ಗಣೇಶ ವಿಗ್ರಹ ಕೊಂಡೊಯ್ಯವ ವೇಳೆ ಅನ್ಯ ಕೋಮಿನವರಿಂದ ತಡೆ. ಬೈಂದೂರಿನಲ್ಲಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತ ಹಿಂದುಗಳ ತಾಯ್ನೆಲ, ಹಿಂದು ರಾಷ್ಟ್ರ ಎಂಬುದು ವಿವಾದಗಳಿಗೆ ಕಾರಣವಾಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ದುರಂತ. ಹಿಂದುಗಳು ತಮ್ಮ ಹಬ್ಬಹರಿದಿನಗಳನ್ನು ಆಚರಿಸುವಂತೆ ಇಲ್ಲ. ಹಕ್ಕುಗಳನ್ನು ಪ್ರತಿಪಾದಿಸುವಂತೆಯೂ ಇಲ್ಲ. ಧಾರ್ಮಿಕ ಆಚರಣೆಗಳನ್ನು ಮಾಡಲು ಸಾಧ್ಯವಿಲ್ಲದ ದುಸ್ಥಿತಿ ಹಿಂದು ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಸುನಿಲ್ ಕೆ. ಆರ್. ಹೇಳಿದರು.

ಬೈಂದೂರು ಬೈಪಾಸಿನಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ನಡೆದ ಬೃಹತ್ ಪ್ರತಿಭಟನೆಯ ನಂತರ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ನಮ್ಮಲ್ಲಿ ಧರ್ಮದ ವ್ಯತ್ಯಾಸಗಳಿದ್ದರೂ ಅದನ್ನು ತಮ್ಮ ತಮ್ಮ ಮನೆಗಳಲ್ಲಿ ಮಾಡಿಕೊಳ್ಳಬೇಕು. ಧರ್ಮದ ವಿಚಾರದಲ್ಲಿ ಗಲಭೆ ಸೃಷ್ಠಿಸುವವರ ಬಗ್ಗೆ ಜಾಗರೂಕರಾಗಿರಬೇಕಿದೆ. ಜನಪರ ಕಾನೂನುಗಳನ್ನು ಜಾರಿಗೊಳಿಸದೇ ಸರಕಾರಗಳೆ ಕಾನೂನು ಉಲ್ಲಂಘನೆ ಮಾಡುತ್ತಿದೆ ಎಂದ ಅವರು ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಧರ್ಮದ ಮೇಲಿನ ಶೃದ್ಧೆಯನ್ನು ಕಡಿಮೆ ಮಾಡುವ ವ್ಯವಸ್ಥಿತ ಸಂಚು ತೆರೆಮರೆಯಲ್ಲಿ ನಡೆಯುತ್ತಿದೆ ಆರೋಪಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಿಹಿಂಪ ಬಜರಂಗದಳ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಮಾತನಾಡಿ ಘೋರಿ ಮಹಮ್ಮದ್, ಘಜ್ನಿ ಮಹಮ್ಮದ್‌ನಂತಹ ವಿಗ್ರಹ ಭಂಜಕರ ಸಂತಾನದವರಾದ ಕೆಲವರು ಶಿರೂರು ಬುಖಾರಿ ಕಾಲೋನಿಯಲ್ಲಿದ್ದಾರೆ. ಈ ಮತಾಂಧರು ನಡೆಸಿದ ಹಿಂದೂ ವಿರೋಧಿ ಕುಕೃತ್ಯವನ್ನು ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾಗಿ ಪ್ರತಿಭಟಿಸುವ ಅನಿವಾರ್ಯತೆಯಿದೆ ಎಂದರು.

ವಿಹಿಂಪ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು, ಹಿಂಜಾವೇ ಜಿಲ್ಲಾಧ್ಯಕ್ಷ ಅರವಿಂದ್ ಕೋಟೇಶ್ವರ, ಬೈಂದೂರು ಪ್ರಖಂಡದ ಅಧ್ಯಕ್ಷ ಸುಧೀರ್, ಬಜರಂಗದಳ ಬೈಂದೂರು ಪ್ರಖಂಡದ ಅಧ್ಯಕ್ಷ ನಿತ್ಯಾನಂದ, ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ಎನ್. ದೀಪಕ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಗೋರಕ್ಷಾ ಪ್ರಮುಖ್ ಜಗದೀಶ್ ಕೊಲ್ಲೂರು ನಿರೂಪಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಿಹಿಂಪ, ಬಜರಂಗದಳ, ಹಿಂಜಾವೇ ಹಾಗೂ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು. ಬೈಪಾಸಿನಿಂದ ಘೋಷಣೆಗಳನ್ನು ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ಪೋಲಿಸ್ ಠಾಣೆ ಎದುರು ಜಮಾಯಿಸಿದರು. ನಂತರ ಮನವಿ ಸ್ವಿಕರಿಸಿದ ಠಾಣಾಧಿಕಾರಿ ದೇವರಾಜ್ ಅಪರಾಧಿಗಳನ್ನು ಪತ್ತೆಮಾಡಿ ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Leave a Reply

Your email address will not be published. Required fields are marked *

five × 2 =