ಧರ್ಮ ಸಂಸದ್: ಹಿಂದು ಧರ್ಮಿಯರ ಮಹಾ ಸಂಗಮಕ್ಕೆ ಕೃಷ್ಣ ನಗರಿ ಸಜ್ಜು

ಕುಂದಾಪ್ರ ಡಾಟ್ ಕಾಂ ವರದಿ.
ಉಡುಪಿ: ವಿಶ್ವ ಹಿಂದು ಪರಿಷತ್(ವಿಎಚ್ಪಿ) ವತಿಯಿಂದ ಉಡುಪಿಯಲ್ಲಿ ನ.24ರಿಂದ 26ರ ತನಕ ಕಲ್ಸಂಕದ ರಾಯಲ್ ಗಾರ್ಡನ್ನಲ್ಲಿ ನಡೆಯಲಿರುವ ಸಂತ ಸಮಾವೇಶದಲ್ಲಿ 2 ಸಾವಿರಕ್ಕೂ ಅಧಿಕ ಸಾಧು ಸಂತರು, 1 ಸಾವಿರ ಗಣ್ಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ಧರ್ಮ, ಸಮಾಜ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ಮಕ್ಕಳಿಗೆ ಪರಿಚಯಿಸಿ ಯುವಜನರನ್ನು ತೊಡಗಿಸುವ ಮಹೋನ್ನತ ಗುರಿ ಹೊಂದಿರುವ ಧರ್ಮ ಸಂಸದ್ ಈಗ ಪ್ರಾಚೀನ ಪರಂಪರೆಯ ಜತೆಗೆ ಆಧುನಿಕತೆಗೂ ತೆರೆದುಕೊಂಡಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.

[quote bgcolor=”#ffffff” arrow=”yes” align=”right”] ಬೈಂದೂರು ಪ್ರಖಂಡದಿಂದ 10,000 ಮಂದಿ ಭಾಗಿಯಾಗುವ ನಿರೀಕ್ಷೆ:

ನ.26ರಂದು ಜರುಗುವ ವಿಶ್ವ ಹಿಂದು ಸಮಾಜೋತ್ಸವಕ್ಕೆ ಬೈಂದೂರು ಪ್ರಖಂಡದಿಂದ ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಖಂಡದ ಪ್ರತಿ ಗ್ರಾಮಗಳಿಗೂ ತೆರಳಿ ನ.24ರಿಂದ 26ರ ತನಕ ಧರ್ಮ ಸಂಸದ್ ಹಾಗೂ ಹಿಂದೂ ಸಮಾಜೋತ್ಸವದ ಬಗ್ಗೆ ಮಾಹಿತಿ ತಲುಪಿಸಲಾಗಿದೆ. ಧರ್ಮ ಜಾಗೃತಿಗಾಗಿ ಅತ್ಯಧಿಕ ಹಿಂದೂ ಭಾಂದವರು ಹಾಗೂ ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಶ್ರೀಧರ ಬಿಜೂರು, ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡ [/quote]

