ನೈಸರ್ಗಿಕವಾಗಿ ಬಿಪಿ ಕಂಟ್ರೋಲ್ ಮಾಡಲು ಈ ಆಹಾರ ಸೇವನೆ ಉತ್ತಮ

Call us

ರಕ್ತದೊತ್ತಡವನ್ನು ಸಮನಾಗಿ ಕಾಯ್ದುಕೊಳ್ಳಲು ಡಯಟ್ ಮಾಡುವುದು ಹಿಂಸೆಯ ಕೆಲಸ. ಅದರಲ್ಲೂ ಡಯಾಬಿಟೀಸ್ ಇದ್ದರೆ ಮುಗಿಯಿತು ಯಾರಿಗೂ ಬೇಡ ಆ ಹಿಂಸೆ. ದೇಹದ ತೂಕ, ಮಾನಸಿಕ ಒತ್ತಡ, ನಮ್ಮ ಚಟುವಟಿಕೆಗಳೂ ರಕ್ತದೊತ್ತಡ ಏರಿಳಿತದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯಕರವಾದ ಡಯಟ್ ಮೂಲಕ ಬಿಪಿ ಕಂಟ್ರೋಲ್‌ನಲ್ಲಿಟ್ಟುಕೊಳ್ಳಬಹುದು. ನಮ್ಮ ನಿಸರ್ಗವೇ ನಮ್ಮ ಬಿಪಿ ಕಂಟ್ರೋಲ್ ಮಾಡಲು ಬೇಕಾದ ಅಗತ್ಯ ಆಹಾರ ವಸ್ತುಗಳನ್ನು ಹೊಂದಿದೆ. ನಾವು ಉಪಯೋಗಿಸಿಕೊಳ್ಳಬೇಕಷ್ಟೆ.

Call us

ಸಿಹಿಗುಂಬಳ ಕಾಯಿ ಮತ್ತು ಅದರ ಬೀಜ:
ಇರಾನ್ ಮೆಕ್ಸಿಕೋದಲ್ಲಿ ಸಿಹಿಗುಂಬಳಕಾಯಿ ಹಾಗೂ ಅದರ ಬೀಜವನ್ನು ಡಯಾಬಿಟೀಸ್‌ಗೆ ಸಾಂಪ್ರದಾಯಿಕ ಪರಿಹಾರವಾಗಿ ಬಳಸುತ್ತಾರೆ. ಆಂಟಿ ಆಕ್ಸೈಡೆನ್ಸ್ ಹಾಗೂ ಫೈಬರ್ ಇರುವುದರಿಂದ ಸಿಹಿಗುಂಬಳಕಾಯಿ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಸಿಹಿಗುಂಬಳಕಾಯಿಯ ಬೀಜದ ಹುಡಿ ಮನುಷ್ಯರು ಹಾಗೂ ಪ್ರಾಣಿಗಳಲ್ಲಿಯೂ ರಕ್ತದೊತ್ತಡ ಸಮತೋಲನ ಮಾಡಲು ಸಹಕಾರಿ.

ಸೀಫುಡ್-ಮೀನು, ಏಡಿ, ಸಿಗಡಿ ಇತ್ಯಾದಿ:
ಸೀಪುಡ್‌ನಲ್ಲಿರುವ ಪ್ರೋಟೀನ್ ಹೆಚ್ಚಾಗಿರುತ್ತದೆ. ಮೀನು, ಚಿಪ್ಪು ಮೀನುಗಳು, ಏಡಿ, ಸಿಗಡಿಗಳಲ್ಲಿ ಆರೋಗ್ಯಕರ ಫಾಟ್, ಮಿನರಲ್ಸ್, ವಿಟಮಿನ್ಗಳಿರುತ್ತದೆ ಸೀಪುಡ್‌ನಲ್ಲಿರುವ ವಿಶೇಷವಾಗಿ ಸಾಲ್ಮನ್ ಹಾಗೂ ಸಾರ್ಡೈನ್ಸ್ಗಳಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿರುತ್ತದೆ ಇದು ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ ಆಹಾರ ಜೀರ್ಣವಾಗುವುದಕ್ಕೂ ನೆರವಾಗುವುದರ ಜೊತೆಗೆ ಡಯಾಬಿಟೀಸ್ ಹೆಚ್ಚುವುದನ್ನು ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ಮೀನಿನ ಖಾದ್ಯಗಳು ನೀವು ಹೆಚ್ಚಿನ ಆಹಾರ ಸೇವಿಸುವುದನ್ನು ತಡೆದು, ವೆಯಿಟ್ ಲಾಸ್ಗೂ ನೆರವಾಗುತ್ತದೆ. ಸಿಗಡಿ ಆರೋಗ್ಯಕ್ಕೂ ಉತ್ತಮ.

