ಬೆಳಿಗ್ಗೆ 7 ರಿಂದ 11: ಅಗತ್ಯ ವಸ್ತುಗಳನ್ನು ಕೊಳ್ಳಲು ಸಮಯ ನಿಗದಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾಡಳಿತ ಸಮಯ ನಿಗದಿಗೊಳಿಸಿದ್ದು, ಬೆಳಿಗ್ಗೆ 7 ರಿಂದ ಬೆಳಿಗ್ಗೆ 11 ಗಂಟೆಯ ತನಕ ಮಾತ್ರ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಸ್ತುಗಳನ್ನು ಖರೀದಿಸಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

Call us

Call us

Visit Now

ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಾಗರಿಕ ಸಂಚಾರವನ್ನು ನಿಬಂಧಿಸಲಾಗಿದ್ದರೂ, ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ನೀಡಲಾಗಿತ್ತು. ಇದರಿಂದ ಜನರು ಅನಗತ್ಯವಾಗಿ ಹೊರಬರುತ್ತಿರುವುದನ್ನು ಮನಗಂಡು ಜಿಲ್ಲಾದ್ಯಂತ ಒಂದೇ ಸಮಯ ನಿಗದಿಗೊಳಿಸಲಾಗಿದ್ದು, ಮಾಚ್. 29ರಿಂದಲೇ ಜಾರಿಗೊಳ್ಳಲಿದೆ.

Click here

Call us

Call us

ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಮೀನು, ಮಾಂಸ, ಹಾಲು, ಹಣ್ಣು ಹಂಪಲುಗಳನ್ನು ಬೆಳಿಗ್ಗೆ 7 ರಿಂದ ಬೆಳಿಗ್ಗೆ11ರ ತನಕ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ವರ್ತಕರು ನಿಗದಿತ ಅವಧಿಯಲ್ಲಿಯೇ ಅಂಗಡಿಗಳನ್ನು ಮುಚ್ಚಬೇಕು. ಮೆಡಿಕಲ್ ಶಾಪ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಅನಗತ್ಯವಾಗಿ ತಿರುಗಾಡುವುದು ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಈ ಹಿಂದೆ ಬೆಳಿಗ್ಗೆ 9 ರಿಂದ ಸಂಜೆ 6ರ ತನಕ ಅಂಗಡಿ ತೆರೆಯಲು ಅವಕಾಶ ನೀಡಲಾಗಿತ್ತು. ಈಗ ಅದು ರದ್ದಾಗಲಿದೆ.

Leave a Reply

Your email address will not be published. Required fields are marked *

1 × 5 =