ನ.24ರಂದು ಉದ್ಘಾಟನೆ, ನಂತರ ಗೋಷ್ಠಿಗಳು, ಚರ್ಚೆ, ಸಂವಾದ ನಡೆಯಲಿದೆ. ನ.25ರಂದು ಬೆಳಗ್ಗೆ 9ಕ್ಕೆ ಮುಂದುವರೆದ ಚರ್ಚೆ, ಸಂವಾದ, ಸಮಾಲೋಚನೆ ನಿರ್ಣಯ ಕೈಗೊಳ್ಳಲಾಗುವುದು. ನ.26ರಂದು ಬೆಳಗ್ಗೆ 9ಕ್ಕೆ ಕರ್ನಾಟಕದ ಎಲ್ಲ ಜಿಲ್ಲೆಗಳ ಹಿಂದೂ ಸಕಲ ಸಮಾಜ ಪ್ರಮುಖರ ಸಮಾಲೋಚನಾ ಸಭೆ, ಧರ್ಮ ಸಂಸದ್ ನಿರ್ಣಯಗಳ ಕ್ರಿಯಾ ಯೋಜನೆ ನಡೆಸಲಾಗುವುದು. ಅಂದು ಮಧ್ಯಾಹ್ನ 3ಕ್ಕೆ ಸಂತರ, ಸಮಾಜದ ಪ್ರಮುಖರ ನೇತೃತ್ವದಲ್ಲಿ ಹಿಂದೂ ಬಂಧು- ಭಗಿನಿಯರ ಬೃಹತ್ ಆಕರ್ಷಕ ಶೋಭಾಯಾತ್ರೆ, 4.30ಕ್ಕೆ ಹಿಂದೂ ಸಮಾಜೋತ್ಸವ, ನಂತರ ಸಮ್ಮೇಳನದಲ್ಲಿ ಸ್ವಾಮೀಜಿಗಳಿಂದ ಧರ್ಮ ಸಂಸದ್ ಸಂದೇಶ ನಡೆಯಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಧರ್ಮ ಸಂಸದ್ 5 ಪ್ರಮುಖ ಅಜೆಂಡಾ ಹೊಂದಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಗೋ ಸಂರಕ್ಷಣೆ ಹಾಗೂ ಲವ್ ಜಿಹಾದ್, ಭಯೋತ್ಪಾದನೆ, ಜಾತೀಯತೆ ನಿವಾರಣೆಯೊಂದಿಗೆ ಸಾಮರಸ್ಯಕ್ಕೆ ಒತ್ತು ನೀಡುವ ಪ್ರಮುಖ ಅಜೆಂಡಾ ಹೊಂದಿದೆ.

ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದಗಳ 5ನೇ ಪರ್ಯಾಯ ಕಾಲದಲ್ಲಿ ಅಧಿವೇಶನ ನಡೆಯುತ್ತಿರುವುದು ವಿಶೇಷ. ಸಂಸದ್ನ ವಿಚಾರ ಮಂಥನದಲ್ಲಿ ಜಾತಿ, ಲಿಂಗ ತಾರತಮ್ಯವಿರದೇ ಸಮಸ್ತ ಹಿಂದೂ ಬಂಧು ಭಗಿನಿಯರಿಗೆ ಸಮಾನ ಧಾರ್ಮಿಕ ಸ್ವಾತಂತ್ರ್ಯ, ಗೋಸಂವರ್ಧನೆ, ಗೋರಕ್ಷಣೆ, ಸಮಗ್ರ ಗೋಸಂರಕ್ಷಣಾ ಕಾನೂನು, ಮತಾಂತರ ತಡೆದು ಪುನರಾಗಮನದ ವೇಗ ಹೆಚ್ಚಿಸಲು ಸಂತರ ಸಕ್ರಿಯತೆ, ಸಾಂಸ್ಕೃತಿಕ ಆಕ್ರಮಣಕ್ಕೆ ತಡೆ, ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಮಂದಿರ ಪುನರ್ನಿರ್ಮಾಣ ಕುರಿತು ಚರ್ಚಿಸಲಾಗುತ್ತಿದೆ.

