ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದದ ಟಿಪ್ಸ್

ಮಳೆಗಾಲ ಬಂತೆಂದರೆ ಶೀತದ ವಾತಾವರಣದ ಕಾರಣದಿಂದ ಕಾಯಿಲೆ ಬೀಳುವುದು ಅಧಿಕ. ಇದನ್ನು ತಡೆಗಟ್ಟಲು ನಾವು ಮಳೆಗಾಲದಲ್ಲಿ ನಮ್ಮ ಉಡುಪು, ಆಹಾರ ಶೈಲಿ ಎಲ್ಲವನ್ನೂ ಬದಲಾಯಿಸಬೇಕು.

ಮಳೆಗಾಲದಲ್ಲಿ ವಾತಾವರಣದಲ್ಲಿ ವಾತ ಹಾಗೂ ಪಿತ್ತದ ದೋಷದ ಕಾರಣ ಜೀರ್ಣಕ್ರಿಯೆ ದುರ್ಬಲವಾಗುವುದು. ಮಳೆಗಾಲದಲ್ಲಿ ಕಾಯಿಲೆ ಬೀಳಲು ಇದು ಪ್ರಮುಖ ಕಾರಣವಾಗಿದೆ. ಆಹಾರಕ್ರಮದಲ್ಲಿ ಸಮತೋಲನ ಕಾಪಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಆಹಾರಕ್ರಮ ಹೇಗಿರಬೇಕು ಎಂದು ನೋಡೋಣ

ತಾಜಾ ಹಾಗೂ ಲಘು ಆಹಾರ ಸೇವಿಸಿ

 •  ಮಳೆಗಾಲದಲ್ಲಿ ಅಕ್ಕಿ, ಬಾರ್ಲಿ, ಗೋಧಿ ಇವುಗಳಿಂದ ತಯಾರು ಮಾಡುವ ಆಹಾರ ಸೇವಿಸಿ. ಧಾನ್ಯಗಳು, ತುಪ್ಪ ಇಂಥ ಪದಾರ್ಥಗಳನ್ನು ಸೇವಿಸಿ.
  ಪ್ರತೀ ಊಟದ ಮೊದಲಿಗೆ ಸ್ವಲ್ಪ ಶುಂಠಿ, ಒಂದು ಒಂದು ಹರಳು ಕಲ್ಲುಪ್ಪು ತಿನ್ನಿ.
  ಸಾಲ್ಟ್ ಅಂಡ್ ಸೋರ್ ಸೂಪ್ ಬಳಸಿ. ಈರುಳ್ಳಿ ಹಾಗೂ ಇತರ ತರಕಾರಿಗಳನ್ನು ಹೆಚ್ಚಾಗಿ ಬಳಸಿ.

ಇವುಗಳನ್ನು ತಿನ್ನಿ

 • ತುಂಬಾ ಮಳೆ ಬರುತ್ತಿದ್ದರೆ ಹುಳಿಯಂಶದ, ಉಪ್ಪಿನಂಶದ, ಎಣ್ಣೆಯಂಶದ ಆಹಾರ ಸೇವಿಸಿ.
  ಕುದಿಸಿ ಆರಿದ ನೀರಿಗೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದು ಒಳ್ಳೆಯದು.
  ಶುಂಠಿ, ಏಲಕ್ಕಿಯನ್ನು ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಿ.
  ಮಳೆಗಾಲದಲ್ಲಿ ಅಳಲೆಕಾಯಿ ಜೊತೆ ಸ್ವಲ್ಪ ಕಲ್ಲುಪ್ಪು ಸೇರಿಸಿ ತಿನ್ನುವುದು ಒಳ್ಳೆಯದು. ನೀರು ಚೆನ್ನಾಗಿ ಕುಡಿಯಿರಿ ಮಳೆಗಾಲದಲ್ಲಿ ಬಾಯಾರಿಕೆಯಾಗುತ್ತಿಲ್ಲವೆಂದು ನೀರು ಕುಡಿಯುವುದು ಕಮ್ಮಿ ಮಾಡಬೇಡಿ. ದಿನದಲ್ಲಿ 8 ಲೋಟ ನೀರು ಕುಡಿಯಿರಿ. ಈ ಸಮಯದಲ್ಲಿ ಸ್ವಲ್ಪ ಬೆಚ್ಚಗಿನ ನೀರು ಅಥವಾ ಸೂಪ್ ಕುಡಿಯಿರಿ.

ಯಾವ ಆಹಾರ ದೂರವಿಡಬೇಕು

 • ಮಳೆಗಾಲದಲ್ಲಿ ಸೊಪ್ಪು ತಿನ್ನಬೇಡಿ. ಅಲ್ಲದೆ ತಂಗಳು ಆಹಾರ ಸೇವಿಸಬೇಡಿ.
  ಕೆಂಪು ಮಾಂಸ, ಮೊಸರು ಅಲ್ಲದೆ ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುವಂಥ ಆಹಾರ ಸೇವಿಸಬೇಡಿ. ಮೊಸರು ಬದಲಿಗೆ ಮಜ್ಜಿಗೆ ತೆಗೆದುಕೊಳ್ಳಬಹುದು.

ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು

 • ಮಳೆಗಾಲದಲ್ಲಿ ಹಗಲು ಹೊತ್ತಿನಲ್ಲಿ ನಿದ್ದೆ ಮಾಡಬೇಡಿ, ಇದು ಜೀರ್ಣಕ್ರಿಯೆಯನ್ನು ನಿಧಾನವಾಗಿಸುತ್ತೆ.
  ಸೂರ್ಯನ ಕಿರಣಗಳು ಬಿದ್ದರೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲಿ.
  ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಡಿ, ಮಳೆ ನೀರು ಒಳಗೆ ಬಾರದಂತೆ ವ್ಯವಸ್ಥೆ ಮಾಡಿ.
  ದೇಹವನ್ನು ಬೆಚ್ಚಗಿಡುವ ಉಡುಪು ಧರಿಸಿ.
  ಒದ್ದೆ ಬಟ್ಟೆ ಧರಿಸಿ ಅಥವಾ ತಲೆ ಕೂದಲು ಒದ್ದೆ ಇರುವಾಗ ಎಸಿ ಇರುವ ರೂಮ್ಗೆ ಹೋಗಬೇಡಿ.
  ಕೊಳಕು ನೀರಿನಲ್ಲಿ ನಡೆದಾಡಬೇಡಿ.
  ಪಾದಗಳನ್ನು ಒಣಗಿಸಿ ಇಡಿ, ನೀರಿನಂಶವಿದ್ದರೆ ಬೆರಳುಗಳ ನಡುವೆ ಕೆಸರು ಕಜ್ಜಿಯಾಗಿ ತುರಿಕೆ ಉಂಟಾಗುವುದು.
  ಮಳೆ ನೀರಿನಲ್ಲಿ ನೆನೆಯಬೇಡಿ. ಒಂದು ವೇಳೆ ನೆನೆದರೆ ಬೇಗನೆ ಸ್ನಾನ ಮಾಡಿ ಬಟ್ಟೆ ಬದಲಾಯಿಸಿ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕಾಯಿಲೆ ಬೀಳುವುದು.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

nineteen − nine =