ತಾಯಂದಿರು ಎದೆ ಹಾಲು ಹೆಚ್ಚಿಸಿಕೊಳ್ಳಲು ಸೇವಿಸಬೇಕಾದ ಆಹಾರಗಳು

Call us

Call us

ತಾಯಿಯ ಉದರದಿಂದ ಹೊರಬಂದು ಪ್ರಪಂಚಕ್ಕೆ ಇದಿರುಗೊಳ್ಳುವ ಪ್ರತಿ ಮಗುವಿಗು ತಾಯಿಯ ಹಾಲೇ ಅಮೃತಪಾನ. ಮಗು ದೊಡ್ಡದಾಗುವ ತನಕವೂ ಎಲ್ಲಾ ಹೊತ್ತಿನಲ್ಲಿಯೂ ಅಗತ್ಯವಿರುವಷ್ಟು ಎದೆಹಾಲನ್ನು ತಾಯಿ ಹೊಂದಿರಬೇಕಾಗುತ್ತದೆ.

Call us

Call us

ಕೆಲವರಿಗೆ ಎದೆಹಾಲಿನ ಪ್ರಮಾಣ ಕಡಿಮೆ ಇರುತ್ತದೆ. ಹಾಲಿನ ಪ್ರಮಾಣವು ಹೆಚ್ಚಾಗಬೇಕು. ಅದರಲ್ಲಿ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳು ಹೇರಳವಾಗಿರಬೇಕು ಎನ್ನುವುದಾದರೆ ಮೊದಲು ಆಹಾರ ಕ್ರಮದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳುವುದು ಅಗತ್ಯ.

ಮಗು ಕೇವಲ ತಾಯಿಯ ಎದೆಹಾಲಿಗೆ ಅವಲಂಭಿತವಾಗಿರುವುದರಿಂದ, ತಾಯಿ ಸೇವಿಸುವ ಆಹಾರದ ಗುಣಗಳು ಹಾಲಿನ ಮುಖಾಂತರ ಮಗುವನ್ನು ತಲುಪುತ್ತದೆ. ಮಗುವಿಗೆ ಹಸಿವಾದ ಸಂದರ್ಭದಲ್ಲೆಲ್ಲಾ ತಾಯಿಯ ಎದೆ ಹಾಲು ಧಾರಾಳವಾಗಿ ಸಿಗುವಂತಾಗಬೇಕೆಂದರೆ ಕೆಲವು ವಿಶೇಷ ಆಹಾರವನ್ನು ಸೇವಿಸಬೇಕು. ಅವು ಯಾವುವು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು.

ಓಟ್ ಮೀಲ್:
ಓಟ್ ಮೀಲ್ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಿ ಆರೋಗ್ಯಕರ ರಕ್ತದೊತ್ತಡವನ್ನು ನಿರ್ವಹಿಸುವುದು. ಇದೊಂದು ಆರೋಗ್ಯ ಪೂರ್ಣ ಆಹಾರ. ಇದು ತಾಯಿಯ ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಹಾಲಿನ ಉತ್ಪಾದನೆಗೆ ಸಹಾಯಮಾಡುವ ಆಕ್ಸಿಟೋಸಿನ್ ಹಾರ್ಮೋನ್ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ಬಸಳೆ & ಕ್ಯಾರೆಟ್:
ಇದೊಂದು ಅದ್ಭುತ ಎಲೆ ಎನ್ನಬಹುದು. ಇದರಲ್ಲಿ ವಿಟಮಿನ್ ಎ, ಕೆ ಮತ್ತು ಫ್ಲೋಟೆ ಸಮೃದ್ಧವಾಗಿರುತ್ತದೆ. ಗರ್ಭಿಣಿಯರಿಗೆ ಹಾಗೂ ತಾಯಂದಿರಿಗೂ ಇದು ಅತ್ಯುತ್ತಮ ಪೋಷಕಾಂಶವನ್ನು ಒದಗಿಸುತ್ತದೆ. ಇದು ಫೈಟೋಈಸ್ಟೋಜೆನ್ಅನ್ನು ಹಾಗೂ ಸ್ತನದ ಅಂಗಾಂಶದ ಆರೋಗ್ಯವನ್ನು ಉತ್ತೇಜಿಸುತ್ತದೆ. ಅಲ್ಲದೆ ಹಾಲಿನ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ. ಬಸಳೆ ಸೊಪ್ಪಿನಂತೆ ಕ್ಯಾರಟ್ ಫೈಟೋಈಸ್ಟ್ರೋಜೆನ್ಅನ್ನು ಉತ್ತೇಜಿಸುತ್ತದೆ. ಇದರಲ್ಲಿ ವಿಟಮಿನ್ ಎ ಪ್ರಮಾಣ ಹೆಚ್ಚಾಗಿರುವುದರಿಂದ ತಾಯಿಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಮಗುವಿನ ಆರೋಗ್ಯ ರಕ್ಷಣೆಗೂ ಪ್ರಮುಖ ಪಾತ್ರವಹಿಸುತ್ತದೆ.

