ಕುಂದಾಪುರ ಟಿ.ಟಿ ರಸ್ತೆ ಮಕ್ಕಳ ಉದ್ಯಾನವನವೀಗ ಸ್ವಚ್ಛ – ಸುಂದರ. ವರದಿಗೆ ಸ್ಪಂದಿಸಿದ ಪುರಸಭೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮಾ.18:
ಇಲ್ಲಿನ ಟಿಟಿ (ತಾತ್ಯಾ ಟೋಪೆ) ರಸ್ತೆ ಆಶ್ರಯ ಕಾಲನಿಯಲ್ಲಿನ ಮಕ್ಕಳ ಉದ್ಯಾನವನವನ್ನು ಇದೀಗ ಸ್ವಚ್ಛಗೊಳಿಸಲಾಗಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಕುಂದಾಪ್ರ ಡಾಟ್ ಕಾಂ ವರದಿ ಪ್ರಕಟಿಸಿದ ಬಳಿಕ ಪಾರ್ಕ್ ತುಂಬೆಲ್ಲಾ ಹರಡಿಕೊಂಡಿದ್ದ ಮದ್ಯ ಬಾಟಲ್‌ಗಳು, ಕಸದ ರಾಶಿಯನ್ನು ತೆರವು ಮಾಡಿ ಗಿಡಗಂಟಿಯನ್ನೆಲ್ಲಾ ಕಡಿದು ಸ್ವಚ್ಛಗೊಳಿಸಿದೆ.

Call us

Call us

ಈ ಪರಿಸರದ ಮಕ್ಕಳಿಗೆ ಆಟವಾಡಲು, ನಾಗರಿಕರಿಗೆ ಸಂಜೆಯ ವಿಹಾರಕ್ಕಾಗಿ ಪುರಸಭೆ ನಿರ್ಮಿಸಿದ್ದ ಉದ್ಯಾನವನವು ಸಾರ್ವಜನಿಕರ ನಿರಾಸಕ್ತಿ ಹಾಗೂ ಪುರಸಭೆಯ ನಿರ್ವಹಣೆ ಇದ್ದಲೇ ಪಾಳು ಕೊಂಪೆಯಂತಾಗಿತ್ತು. ರಾಶಿ ರಾಶಿ ಮದ್ಯದ ಬಾಟೆಲ್, ಬಾಟೆಲ್ ಚೂರುಗಳು, ಕಸದ ರಾಶಿಯಿಂದಲೇ ತುಂಬಿಕೊಂಡಿತ್ತು.

Call us

Call us

ಸದ್ಯ ಪಾರ್ಕ್ ಸ್ವಚ್ಛ ಮಾಡಿದ ನಂತರ ರಾತ್ರಿವೇಳೆ ಯಾರೂ ಪಾರ್ಕ್ ಪ್ರವೇಶಿಸದಂತೆ ಗೇಟಿಗೆ ಬೀಗ ಹಾಕುವ ವ್ಯವಸ್ಥೆ ಮಾಡಲಾಗಿತ್ತಾದರೂ ಮತ್ತೆ ದುಷ್ಕರ್ಮಿಗಳು ತಡೆಬೇಲಿ ಕಿತ್ತು ವಿಕೃತಿ ಮೆರೆದಿದ್ದಾರೆ. ಇಂತಹ ಚಟುವಟಿಕೆಗಳ ಬಗ್ಗೆ ನಿಗಾ ಇಡಲು ಲೈವ್ ಟ್ರ್ಯಾಕಿಂಗ್ ಸಿಸಿ ಕ್ಯಾಮರಾ, ಪಾರ್ಕ್ ಒಳಾಂಗಣದಲ್ಲಿ ಸುಂದರ ಕೈದೋಟಗಳನ್ನು ನಿರ್ಮಿಸುವ ಅಗತ್ಯವಿದೆ. ಪಾರ್ಕ್ ಬಳಿ ಇರುವು ಗುಜರಿ ಬಸ್ ಅಕ್ರಮ ಚಟುವಟಿಕೆಗೆ ದಾರಿಮಾಡಿಕೊಡುತ್ತಿದ್ದು, ಕೂಡಲೇ ತೆರವುಗೊಳಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:
► ನಿರುಪಯುಕ್ತವಾಯ್ತೆ ಕುಂದಾಪುರದ ಟಿ.ಟಿ ರಸ್ತೆ ಪಾರ್ಕ್? ವಿಹಾರ ತಾಣದಲ್ಲಿ ಮದ್ಯ ಬಾಟಲಿಗಳ ರಾಶಿ! – https://kundapraa.com/?p=57991 .

Leave a Reply

Your email address will not be published. Required fields are marked *

3 × 3 =