ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಸಾರ್ವಜನಿಕರ ಕೋರಿಕೆಯ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಾಳೆಯ ಭಾನುವಾರ ( ಮೇ 31) ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದು, ಈ ಬಗ್ಗೆ ರಾಜ್ಯ ಸರಕಾರದ ಅಧಿಕೃತ ಆದೇಶವೂ ಹೊರಬಿದ್ದಿದೆ.
ಮೇ 31ರಂದು ಸಂಪೂರ್ಣ ಕರ್ಫ್ಯೂ ಇರುವುದಿಲ್ಲ. ಲಾಕ್ ಡೌನ್ ಸಡಿಲಗೊಳಿಸಿದ ನಂತರ ರಾಜ್ಯದಲ್ಲಿ ಎಂದಿನಂತೆ ಇರುವ ದೈನಂದಿನ ಚಟುವಟಿಕೆ ನಾಳೆ ಕೂಡ ಇರುತ್ತದೆ. ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ಕರ್ಫ್ಯೂ ಹಾಗೇಯೇ ಮುಂದುವರಿಲಿದೆ. ಭಾನುವಾರದ ಸಡಿಲಿಕೆ ಆದೇಶವು ಮೇ 31ಕ್ಕೆ ಮಾತ್ರ ಸೀಮಿತವಾಗಿದ್ದು, ನಂತರದ ನಿರ್ಧಾರವನ್ನು ಕೇಂದ್ರ ಸರ್ಕಾರ ಮುಂದಿನ ಮಾರ್ಗಸೂಚಿಯ ನಂತರ ಕೈಗೊಳ್ಳಬಹುದಾದದ ಸಾಧ್ಯತೆಯಿದೆ.
ಪ್ರತಿ ದಿನದಂತೆ ಭಾನುವಾರ ಬಸ್ ಸಂಚಾರ ಇರುತ್ತೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಎಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಂಚಾರ ಮಾಡಲಿದೆ. ಅಲ್ಲದೇ ಅಂತರ ರಾಜ್ಯ ಸಂಚಾರ ಕೂಡ ಇರುತ್ತದೆ. ಜೊತೆಗೆ ಆಟೋ, ಕ್ಯಾಬ್ ಎಲ್ಲ ಸಂಚಾರ ವ್ಯವಸ್ಥೆ ಕೂಡ ಇರುತ್ತದೆ. ಹೋಟೆಲ್, ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಹೋಟೆಲ್ನಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಾರ್ಕ್ ತೆರೆದಿರುತ್ತದೆ.
ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಹೇರಿದ ನಂತರ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಬೇಕೆಂದು ಮುಖ್ಯಮಂತ್ರಿ ಬಿಎಸ್ ವೈ ಆದೇಶಿಸಿದ್ದರು. ಅಗತ್ಯ ಸೇವೆ ಹೊರತುಪಡಿಸಿ ಬೇರೆ ಯಾವುದೇ ಸಂಚಾರಕ್ಕೂ ಅನುಮತಿ ನಿರಾಕರಿಸಲಾಗಿತ್ತು. ಆಟೋ, ಸರಕಾರಿ ಬಸ್ ಸೇರಿದಂತೆ ಎಲ್ಲವೂ ಬಂದ್ ಮಾಡುವಂತೆ ಹೇಳಲಾಗಿತ್ತು. ಅದರಂತೆ ಕಳೆದ ಭಾನುವಾರ ರಾಜ್ಯದಲ್ಲಿ ಈ ಲಾಕ್ ಡೌನ್ ಬಹುತೇಕ ಯಶಸ್ವಿಯಾಗಿತ್ತು.
ಇದನ್ನೂ ಓದಿ:
► ಜಿಲ್ಲೆಯಲ್ಲಿ ಮೂರು ದಿನ ಭಾರಿ ಮಳೆ: ಸಾರ್ವಜನಿಕರಿಗೆ ಸೂಚನೆ – https://kundapraa.com/?p=38020 .
► ಜೂನ್ 15ರಿಂದ ಮೀನುಗಾರಿಕೆ ನಿಷೇಧ: ಪರಿಷ್ಕೃತ ಆದೇಶ – https://kundapraa.com/?p=38016 .
► ಉಡುಪಿ: 7 ದಿನ ಸರ್ಕಾರಿ ಕ್ವಾರಂಟೈನ್ ಪೂರೈಸಿದವರಿಗೆ ಹೋಂ ಕ್ವಾರಂಟೈನ್‌ಗೆ ಅನುಮತಿ – https://kundapraa.com/?p=37978 .