Call us

ಹ್ಯೂಮಸ್:
ಹ್ಯೂಮಸ್ಅನ್ನು ಸಾಮಾನ್ಯವಾಗಿ ಗಜ್ಜರಿ, ನಿಂಬೆ ರಸ, ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆಯಿಂದ ತಯಾರಿಸಲಾಗುತ್ತದೆ. ಎದೆಹಾಲು ಉಣಿಸುತ್ತಿರುವ ತಾಯಂದಿರಿಗೆ ಇದೊಂದು ಸೂಕ್ತ ಆಹಾರವಾಗಿದೆ. ಗಜ್ಜರಿ, ಹಸಿರು ಬೀನ್ಸ್ ಬೆಳ್ಳುಳ್ಳಿ ಸೇರಿದಂತೆ ಇನ್ನಿತರ ದ್ವಿದಳಧಾನ್ಯಗಳು ಪ್ರಮುಖ ಲ್ಯಾಕ್ಟೋಜೆನಿಕ್ ಆಹಾರವಾಗಿದೆ. ಆದ್ದರಿಂದ ಈ ಭಕ್ಷ್ಯ ಪ್ರೋಟೀನ್ ಸಂಪೂರ್ಣ ಮೂಲ ಮತ್ತು ಶುಶ್ರೂಷಾ ಅಮ್ಮಂದಿರಿಗೆ ಅತ್ಯುತ್ತಮ ಆಹಾರವಾಗಿದೆ.

ಪಪ್ಪಾಯ:
ಪಪ್ಪಾಯದಲ್ಲಿ ಕಂಡುಬರುವ ಕಿಣ್ವಗಳು ಮತ್ತು ಫೈಟೊಕೆಮಿಕಲ್ಸ್ಗಳು ಸ್ತನ ಅಂಗಾಂಶಗಳನ್ನು ಹೆಚ್ಚಿಸಲು ಮತ್ತು ಹಾಲುಣಿಸುವಿಕೆಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಪಪ್ಪಾಯದ ಮೊಳಕೆಯ ಗುಣಮಟ್ಟವು ಶುಶ್ರೂಷಾ ತಾಯಿಯರನ್ನು ವಿಶ್ರಾಂತಿಗೆ ಸಹಕರಿಸುತ್ತದೆ.

Click here

Click Here

Call us

Call us

Visit Now

ಆಸ್ಪ್ಯಾರಗಸ್:
ಇದು ಅದ್ಭುತವಾದ ಆಹಾರವಾಗಿದೆ ಹೆಚ್ಚಿನ ಪ್ರಮಾಣದಲ್ಲಿ ಫೈಬರ್, ಪೋಲಿಕ್ ಆಸಿಡ್ , ವಿಟಮಿನ್ ಎ, ಸಿ ಮತ್ತು ಕೆ ಅನ್ನು ಒಳಗೊಂಡಿದೆ. ಇದರಲ್ಲಿರುವ ಅಮೈನೋ ಆಮ್ಲವು ಹಾಲಿನ ಪೂರೈಕೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಸಂಪೂರ್ಣ ಪೋಷಕಾಂಶವನ್ನು ಒದಗಿಸುತ್ತದೆ.

ಕಂದು ಅಕ್ಕಿ ಬ್ರೌನ್ ರೈಸ್:
ಕಂದು ಅಕ್ಕಿಯು ಸಂಕೀರ್ಣವಾದ ಕಾರ್ಬೋಹೈಡ್ರೇಟ್ಗಳನ್ನು ಸಮೃದ್ಧವಾಗಿ ಒಳಗೊಂಡಿದೆ. ಇದು ತಾಯಿಯ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಹಾಲುಣಿಸುವಿಕೆಗೆ ಅನುಕೂಲವಾಗುವ ಹಾರ್ಮೋನ್ಗಳನ್ನು ಪ್ರಚೋದಿಸುತ್ತದೆ. ಅಲ್ಲದೆ ಪ್ರೊಲ್ಯಾಕ್ಟಿನ್ ಸ್ರವಿಸುವಿಕೆಯು ಸಹ ಪ್ರಚೋದಿಸುತ್ತದೆ.