ಏನಿದು ಧರ್ಮ ಸಂಸದ್?:
ಸಾಧು, ಸಂತರು, ವಿದ್ವತ್ ಸಭೆಯಿಂದ ಮಂಡಿತ ಸಲಹೆ ಅನುಷ್ಠಾನಕ್ಕೆ 1984ರಲ್ಲಿ ಧರ್ಮ ಸಂಸದ್ ರೂಪು ತಳೆಯಿತು. 1984ರ ಏ.7, 8ರಂದು ಹೊಸದಿಲ್ಲಿಯಲ್ಲಿ ಮೊದಲ ಧರ್ಮ ಸಂಸದ್ ನಡೆದರೆ 2ನೇ ಧರ್ಮ ಸಂಸದ್ ಉಡುಪಿಯಲ್ಲಿ 1985ರಲ್ಲಿ ನಡೆದಿತ್ತು. ಶ್ರೀರಾಮ ಜನ್ಮಭೂಮಿ ತಾಲಾ ಖೋಲೋ(ತೆರೆದು ಬಿಡಿ ರಾಮ ಲಲ್ಲಾ ಗುಡಿಯ ಬೀಗ) ನಿರ್ಣಯಕ್ಕೆ ಪ್ರಧಾನಿ ರಾಜೀವ್ ಗಾಂಧಿ ಸ್ಪಂದಿಸಿದ್ದು ಮಂದಿರ ನಿರ್ಮಾಣ ಆಂದೋಲನಕ್ಕೆ ವೇದಿಕೆಯಾಯಿತು. ಲೋಕಸಭೆ(ಸಂಸತ್) ಜನರಿಂದ ಆಯ್ಕೆಯಾದ ಸಂಸದರು, ರಾಜ್ಯಸಭೆ ಸದಸ್ಯರನ್ನು ಪ್ರತಿನಿಧಿಸಿದರೆ ಹಿಂದೂ ಸಾಧು ಸಂತರು, ಧಾರ್ಮಿಕ ನಾಯಕರು ಧರ್ಮ ಸಂಸದ್ ಪ್ರತಿನಿಧಿಗಳಾಗಿದ್ದು, ನಾನಾ ಸಂಪ್ರದಾಯಗಳ ಯತಿಗಳು ಒಂದೆಡೆ ಸೇರಿ ಸಮಾಜದ ಆಗುಹೋಗುಗಳು, ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತಾರೆ.

ವಿಹಿಂಪ ಸ್ಥಾಪನೆ:
ವಿಶ್ವ ಹಿಂದು ಪರಿಷತ್ 1964ರ ಆ. 29ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ಮುಂಬಯಿಯ ಪೊವಾಯಿಯಲ್ಲಿರುವ ಸ್ವಾಮಿ ಚಿನ್ಮಯಾನಂದರ ಆಶ್ರಮದ ಸಾಂದೀಪನಿ ಸಾಧನಾಲಯದಲ್ಲಿ ಸ್ಥಾಪನೆಯಾಗಿದ್ದು, ಉಡುಪಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಾಕ್ಷಿಯಾಗಿದ್ದರು.

ಅಸ್ಪೃಶ್ಯತೆ ನಿವಾರಣೆ ನಿರ್ಣಯ:
ಉಡುಪಿಯಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು 2ನೇ ಪರ್ಯಾಯ ಸಂದರ್ಭ 1969ರ ಡಿ. 13, 14ರಂದು ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ವಿಹಿಂಪ ಕರ್ನಾಟಕ ಪ್ರಾಂತೀಯ ಸಮ್ಮೇಳನ ನಡೆದಿದ್ದು ಅಸ್ಪೃಶ್ಯತೆ ನಿವಾರಣೆಯ ಮಹತ್ವದ ಘೋಷಣೆ, ಸಂದೇಶವನ್ನು ದೇಶಕ್ಕೆ ನೀಡಿದೆ. 60 ಧರ್ಮಾಚಾರ್ಯರು, ವಿಹಿಂಪ ಅಧ್ಯಕ್ಷ ಉದಯಪುರದ ಮಹಾರಾಣಾ, ಗ್ವಾಲಿಯರ್ ರಾಜಮಾತೆ ವಿಜಯರಾಜೇ ಸಿಂಧಿಯಾ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ(ಸ್ವಾಗತ ಸಮಿತಿ ಅಧ್ಯಕ್ಷರು), ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಹಿರಿಯ ಲೇಖಕಿ ಜಯದೇವ ತಾಯಿ ಲಿಗಾಡೆ ಉಪಸ್ಥಿತರಿದ್ದರು.

ಐಎಎಸ್ ನಿವೃತ್ತ ಅಧಿಕಾರಿ ಆರ್. ಭರಣಯ್ಯ ಹಾಗೂ ಆರೆಸ್ಸೆಸ್ ಸರ ಸಂಘ ಚಾಲಕ ಗುರೂಜಿ ಗೋಳ್ವಲ್ಕರ್ ಭಾಷಣ ಎಲ್ಲರ ಮನ ತಟ್ಟಿದ್ದಲ್ಲದೆ ಗೋಳ್ವಲ್ಕರ್, ಭರಣಯ್ಯ ಅಪ್ಪುಗೆ ಗಮನ ಸೆಳೆದಿತ್ತು. ನಿರೀಕ್ಷೆಗೂ ಮೀರಿ ಸಾಧು ಸಂತರು, ಪ್ರತಿನಿಧಿಗಳು ಬಂದ ಹಿನ್ನೆಲೆಯಲ್ಲಿ ಮನೆ ಮನೆ ಆತಿಥ್ಯ ಉಡುಪಿ ಅಡುಗೆ ಜತೆಗೆ ಜನಜನಿತವಾಗಿತ್ತು.

