ಸಂಭ್ರಮದಿಂದ ಜರುಗಿದ ಪ್ರಸಿದ್ಧ ತಗ್ಗರ್ಸೆ ಕಂಬಳೋತ್ಸವ, ಬಹುಮಾನ ವಿತರಣೆ

Call us

Call us

ಕುಂದಾಪ್ರ ಡಾಟ್ ಕಾಂಸುದ್ದಿ.
ಬೈಂದೂರು:
ಶತಮಾನದ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ತಗ್ಗರ್ಸೆ ಕಂಬಳೋತ್ಸವವು ಭಾನುವಾರ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ವಿಧಿವತ್ತಾಗಿ, ವಿಜೃಂಭಣೆಯಿಂದ ನಡೆಯಿತು. ಹಲವಾರು ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸಿದವು.

Call us

Call us

Call us

ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ಕಂಬಳ ಗದ್ದೆಯನ್ನು ಖುರ್ಜು ನಿಲ್ಲಿಸಿ, ತೋರಣಗಳಿಂದ ಅಲಂಕರಿಸಲಾಗಿತ್ತು. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸಿದ ಬಳಿಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಿತು.

Call us

Call us

ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆಯ ಸಲುವಾಗಿ ಓಡಿಸಿದರೇ, ಉಳಿದ ಕೋಣಗಳು ಹಗ್ಗ ಹಾಗೂ ಹಲಗೆ ವಿಭಾಗದ ಸ್ವರ್ಧೆಯಲ್ಲಿ ಪಾಲ್ಗೊಂಡವು.

ಕಂಠದಮನೆ ಕುಟುಂಬದ ಟಿ. ನಾರಾಯಣ ಹೆಗ್ಡೆಯವರ ನೇತೃತ್ವದಲ್ಲಿ ಸಾಂಪ್ರದಾಯಿಕ ಕಂಬಳ ಮುನ್ನಡೆಯುತ್ತಿದ್ದು ಊರಿನ ಜನ ಹಬ್ಬದಂತೆ ಸಂಭ್ರಮಿಸಿದರು. ವಿಶಾಲ ಗದ್ದೆಯ ಅಂಚುಗಳಲ್ಲಿ ನಿಂತು ಕಂಬಳದ ಸೊಬಗನ್ನು ಸವಿದವರು. ವಿವಿಧ ಗಣ್ಯರು ಕಂಬಳೋತ್ಸವ ವೀಕ್ಷಣೆಗೆ ಆಗಮಿಸಿದ್ದರು. ಗಣೇಶ್ ಕೊಟಾರಿ, ಅಭಿಜಿತ್ ಪಾಂಡೇಶ್ವರ ಹಾಗೂ ಕಿಶೋರ್ ಸಸಿಹಿತ್ಲು ಕಂಬಳದ ಉದ್ಘೋಷಕರಾಗಿದ್ದರು.

ಬಹುಮಾನ ವಿತರಣೆ:
ಕಂಠದ ಮನೆಯ ಕೋಣಗಳು ಕೊನೆಯಲ್ಲಿ ಗದ್ದೆಗೆ ಇಳಿಯುವ ಮೂಲಕ ಕಂಬಳೋತ್ಸವ ಮುಕ್ತಾಯಗೊಂಡಿತು. ಬಳಿಕ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಂಬಳ ಓಟಗಾರ ವಿಶ್ವನಾಥ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಕಂಬಳ ಸಮಿತಿ ಪ್ರಮುಖರಾದ ಶಾಂತಾರಾಮ ಶೆಟ್ಟಿ ಬಾರ್ಕೂರು, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ವಸಂತ ಹೆಗ್ಡೆ ಕಂಟದಮನೆ, ಟಿ. ಬಾಬು ಶೆಟ್ಟಿ ತಗ್ಗರ್ಸೆ, ಸುಭಾಶ್ಚಂದ್ರ ಶೆಟ್ಟಿ ಕೂರಾಡಿ, ಕರುಣಾಕರ ಹೆಗ್ಡೆ ತಗ್ಗರ್ಸೆ, ಬಾಲಕೃಷ್ಣ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಕಂಬಳೋತ್ಸವದ ನೇತೃತ್ವ ವಹಿಸಿದ್ದ ಕಂಠದಮನೆ ಟಿ. ನಾರಾಯಣ ಹೆಗ್ಡೆ ಸ್ವಾಗತಿಸಿ, ಜನ್ಮನೆ ರತ್ನಾಕರ ಶೆಟ್ಟಿ ವಂದಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ಉದಯ ಹೆಗ್ಡೆ ತಗ್ಗರ್ಸೆ, ಅರ್ಜುನ್ ಶೆಟ್ಟಿ ತಗ್ಗರ್ಸೆ ಸಹಕರಿಸಿದರು.

ಕಂಬಳ ಫಲಿತಾಂಶ:

ಹಗ್ಗ ವಿಭಾಗ ಹಿರಿಯ
ಪ್ರಥಮ:ದಿ. ಕಾರಿಕಟ್ಟೆ ಮಹಾಬಲ ಶೆಟ್ಟಿ ಅವರ ಕೋಣ (ಓಡಿಸಿದವರು: ಮಂಜುನಾಥ ಗೌಡ ಅರೆಶಿರೂರು)
ದ್ವಿತೀಯ:ದಿಶಾ ಶ್ರೇಯಸ್ ನಾರಾಯಣ ದೇವಾಡಿಗ ಕಂಚಿಕಾನ್ಅವರ ಕೋಣ (ಓಡಿಸಿದವರು: ವಿವೇಕ ಪೂಜಾರಿ)

ಹಲಗೆ ವಿಭಾಗ
ಪ್ರಥಮ: ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು (ಹಲಗೆ ಏರಿದವರು: ಮಹೇಶ್ ಪೂಜಾರಿ)
ದ್ವಿತೀಯ: ವೆಂಕಟ್ರಮಣ ಗಾಣಿಗ ನಾವುಂದ (ಹಲಗೆ ಏರಿದವರು: ರಾಘವೇಂದ್ರ ಪೂಜಾರಿ ಕಾಮನಮನೆ)

ಹಗ್ಗ ವಿಭಾಗ ಕಿರಿಯ ಎ
ಪ್ರಥಮ: ಸಮೃದ್ಧಿ ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕಂಚಿಕಾನ್ (ಓಡಿಸಿದವರು ರವಿ ಪೂಜಾರಿ ಗುರಾಮಕ್ಕಿ)
ದ್ವಿತೀಯ: ವಾಜುರಾಜ ಶೆಟ್ಟಿ, ವೈಶಾಲಿ ಉಪ್ಪುಂದ (ಓಡಿಸಿದವರು: ವಿವೇಕ ಪೂಜಾರಿ)

ಹಗ್ಗ ವಿಭಾಗ ಕಿರಿಯ ಬಿ
ಪ್ರಥಮ: ಸೋಮ ದೇವಾಡಿಗ ನಂದನವನ
ದ್ವಿತೀಯ: ನೀಲಕಂಠ ಹುದಾರ್ ತಗ್ಗರ್ಸೆ

Leave a Reply

Your email address will not be published. Required fields are marked *

eight − five =