ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್: ಒಟ್ಟು 14 ಮಂದಿಗೆ ಕ್ವಾರಂಟೈನ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಂಬಯಿನಿಂದ ಮಂಡ್ಯಕ್ಕೆ ಸರಕು ಸಾಗಾಟ ವಾಹನದಲ್ಲಿ ತೆರಳಿದ್ದ ಕೋವಿಡ್ 19 ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪೆಟ್ರೋಲ್ ಬಂಕಿಗೆ ತೆರಳಿರುವುದು ದೃಢಪಟ್ಟಿದ್ದು, ಬಂಕ್ ಸೀಲ್ ಡೌನ್ ಮಾಡಿ ಹಲವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.

Call us

Call us

ಸೋಂಕಿತ ವ್ಯಕ್ತಿ ಪೆಟ್ರೋಲ್ ಬಂಕಿನಲ್ಲಿ ಸ್ನಾನ ಮಾಡಿ ಅಲ್ಲಿಯೇ ಕೆಲಗಂಟೆಗಳ ಕಾಲ ಉಳಿದುಕೊಂಡು ಬಳಿಕ ತೆರಳಿರುವುದು ತೆಕ್ಕಟ್ಟೆ ಬಂಕಿನ ಸಿಸಿ ಟಿವಿ ಪರಿಶೀಲನೆ ವೇಳೆ ಪತ್ತೆಯಾಗಿದೆ. ತಡರಾತ್ರಿಯ ತನಕ ನಡೆದ ತಪಾಸಣೆ ನಡೆದಿತ್ತು.

ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್:
ತೆಕ್ಕಟ್ಟೆ ಪೆಟ್ರೋಲ್ ಬಂಕಿನಲ್ಲಿಯೇ ಕೊರೋನಾ ಸೋಂಕಿತ ವ್ಯಕ್ತಿ ಕೆಲ ಗಂಟೆ ತಂಗಿರುವುದು ದೃಢಪಡುತ್ತಿದ್ದಂತೆಯೇ ಅಧಿಕಾರಿಗಳು ಬಂಕ್ ಸೀಲ್ ಡೌನ್ ಮಾಡಿದ್ದಾರೆ. ಬಂಕಿನ ಮಾಲಕ ಸೇರಿಂದತೆ ಏಳು ಮಂದಿಯನ್ನು ಉಡುಪಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇವರ ಜೊತೆಗೆ ಸಾಸ್ತಾನ ಟೋಲ್ ದಾಟಿ ಹೋಗಿರುವುದರಿಂದ ಟೋಲ್ ಪಡೆಯಲು ಅಂದು ಕರ್ತವ್ಯದಲ್ಲಿದ್ದ ಸಿಬ್ಬಂಧಿಗಳು ಸೇರಿ ಏಳು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ ಹಾಗೂ ಕೋಟ ಪಿಎಸ್ಐ ನಿತ್ಯಾನಂದ ಗೌಡ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂಧಿಗಳು ತಡರಾತ್ರಿಯ ತನಕ ಪರಿಶೀಲನೆ ನಡೆಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

ಮುಂಬೈಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಸರಕು ಸಾಗಾಟ ವಾಹನದಲ್ಲಿ ಎ.20ರಂದು ಮಂಬೈನಿಂದ ಹೊರಟು ಎ. 21 ರಂದು ತೆಕ್ಕಟ್ಟೆ ಪೆಟ್ರೋಲ್ ಬಂಕಿನಲ್ಲಿಯೇ ವಾಹನ ನಿಲ್ಲಿಸಿದ್ದಾಗ ಅಲ್ಲಿ ಸ್ನಾನ ಮಾಡಿ, ವಿಶ್ರಮಿಸಿ ಹೋಗಿರುವುದು ದೃಢಪಟ್ಟಿದೆ. ಲಾರಿ ಎ. 21ರ ಸಂಜೆ 4:55ಕ್ಕೆ ಶಿರೂರು ಟೋಲ್ಗೇಟ್, 5:19ಕ್ಕೆ ತ್ರಾಸಿ ಪೆಟ್ರೋಲ್ ಬಂಕ್ ಎದುರು ಪಾಸಾಗಿದ್ದು, ಬೆಳಿಗ್ಗೆ 3:38 ರ ಹೊತ್ತಿಗೆ ಸಾಸ್ತಾನ ಟೋಲ್ ಪಾಸ್ ಆಗಿರುವ ಬಗ್ಗೆ ಮಾಹಿತಿ ತಿಳಿದುಬಂದಿತ್ತು. ಲಾರಿ ಚಾಲಕ ಮರವಂತೆ ಸಮೀಪದ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿ ಅಲ್ಲಿಯೇ ಸ್ನಾನ ಮಾಡಿ ತಡರಾತ್ರಿ ಹೋರಟಿದ್ದೆವು ಎಂದು ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಕುಂದಾಪುರ ತಾಲೂಕಿನ ಬಂಕ್ಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆರಂಭದಲ್ಲಿ ತ್ರಾಸಿ ಬಂಕ್ ಎಂದು ತಪಾಸಣೆಗೆ ಒಳಪಡಿಸಲಾಗಿತ್ತಾದರೂ, ಲಾರಿ ಅಲ್ಲಿಯೇ ಬಂದಿಲ್ಲದಿರುವುದು ದೃಢಪಟ್ಟಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮುಂಬೈಯಿಂದ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಲಾರಿಯಲ್ಲಿ ತೆರಳಿದ್ದ ವ್ಯಕ್ತಿಯ ಗಂಟಲು ದ್ರವವನ್ನು ಎ. 24ರಂದು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ 19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಮಂಡ್ಯ ಜಿಲ್ಲಾಡಳಿತ ತಿಳಿಸಿತ್ತು. ಆ ವ್ಯಕ್ತಿ ಅಕ್ರಮವಾಗಿ ಬಂದಿದ್ದು ಮೂವರ ಸಂಪರ್ಕದಲ್ಲಿದ್ದರು. ಇವರಲ್ಲಿ ಕೆಲವರು ಹಾಸನ ಜಿಲ್ಲೆಗೂ, ಕೆಲವರು ಮಂಡ್ಯ ಜಿಲ್ಲೆಗೂ ಸೇರಿದವರಾದ ಕಾರಣ ಎರಡೂ ಜಿಲ್ಲೆಗಳಲ್ಲಿ ನಿಗಾ ವಹಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಮುಂದಿನ ನಿರ್ಧಾರದ ಬಗ್ಗೆ ಜಿಲ್ಲಾಡಳಿತ ಸದ್ಯದಲ್ಲಿಯೇ ಪ್ರಕಟಿಸಲಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಮಂಡ್ಯ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯಲ್ಲಿ ತ್ರಾಸಿ ಹೆಸರು. ಕೊರೋನಾ ಮುಕ್ತವಾಗಿದ್ದ ಉಡುಪಿ ಜಿಲ್ಲೆಗೆ ಹೊಸ ತಲೆನೋವು – https://kundapraa.com/?p=37159 .

One thought on “ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್: ಒಟ್ಟು 14 ಮಂದಿಗೆ ಕ್ವಾರಂಟೈನ್

Leave a Reply

Your email address will not be published. Required fields are marked *

six − five =