ಪೇಜಾವರ ಶ್ರೀ ಸಂದೇಶ ಸಂಚಲನ: ನ ಹಿಂದುರ್ಪತಿತೋ ಭವೇತ್ ಹಾಗೂ ಹಿಂದವಃ ಸೋದರಾಃ ಸರ್ವೇ ಎನ್ನುವ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಘೋಷವಾಕ್ಯ ಸಹಿತ ಸಂದೇಶ ಸಭೆಯಲ್ಲಿ ಸಂಚಲನ ಮೂಡಿಸಿದ್ದು, ಅಸ್ಪೃಶ್ಯತೆ ವಿರುದ್ಧ ಉಡುಪಿ ನಿರ್ಣಯ ದೇಶಕ್ಕೆ ಮಾದರಿಯಾಗಿತ್ತು.

ನಿರ್ಣಾಯಕ ನಿರ್ಧಾರ: ಈ ಬಾರಿಯ ವಿಚಾರ ಮಂಥನವೇನು?
*ಜಾತಿ, ಲಿಂಗ ತಾರಮ್ಯದಿಂದ ಸಮಸ್ತ ಹಿಂದೂ ಬಂಧು, ಭಗಿನಿಯರಿಗೆ ಸಮಾನ ಧಾರ್ಮಿಕ ಸ್ವಾತಂತ್ರ್ಯ.
*ಗೋ ಸಂವರ್ಧನೆ, ಗೋ ರಕ್ಷಣೆ, ಸಮಗ್ರ ಗೋ ಸಂರಕ್ಷಣಾ ಕಾನೂನು.
*ಮತಾಂತರ ತಡೆದು ಪುನರಾಗಮನದ ವೇಗ ಹೆಚ್ಚಿಸಲು ಸಂತರ ಸಕ್ರಿಯತೆ.
*ಸಾಂಸ್ಕೃತಿಕ ಆಕ್ರಮಣಕ್ಕೆ ತಡೆ, ಮನೆಗಳಲ್ಲಿ ಹಿಂದೂ ಸಂಸ್ಕೃತಿ, ಸ್ವಾಭಿಮಾನ ಬೆಳೆಸುವ ಯೋಜನೆ.
*ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ಪುನನಿರ್ಮಾಣದ ಕುರಿತು ಚಿಂತನೆ.

ಹಿಂದು ಧರ್ಮ, ಸಮಾಜ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ಮಕ್ಕಳಿಗೆ ಪರಿಚಯಿಸಿ ಯುವಜನರನ್ನು ತೊಡಗಿಸುವ ಗುರಿ ಹೊಂದಿದ ಧರ್ಮ ಸಂಸದ್ ಈಗ ಪ್ರಾಚೀನ ಪರಂಪರೆಯ ಜತೆಗೆ ಆಧುನಿಕತೆಗೂ ತೆರೆದುಕೊಂಡಿದೆ. ಉಡುಪಿ ಅಡುಗೆ ವಿಶೇಷವಾದ ರಸಂ, ಹುಳಿ, ಪಾಯಸ, ಸ್ವೀಟ್, ಉತ್ತರ ಭಾರತೀಯರಿಗೆ ಇಷ್ಟವಾದ ಚಪಾತಿ, ದಾಲ್ ದೊರೆಯಲಿದೆ. ಮಣ್ಣಿಗೆ, ನೀರು ಬೆಸಿಗೆಯ ದಾಹ ತಣಿಸಲಿದೆ.

 

Leave a Reply

Your email address will not be published. Required fields are marked *

15 − 4 =