ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಡಿ ಸಹಾಯಧನ-ಅರ್ಜಿ ಆಹ್ವಾನ

Click Here

Call us

Call us

ಕುಂದಾಪ್ರ ಡಾಟ್ ಕಾಂ’ ಸುದ್ದಿ
ಉಡುಪಿ: 2019-20 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಆಸಕ್ತ ರೈತರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Call us

Call us

Click Here

Visit Now

ಗೇರು, ತೆಂಗು, ಕಾಳುಮೆಣಸು, ಅನಾನಸು, ಬಾಳೆ, ಕೊಕ್ಕೋ, ಮ್ಯಾಂಗೋ ಸ್ಟೀನ್, ರಾಂಬುಟಾನ ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ ಲಭ್ಯವಿದೆ. ತೋಟಗಾರಿಕಾ ಬೆಳೆಗಳಲ್ಲಿ ರೋಗ/ ಕೀಟಗಳ ನಿಯಂತ್ರಣಕ್ಕೆ ಖರೀದಿಸಿದ ಸಸ್ಯ ಸಂರಕ್ಷಣಾ ಔಷಧಿಗಳಿಗೆ, ಸಸ್ಯ ಪೋಷಕಾಂಶಗಳಿಗೆ ಗೇರು, ತೆಂಗು ಹಾಗೂ ಕಾಳುಮೆಣಸು ಹಳೆ ತೋಟಗಳ ಪುನಶ್ಚೇತನಕ್ಕಾಗಿ, ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ, ಹಸಿರು ಮನೆ, ನೆರಳು ಪರದೆ ನಿರ್ಮಾಣಕ್ಕಾಗಿ ಸಣ್ಣ ಪ್ರಮಾಣದ ಸಸ್ಯಗಾರ ಸ್ಥಾಪನೆಗೆ, ತೆಂಗಿನಲ್ಲಿ ರೋಗ / ಕೀಟ ನಿಯಂತ್ರಣಕ್ಕಾಗಿ ಪರಿಕರಗಳ ಖರೀದಿಗೆ ಜೇನು ಕೃಷಿ ತರಬೇತಿಯೊಂದಿಗೆ, ಜೇನು ಪೆಟ್ಟಿಗೆ, ಜೇನು ತೆಗೆಯುವ ಯಂತ್ರಗಳ ಖರೀದಿಗೆ ಹಾಗೂ ಮಧುವನಗಳ ಸ್ಥಾಪನೆಗೆ ಸಹಾಯಧನ ಲಭ್ಯವಿದೆ. ತೋಟಗಾರಿಕೆಯಲ್ಲಿ ಬಳಸುವ ಯಂತ್ರಗಳ ಖರೀದಿಗೆ 20 HP ಕ್ಕಿಂತ ಕಡಿಮೆ ಸಾಮರ್ಥ್ಯದ ಟ್ರಾಕ್ಟರ್ ಖರೀದಿಗೆ, ಪ್ಯಾಕ್ ಹೌಸ್ ಹಾಗೂ ಪ್ರಾಥಮಿಕ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕಾಗಿ ಸಹಾಯಧನ ಲಭ್ಯವಿದೆ.

Click here

Click Here

Call us

Call us

ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ, ತುಂತುರು ನೀರಾವರಿ, ಮೈಕ್ರೋ ಸ್ಪ್ರಿಂಕ್ಲರ್, ಮಿನಿ ಸ್ಪ್ರಿಂಕ್ಲರ್ ಅಳವಡಿಕೆಗೆ ಸಹಾಯಧನ ಸಿಗಲಿದೆ. ನಗರ ವ್ಯಾಪ್ತಿಯ ಆಸಕ್ತರಿಂದ ತಾರಸಿ ಕೈತೋಟ ತರಬೇತಿ ಹಾಗೂ ಮಿನಿಕಿಟ್‌ಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದಲ್ಲದೆ ವಿವಿಧ ತರಬೇತಿ ಕಾರ್ಯಕ್ರಮಗಳು, ಪ್ರವಾಸ ಕಾರ್ಯಕ್ರಮಗಳನ್ನು ಇಲಾಖೆ ಆಯೋಜಿಸಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಾರ್ಗಸೂಚಿಗನುಗುಣವಾಗಿ ಸಹಾಯಧನ ದೊರಕಲಿದೆ.

ಆಸಕ್ತ ರೈತರು ಪಹಣಿ, ಆಧಾರ್ ಪ್ರತಿ, ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜಾತಿ ಪ್ರಮಾಣ ಪತ್ರ (ಪ.ಜಾತಿ/ ಪಂಗಡ) ಹಾಗೂ ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪತ್ರದೊಂದಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಹಿರಿಯ ಸಹಾಯಕ ತೊಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

thirteen + thirteen =