ಏಪ್ರಿಕೋಟ್’ಗಳು:
ಫೈಬರ್, ವಿಟಮಿನ್ ಮತ್ತು ಕ್ಯಾಲ್ಸಿಯಮ್ಗಳು ಎಪ್ರಿಕೋಟ್ನಲ್ಲಿ ಹೇರಳವಾಗಿರುತ್ತದೆ. ಎದೆಹಾಲು ಉಣಿಸುತ್ತಿರುವ ತಾಯಿಗೆ ಹಾಲು ಉತ್ಪಾದನೆಗೆ ಸಹಾಯ ಮಾಡುತ್ತದೆ. ಅಲ್ಲದೆ ಕ್ಯಾಲ್ಸಿಯಮ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರ ಇನ್ನೊಂದು ವಿಶೇಷವೆಂದರೆ ಪ್ರೋಲ್ಯಾಕ್ಟಿನ್ ಮಟ್ಟವನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತದೆ.

ಸಾಲ್ಮನ್:
ಹಾಲುಣಿಸುವ ತಾಯಂದಿರಿಗೆ ಮೀನು ಅತ್ಯಗತ್ಯ ಆಹಾರ ಪದಾರ್ಥಗಳಾಗಿವೆ. ಸಾಲ್ಮನ್ ವಿಶೇಷವಾದ ಕೊಬ್ಬಿನಾಮ್ಲವನ್ನು ಹೊಂದಿರುತ್ತದೆ. ಇದನ್ನು ತಾಯಿ ಸೇವಿಸುವುದರಿಂದ ಹಾಲಿನ ಪ್ರಮಾಣವು ಹೆಚ್ಚಾಗುತ್ತದೆ. ಇದು ಹಾಲಿನ ಗುಣಮಟ್ಟವನ್ನು ಸುಧಾರಿಸಲು ಸಹಾಯಮಾಡುತ್ತದೆ. ಜೊತೆಗೆ ಮಗುವಿಗೆ ಅಗತ್ಯವಿರುವ ಪೌಷ್ಟಿಕಾಂಶ ಹಾಗೂ ಕೊಬ್ಬನ್ನು ಒದಗಿಸುತ್ತದೆ.

ನೀರು:
ಹೆಚ್ಚೆಚ್ಚು ನೀರನ್ನು ಸೇವಿಸುವುದರಿಂದ ಹಾಲಿನ ಪೂರೈಕೆಯ ಸುಧಾರಣೆಗೆ ಸಹಾಯವಾಗುವುದು. ಎದೆಹಾಲು ಉಣಿಸುವಾಗ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ನೀವು ಎದೆ ಹಾಲು ಉಣಿಸುವ ಸಂದರ್ಭದಲ್ಲಿ ಒಂದು ಗ್ಲಾಸ್ ನೀರನ್ನು ಕುಡಿದು, ಎದೆ ಹಾಲು ಉಣಿಸಲು ಪ್ರಾರಂಭಿಸಿ.

ತುಳಸಿ:
ಎಲೆಗಳು ತುಳಸಿ ಎಲೆಗಳಲ್ಲಿ ಅತ್ಯುತ್ತಮ ಪ್ರಮಾಣದ ವಿಟಮಿನ್ ಕೆ. ಇದೆ. ಈ ಪೋಷಕಾಂಶ ರಕ್ತಹೆಪ್ಪುಗಟ್ಟುವ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ತಾಯಿಹಾಲನ್ನು ಹೆಚ್ಚಿಸಲೂ ನೆರವಾಗುತ್ತದೆ. ಈಗ ತಾನೇ ಹೂಬಿಟ್ಟ ತುಳಸಿ ಗಿಡದ ಎಲೆಗಳು ತಾಯಿಹಾಲಿಗೆ ಅತ್ಯುತ್ತಮವಾಗಿವೆ. ಹೂಗಳ ಕೆಳಭಾಗದ ಸುಮಾರು ಹತ್ತು ಎಲೆಗಳನ್ನು ಚೆನ್ನಾಗಿ ಕೊಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ. ಒಂದು ನಿಮಿಷ ಕುದಿದ ಬಳಿಕ ಉರಿಯನ್ನು ತುಂಬಾ ಚಿಕ್ಕದಾಗಿಸಿ ಐದು ನಿಮಿಷ ಬಿಡಿ. ಬಳಿಕ ಈ ನೀರನ್ನು ನೋಸಿ ಎರಡು ಹನಿ ಜೇನುತುಪ್ಪವನ್ನು ಸೇರಿಸಿ. ತಣಿದ ಬಳಿಕ ಈ ನೀರನ್ನು ದಿನಕ್ಕೆರಡು ಬಾರಿ ಕುಡಿಯಿರಿ. (ಒಂದು ಬಾರಿಗೆ ಅರ್ಧ ಕಪ್).

