ಕೊರಗ ಕಾಲೋನಿ ಮನೆ ಮೇಲೆ ಮರ ಬಿದ್ದು ಮೂರು ದಿನವಾಯ್ತು!

ಕುಂದಾಪುರ: ತಾಲೂಕಿನ ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೋಷನಿಧಾಮ ಕೊರಗ ಕಾಲನಿಯಲ್ಲಿರುವ ಮನೆಯೊಂದರ ಮೇಲೆ ತೆಂಗಿನ ಮರವು ಶನಿವಾರ ಮಧ್ಯಾಹ್ನ ಉರುಳಿ ಬಿದ್ದಿದೆ. ಘಟನೆ ನಡೆದು ಮೂರು ದಿನ ಕಳೆದರೂ ಮರ ತೆರವುಗೊಳಿಸದಿರುವುದು ಜಿಡ್ಡು ಹಿಡಿದ ವ್ಯವಸ್ಥೆಯ ದರ್ಶನ ಮಾಡಿಸಿದಂತಿದೆ.

ಮರ ಬಿದ್ದು ಮನೆ ಮೇಲ್ಮಾಡು ಹಾನಿಯಾಗಿದ್ದು, ಹೆಂಚು, ರೀಪುಗಳು ಪುಡಿಯಾಗಿದೆ. ಹಳೆಯ ಮನೆಯಾದ್ದರಿಂದ ಕಾರಣ ಯಾವುದೇ ಸಮಯದಲ್ಲೂ ಮರದ ಭಾಗಕ್ಕೆ ಗೋಡೆಯೂ ಕುಸಿಯುವ ಭೀತಿಯಿಂದ ಸ್ಥಳೀಯ ಕೊರಗ ನಿವಾಸಿ ಬದುಕುವಂತಾಗಿದೆ. ಈ ನಡುವೆ ಪಂಚಾಯತ್, ಮರ ಕಡಿಯುವವರು ಸಿಗದ ಕಾರಣ ಇಂದು (ಮಂಗಳವಾರ) ತೆರವು ಗೊಳಿಸುವ ಭರವಸೆಯನ್ನು ನೀಡಿದೆ.

07-04-2015

Leave a Reply

Your email address will not be published. Required fields are marked *

sixteen − 7 =