ಮಾರಣಕಟ್ಟೆಯಲ್ಲಿ ಟೀಮ್ ಪಾವನಿ ಸಂಘಟನೆ ಉದ್ಘಾಟನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಾರಣಕಟ್ಟೆ: ಇಲ್ಲಿನ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ಟೀಮ್ ಪಾವನಿ ಸಂಸ್ಥೆಯ ಉದ್ಘಾಟನೆ ಹಾಗೂ ಚಿತ್ತೂರಿನಿಂದ ಮಾರಣಕಟ್ಟೆಯ ತನಕ ಸ್ವಚ್ಚತಾ ಜಾಗೃತಿ-ಜಾಥಾ ಜರುಗಿತು.

Call us

ಈ ಸಂದರ್ಭ ಬಿಗ್‌ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ಟೀಮ್ ಪಾವನಿ ಸಂಘಟನೆಯನ್ನು ಅಡಿಕೆ ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿ ನಾಯಕತ್ವವನ್ನು ಮೈಗೂಡಿಸಿಕೊಂಡು ಸಮಾಜದ ಒಳಿತಿಗಾಗಿ ಸಂಘಟನೆಯನ್ನು ಕಟ್ಟಿಕೊಂಡು ಸಮಾಜದಲ್ಲಿ ಇಂತಹ ಉತ್ತಮ ಕಾರ್ಯಗಳನ್ನು ಮಾಡಬೇಕು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಸಮಾಜಕ್ಕೆ ಕಿಂಚಿತ್ತು ಗೌರವವನ್ನು ನೀಡುವ ಕೆಲಸ ಮಾಡಬೇಕು ಎಂದರು.

Call us

ಮಾರಣಕಟ್ಟೆ ಅನುವಂಶೀಯ ಆಡಳಿತ ಮುಕ್ತೇಸರರಾದ ಸದಾಶಿವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಐ.ಟಿ. ಮಣಿಪಾಲ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ. ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ಉಪ ವಲಯ ಅರಣ್ಯಾಧಿಕಾರಿ ರೂಪೇಶ್ ಚೌವಾಣ್, ಕಮಲಶಿಲೆ ಯಕ್ಷಗಾನ ಮೇಳ ಸಂಸ್ಥಾಪಕ ಹಾಗೂ ಯಕ್ಷ ಸಂಚಲನ ಟ್ರಸ್ಟ್ ಅಧ್ಯಕ್ಷ ಕೃಷ್ಣ ಕನ್ನಂತ್ ಕುಡೇರಿ, ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಉದ್ಯಮಿ ದಿವ್ಯಾಧರ್ ಶೆಟ್ಟಿ, ಚಿತ್ತೂರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರವಿರಾಜ್ ಶೆಟ್ಟಿ, ಉಪಸ್ಥಿತರಿದ್ದರು.

ಡಾ. ಶೃತಿ ಕನ್ನಂತ ಸ್ವಾಗತಿಸಿ, ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಾಡಿದರು.

ಇದನ್ನೂ ಓದಿ:
► ಬದುಕಿನಲ್ಲಿ ಅನುಮಾನ, ಅವಮಾನದ ಬಳಿಕವೇ ಸನ್ಮಾನ: ಶೈನ್ ಶೆಟ್ಟಿ – https://kundapraa.com/?p=35596 .

Leave a Reply

Your email address will not be published. Required fields are marked *

one + 16 =