ಉಡುಪಿ ಜಿಲ್ಲೆ: ಹಾಪ್‌ಕಾಮ್ಸ್‌ನಲ್ಲಿ ಸಂಜೆ 7ರ ತನಕ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯ ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ ಹಾಪ್‌ಕಾಮ್ಸ್, ರೈತರಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅನುವಾಗುವಂತೆ ಬೆಳಿಗ್ಗೆ 7 ರಿಂದ ಸಂಜೆ 7ರ ತನಕ ಹಾಪ್‌ಕಾಮ್ಸ್ ಮಳಿಗೆ ತೆರೆದಿರಲು ಜಿಲ್ಲಾಧಿಕಾರಿ ಜಿ. ಜಗದೀಶ್ ಅನುಮತಿ ನೀಡಿದ್ದಾರೆ.

Click Here

Call us

Call us

ಉಡುಪಿ ಜಿಲ್ಲೆಯಲ್ಲಿನ ಉಡುಪಿ ನಗರ, ಉಪ್ಪುಂದ ಹಾಗೂ ಕಾರ್ಕಳ ಆಸ್ಪತ್ರೆ ಆವರಣದಲ್ಲಿರುವ ಹಾಪ್ ಕಾಮ್ಸ್ ಮಳಿಗೆಗಳನ್ನು ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ತೆರೆಯುವುದು ಹಾಗೂ ಮಳಿಗೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯವರಿಗೆ ಕೋವಿಡ್-19 ಸೊಂಕು ತಗಲಿರುವುದಿಲ್ಲ ಹಾಗೂ ಸದರಿ ರೋಗ ಲಕ್ಷಣಗಳಿರುವುದಿಲ್ಲ ಎಂಬ ಬಗ್ಗೆ ದೃಢೀಕರಿಸಿಕೊಂಡು ಅವರಿಂದ ಸೇವೆ ಪಡೆದುಕೊಳ್ಳಬೇಕು.

Click here

Click Here

Call us

Visit Now

ಕೋವಿಡ್-19 ಸೊಂಕು ಹರಡದಂತೆ ಅಗತ್ಯ ಮುಂಜಾಗೃತಾ ಕ್ರಮಗಳಾದ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್‌ಗಳನ್ನು ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು , ಮಳಿಗೆಗಳಲ್ಲಿ ಮಾರಾಟ ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳು ಉತ್ತಮ ಗುಣಮಟ್ಟ ಹೊಂದಿರತಕ್ಕದ್ದು ಹಾಗೂ ನೈಜ ದರಗಳಲ್ಲಿ ಮಾರಾಟ ಮಾರಾಟ ಮಾಡಬೇಕು, ಮಳಿಗೆಗಳಲ್ಲಿ ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳ ದರಪಟ್ಟಿಯನ್ನು ಮಳಿಗೆಯಲ್ಲಿ ಪ್ರದರ್ಶಿಸಬೇಕು, ಪ್ರತಿ ದಿನ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗಳ ವಿವರ ಹಾಗೂ ರೈತರ ವಿವರ, ರೈತರಿಗೆ ನೀಡಿದ ದರ ಹಾಗೂ ಮಾರಾಟ ಮಾಡಿದ ದರದ ವಿವರವನ್ನು ತೋಟಗಾರಿಕಾ ಉಪ ನಿರ್ದಶಕರು (ಜಿ.ಪಂ.), ಉಡುಪಿರವರಿಗೆ ಒದಗಿಸುವುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

 

Leave a Reply

Your email address will not be published. Required fields are marked *

nineteen − 2 =