1) TAPMI Brandscan-2015 at Kundapur. Bike Stunt at Kundapur (2)TAPMI Brandscan-2015 at Kundapur. Bike Stunt at Kundapur (5)TAPMI Brandscan-2015 at Kundapur. Bike Stunt at Kundapur (4) TAPMI Brandscan-2015 at Kundapur. Bike Stunt at Kundapur (6) TAPMI Brandscan-2015 at Kundapur. Bike Stunt at Kundapur (7)TAPMI Brandscan-2015 at Kundapur. Bike Stunt at Kundapur (3) TAPMI Brandscan-2015 at Kundapur. Bike Stunt at Kundapur (8)TAPMI Brandscan-2015 at Kundapur. Bike Stunt at Kundapur (9)TAPMI Brandscan-2015 at Kundapur. Bike Stunt at Kundapur (10)TAPMI Brandscan-2015 at Kundapur. Bike Stunt at Kundapur (11)TAPMI Brandscan-2015 at Kundapur. Bike Stunt at Kundapur (12)TAPMI Brandscan-2015 at Kundapur. Bike Stunt at Kundapur (13)TAPMI Brandscan-2015 at Kundapur. Bike Stunt at Kundapur (14)TAPMI Brandscan-2015 at Kundapur. Bike Stunt at Kundapur (17)TAPMI Brandscan-2015 at Kundapur. Bike Stunt at Kundapur (18)TAPMI Brandscan-2015 at Kundapur. Bike Stunt at Kundapur (19)TAPMI Brandscan-2015 at Kundapur. Bike Stunt at Kundapur (20)TAPMI Brandscan-2015 at Kundapur. Bike Stunt at Kundapur (21)TAPMI Brandscan-2015 at Kundapur. Bike Stunt at Kundapur (22)TAPMI Brandscan-2015 at Kundapur. Bike Stunt at Kundapur (23)TAPMI Brandscan-2015 at Kundapur. Bike Stunt at Kundapur (25)TAPMI Brandscan-2015 at Kundapur. Bike Stunt at Kundapur (26)TAPMI Brandscan-2015 at Kundapur. Bike Stunt at Kundapur (27)TAPMI Brandscan-2015 at Kundapur. Bike Stunt at Kundapur (28)TAPMI Brandscan-2015 at Kundapur. Bike Stunt at Kundapur (29)TAPMI Brandscan-2015 at Kundapur. Bike Stunt at Kundapur (30)TAPMI Brandscan-2015 at Kundapur. Bike Stunt at Kundapur (31)TAPMI Brandscan-2015 at Kundapur. Bike Stunt at Kundapur (33)TAPMI Brandscan-2015 at Kundapur. Bike Stunt at Kundapur (34)TAPMI Brandscan-2015 at Kundapur. Bike Stunt at Kundapur (35)TAPMI Brandscan-2015 at Kundapur. Bike Stunt at Kundapur (36)TAPMI Brandscan-2015 at Kundapur. Bike Stunt at Kundapur (37)TAPMI Brandscan-2015 at Kundapur. Bike Stunt at Kundapur (38)TAPMI Brandscan-2015 at Kundapur. Bike Stunt at Kundapur (40)TAPMI Brandscan-2015 at Kundapur. Bike Stunt at Kundapur (41)TAPMI Brandscan-2015 at Kundapur. Bike Stunt at Kundapur (42)

Leave a Reply

Your email address will not be published. Required fields are marked *

five × four =