ಲೋಕಸಭಾ ಟಿಕೆಟ್: ಜೆ. ಪಿ ಹೆಗ್ಡೆ ಪರ ಮೊಳಗಿದ ಟ್ವಿಟಿಗರ ಧ್ವನಿ

Click Here

Call us

Call us

ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿಸುವಂತೆ ಆಗ್ರಹ

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ಪರ ಟ್ವೀಟರನಲ್ಲಿ ಬಿಜೆಪಿ ಕಾರ್ಯಕರ್ತರು ಧ್ವನಿಯೆತ್ತಿದ್ದು, ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೇಟ್ ನೀಡಿ ಎಂಬ ಆಗ್ರಹವನ್ನು ಪ್ರಕಟಿಸಿದ್ದಾರೆ. ಇದು ಜ.5ರಂದು ಟ್ವಿಟರಿನಲ್ಲಿ ಟ್ರೆಂಡ್ ಆಗಿತ್ತು.

Click Here

Click here

Click Here

Call us

Call us

ಜಯಪ್ರಕಾಶ್ ಹೆಗ್ಡೆ ಅವರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಟಿಕೇಟ್ ನೀಡಬೇಕು ಎಂಬ ಬೇಡಿಕೆಯನ್ನು ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಜೆಪಿ ಹೆಗ್ಡೆಯವರಿಗೆ ಟಿಕೇಟು ನೀಡಬೇಕು ಮೋದಿಜಿ ಆಡಳಿತದಲ್ಲಿ ಜೆಪಿ ಹೆಗ್ಡೆಯವರಂತಹ ಸಮರ್ಥ ದಕ್ಷ ಆಡಳಿತ ಚತುರರು ಸಂಸದರಾಗಬೇಕು ಹಾಗಾದಾಗ ಮಾತ್ರ ಸಮಗ್ರ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಯಪ್ರಕಾಶ್ ಹೆಗ್ಡೆಯವರು ಸಂಸದರಾಗಿ ಸಚಿವರಾಗಿ ಶಾಸಕರಾಗಿ ಹಿರಿಯ ರಾಜಕೀಯ ಅನುಭವಿಗಳು ಹಾಗೂ ಕ್ಷೇತ್ರದ ಬಗ್ಗೆ ಸಮಗ್ರ ಪರಿಚಯ ಹೊಂದಿರುತ್ತಾರೆ, ತಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿರುವ ಅವರ ಆಡಳಿತವನ್ನು ಹಿಂದೊಮ್ಮೆ ಜನತೆ ನೋಡಿದ್ದಾರೆ. ಅಂತಹ ಜನಸ್ಪಂದನೆಯ ನಾಯಕರು ನಮಗೆ ಇನ್ನೊಮ್ಮೆ ಬೇಕು ಎಂಬಂತೆ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾರ್ಯಕರ್ತರು ಧ್ವನಿಸಿದ್ದಾರೆ. ಅವರಿಗೆ ನೀವು ಟೀಕೆಟ್ ನೀಡಿ, ಜಯಗೊಳಿಸುವುದು ನಮ್ಮ ಕರ್ತವ್ಯ ಎಂಬಂತೆ ಬಿಜೆಪಿ ಕಾರ್ಯಕರ್ತರು ಟ್ವೀಟ್ ಮಾಡಿದ್ದಾರೆ. #JPH4UdupiChikmagalur2019 ಹ್ಯಾಷ್ ಟ್ಯಾಗ್’ನಲ್ಲಿ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಟ್ವೀಟ್ಗಳೂ ಬಂದಿವೆ ಇನ್ನೂ ಹೆಚ್ಚುತ್ತಲೆ ಇದೆ. ಅದು ರಾಷ್ಟ್ರಮಟ್ಟದಲ್ಲಿ ಎಂಟನೇ ಸ್ಥಾನ ಮತ್ತು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದು ಟ್ರೆಂಡ್ ಆಗಿದ್ದು ಬಹು ಮೆಚ್ಚುಗೆಯಾಗಿತ್ತು.

ಬಿಜೆಪಿ ಪಕ್ಷದ ನಾಯಕರುಗಳು ಪಕ್ಷದ ಕಾರ್ಯಕರ್ತರ ಧ್ವನಿಗೆ ಸ್ಪಂದಿಸಿ ಟಿಕೇಟು ನೀಡಿದರೆ ಜೆಪಿ ಹೆಗ್ಡೆಯವರು ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದು ದಾಖಲೆ ನಿರ್ಮಿಸಲಿದ್ದಾರೆ ಎನ್ನುತ್ತಾರೆ ಜೆ.ಪಿ ಹೆಗ್ಡೆ ಅವರ ಅಭಿಮಾನಿ ನಾಗರಾಜ ಶೆಟ್ಟಿ ನೈಕಂಬ್ಳಿ

Leave a Reply

Your email address will not be published. Required fields are marked *

16 − 10 =