ಒಣ ಬೀಜಗಳೂ ಹಾಗೂ ಒಣ ಬೀಜಗಳಿಂದ ತಯಾರಿಸಿದ ಬಟರ್:
ಬಾದಾಮಿ, ಬಟಾಣಿ, ಶೇಂಗಾ ಅಥವಾ ನೆಲಗಡಲೆ ಬಿಪಿ ಕಂಟ್ರೋಲ್‌ನಲ್ಲಿಡಲು ನೆರವಾಗುತ್ತದೆ. ಇನ್ನು ಒಣ ಬೀಜಗಳ ಬಟರ್ನ್ಗಳನ್ನು ಬಳಸುವುದರಿಂದ ಟೈಪ್2 ಡಯಬಿಟೀಸ್ ನಿಯಂತ್ರಿಸಿಕೊಳ್ಳಬಹುದು.

ಬ್ರೊಕಾಲಿ:
ಬ್ರೊಕಾಲಿಯಲ್ಲಿ ಸಲ್ಫೊರಫೇನ್ ಎಂಬ ಅಂಶ ಇರುತ್ತದೆ. ಇದು ಬ್ರಕಾಲಿ ಕತ್ತರಿಸಿದಾಗ ಅಥವಾ ಜಗಿದಾಗ ಹೊರಬರುತ್ತದೆ ಇದು ಬಿಪಿ ಕಡಿಮೆ ಮಾಡಲು ನೆರವಾಗುತ್ತದೆ. ಹಾಗೆಯೇ ಇದರಲ್ಲಿ ಆಂಟಿ-ಡಯಾಬಿಟಿಕ್ ಅಂಶವೂ ಇದೆ ಎನ್ನಲಾಗುತ್ತಿದೆ.

ಬೆಂಡೆಕಾಯಿ:
ಓಕ್ರಾ ಅಥವಾ ಬೆಂಡೆಕಾಯಿಯಲ್ಲಿ ಫ್ಲೆವೋನಾಯ್ಡ್ ಎಂಬ ಅಂಶವಿರುತ್ತದೆ. ಟರ್ಕಿಯಂತಹ ರಾಷ್ಟ್ರದಲ್ಲಿ ಓಕ್ರಾ ಬೀಜಗಳನ್ನು ಡಯಾಬಿಟೀಸ್ ಚಿಕಿತ್ಸೆಗೆ ಬಳಸುತ್ತಾರೆ. ಇದು ರಕ್ತದೊತ್ತಡ ಕಡಿಮೆ ಮಾಡುವುದಕ್ಕೂ ನೆರವಾಗುತ್ತದೆ.

Call us

ಲೆಂಟಿಲ್‌ಗಳು ಮತ್ತು ಧಾನ್ಯಗಳು:
ಬೀನ್ಸ್ ಹಾಗೂ ಧವಸ ಧಾನ್ಯಗಳು ನಿಮ್ಮನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ಬಿಪಿಯನ್ನು ಕಡಿಮೆ ಮಾಡುತ್ತದೆ. ಡಯಬಿಟೀಸ್ ಹೆಚ್ಚುವುದನ್ನು ಇದು ನಿಯಂತ್ರಿಸುತ್ತದೆ. ಕಪ್ಪು ಬೀನ್ಸ್ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಬಿಪಿ ನಿಯಂತ್ರಿಸಬಹುದು.

ಮೊಟ್ಟೆ:
ಮೊಟ್ಟೆಗಳಲ್ಲಿ ಆರೋಗ್ಯಕರ ಫ್ಯಾಟ್, ವಿಟಮಿನ್, ಮಿನರಲ್ಸ್ಗಳಿರುತ್ತವೆ. ಇದು ರಕ್ತದೊತ್ತಡ ನಿಯಂತ್ರಸಿಸುತ್ತದೆ. ಪ್ರತಿನ ದಿನ 1 ಅಥವಾ 2 ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಓಟ್ಸ್:
ಓಟ್ಸ್‌ಗಳಲ್ಲಿ ಸೊಲ್ಯುಬಲ್ಫೈಬರ್ ಇರುತ್ತದೆ. ಇದು ಕ್ರಮೇಣ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ. ಬಿಪಿ ಹೆಚ್ಚಾಗುವುದನ್ನು ಇದು ತಡೆಯುತ್ತದೆ.

ಚಿಯಾ ಬೀಜ:
ಚಿಯಾ ಬೀಜಗಳನ್ನು ನಿಯಮಿತವಾಗಿ ಬಳಸುವವರು ಆರೋಗ್ಯವಾಗಿರುತ್ತಾರೆ. ಅವರ ಬಿಪಿ ಕಂಟ್ರೋಲ್ನಲ್ಲಿರುತ್ತದೆ. ಟೈಪ್2 ಡಯಬಿಟೀಸ್ ಶಮನ ಮಾಡುತ್ತದೆ.

ಫ್ಲಾಕ್ಸ್ ಬೀಜಗಳು:
ಇದರಲ್ಲಿ ಆರೋಗ್ಯಕರ ಫ್ಯಾಟ್ ಹಾಘೂ ಫೈಬರ್ ಇರುತ್ತದೆ. ಇದು ದೇಹಕ್ಕೆ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ. ಪ್ರತಿದಿನ 30 ಗ್ರಾಂ ಫ್ಲಕ್ಸ್ ಸೀಡ್ ಸೇವಿಸಿದರೆ ಬಿಪಿ ನಿಯಂತ್ರಣಕ್ಕೆ ಸಹಕಾರಿ.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

1 × five =