ಬಾದಾಮಿ ಮತ್ತು ಗೋಡಂಬಿ:
ಪ್ರತಿದಿನ ಕೆಲವು ಬಾದಾಮಿ ಮತ್ತು ಗೋಡಂಬಿಗಳನ್ನು ಕುರುಕುವ ಮೂಲಕವೂ ತಾಯಿಹಾಲನ್ನು ಹೆಚ್ಚಿಸಬಹುದು. ಆದರೆ ಒಂದು ದಿನಕ್ಕೆ ಹತ್ತಕ್ಕಿಂತ ಹೆಚ್ಚು ಬಾದಾಮಿ ಅಥವಾ ಗೋಡಂಬಿಯನ್ನು ಸೇವಿಸಬೇಡಿ.

ಬೆಳ್ಳುಳ್ಳಿ:
ಜೀರ್ಣಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿಗೆ ತಾಯಿಹಾಲನ್ನು ಹೆಚ್ಚಿಸುವ ಶಕ್ತಿಯೂ ಇದೆ. ಮೂರು ಎಸಳು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ಒಂದು ಲೋಟ ನೀರಿನಲ್ಲಿ ಕುದಿಸಿ. ಕುದಿಬಂದ ಬಳಿಕ ಜ್ವಾಲೆಯನ್ನು ಚಿಕ್ಕದಾಗಿಸಿ ಈ ನೀರು ಕಾಲುಭಾಗವಾಗುವವರೆಗೂ ಮುಂದುವರೆಸಿ. ಈಗ ಒಂದು ಕಪ್ ಹಸುವಿನ ಹಾಲನ್ನು ಹಾಕಿ ಮತ್ತೊಮ್ಮೆ ಕುದಿ ಬರಿಸಿ. ಕುದಿಬಂದ ಬಳಿಕ ಇಳಿಸಿ ಸೋಸಿ ಅರ್ಧ ಚಮಚ ಜೇನು ಸೇರಿಸಿ ಕಲಕಿ. ಈ ದ್ರವವನ್ನು ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಸುಮಾರು ಆರು ತಿಂಗಳವರೆಗೂ ಇದನ್ನು ಕುಡಿಯುವುದು ಶ್ರೇಯಸ್ಕರ.

ಶುಂಠಿಯ ಪೇಸ್ಟ್:
ನಿಮ್ಮ ನಿತ್ಯದ ಅಡುಗೆಗಳಲ್ಲಿ ಶುಂಠಿ ಯಥೇಚ್ಛವಾಗಿರುವಂತೆ ನೋಡಿಕೊಳ್ಳಿ. ಹಸಿಶುಂಠಿಯ ಪೇಸ್ಟ್ ಮಾಡಿಕೊಂಡು ನಿಮ್ಮ ನಿತ್ಯದ ಅಡುಗೆಗಳಾದ ಸಾರು, ಪಲ್ಯ ಮೊದಲಾದವುಗಳ ಜೊತೆ ಸೇರಿಸುವ ಮೂಲಕ ರುಚಿಯನ್ನು ಹೆಚ್ಚಿಸುವ ಜೊತೆಗೆ ತಾಯಿಹಾಲಿನ ಉತ್ಪಾದನೆಯಲ್ಲಿಯೂ ಹೆಚ್ಚಳವಾಗುತ್ತದೆ.

ಹಸುವಿನ ಹಾಲು:
ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿರುವಂತೆಯೇ ತಾಯಿಹಾಲಿನ ಉತ್ಪಾದನೆಯಲ್ಲಿಯೂ ನೀರು ಅಗತ್ಯವಾಗಿದೆ. ಈ ಅಗತ್ಯವನ್ನು ಪೂರೈಸುವಲ್ಲಿ ಅತ್ಯುತ್ತಮವಾದುದು ಹಸುವಿನ ಹಾಲು. ಇದರಲ್ಲಿ ಶೇಖಡಾ ಎಂಭತ್ತು ಅಪ್ಪಟ ನೀರು ಇರುವುದರಿಂದ ಹಾಗೂ ಹಾಲಿನಲ್ಲಿರುವ ಇತರ ಪೋಷಕಾಂಶಗಳು ತಾಯಿಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಬೇರೆ ಸಮಯದಲ್ಲಿ ಎಂಟು ಲೋಟ ನೀರು ನಿಮಗೆ ಅಗತ್ಯವಿದೆ. ಪ್ರಥಮ ತಿಂಗಳುಗಳಲ್ಲಿ ಈ ಪ್ರಮಾಣವನ್ನು ಸುಮಾರು ಹನ್ನೆರಡು ಲೋಟಗಳಿಗೆ ಹೆಚ್ಚಿಸುವುದು ಒಳಿತು.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

twelve + ten =