ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಕೋಟೇಶ್ವರ ಕೋಟಿಲಿಂಗೇಶ್ವರದ ಕೆರೆಗೆ ಸ್ನಾನಕ್ಕೆಂದು ಇಳಿದ ಇಬ್ಬರು ಯುವಕರು ನೀರುಪಾಲಾಗಿರುವ ಖೇದಕರ ಘಟನೆ ವರದಿಯಾಗಿದೆ. ಕೋಟೇಶ್ವರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ, ಸೇನಾಪುರದ ನಿವಾಸಿ ಕೀರ್ತನ್ (19) ಬಿಕಾಂ ವಿದ್ಯಾರ್ಥಿ ಕಾಳವಾರದ ನಿವಾಸಿ ಸಚಿನ್ (19) ಮೃತ ದುರ್ದೈವಿಗಳು
ಪರೀಕ್ಷೆಯ ಹಾಲ್ ಟಿಕೇಟ್ ತೆಗೆದುಕೊಳ್ಳಲು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಐವರು ವಿದ್ಯಾರ್ಥಿಗಳು ಕಾಲೇಜಿನಿಂದ ಕೋಟೇಶ್ವರದ ಕೋಟಿಲೀಗೇಶ್ವರ ಕೆರೆಯ ಬಳಿ ತೆರಳಿದ್ದರು. ಅವರಲ್ಲಿ ಕೀರ್ತನ್ ಹಾಗೂ ಸಚಿನ್ ಸ್ನಾನಕ್ಕೆಂದು ನೀರಿಗಿಳಿದಿದ್ದರು. ಬಹಳ ಹೊತ್ತು ನೀರಿನಿಂದ ಮೇಲೆ ಬಾರದ್ದನ್ನು ಗಮನಿಸಿದ ಇನ್ನೋರ್ವ ವಿದ್ಯಾರ್ಥಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ
ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೊಂದು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಕುಂದಾಪುರ ಪೊಲೀಸ್ ಠಾಣಾಧಿಕಾರಿ ಹರೀಶ್ ಹಾಗೂ ಇತರೆ ಸಿಬ್ಬಂಧಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.