ಉಡುಪಿ ಜಿಲ್ಲೆ ಲಾಕ್‌ಡೌನ್: ಅನವಶ್ಯಕವಾಗಿ ಹೊರಗೆ ಬಂದ್ರೆ ಕಾನೂನು ಕ್ರಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯಾದ್ಯಂತ ಲಾಕ್‌ಡೌನ್ ಮಾಡಲು ಸರಕಾರ ಆದೇಶಿಸಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಕರ್ಫ್ಯೂ ಜಾರಿಯಲ್ಲಿದೆ.  ಸರಕಾರದ ಆದೇಶವನ್ನು ‌ನಾಗರಿಕರು ಪಾಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕೋರಿಕೊಂಡಿದ್ದಾರೆ.

Call us

Call us

 ಉಡುಪಿ ಜಿಲ್ಲೆಯಲ್ಲಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಮಾರ್ಚ್ 23ರ ಮಧ್ಯರಾತ್ರಿಯಿಂದ ಲಾಕ್‌ಡೌನ್ ಮಾಡಲಾಗುತ್ತಿದೆ. ಅನಗತ್ಯವಾಗಿ ಮನೆಯಿಂದ ಹೊರಕ್ಕೆ ಬಂದರೆ ಕಾನೂನು‌ ಕ್ರಮ ಜರುಗಿಸಲಾಗುವುದು. ನಾಗರಿಕರು ಮನೆಯಲ್ಲೇ ಇದ್ದು ಕರೋನಾ ವೈರಸ್ ತಡೆಗೆ ಸಹಕರಿಸಬೇಕಾಗಿ ಅವರು ತಿಳಿಸಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ತುರ್ತು ಸೇವೆಗಳಷ್ಟೇ ಲಭ್ಯವಿರಲಿದೆ. ಮೆಡಿಕಲ್, ಆಹಾರ ಸಾಮಾಗ್ರಿ, ಹಣ್ಣು, ತರಕಾರಿ, ಮೀನು-ಮಾಂಸ ಲಭ್ಯವಿರಲಿದೆ. ಉಳಿದಂತೆ ಯಾವುದೇ ಸರಕಾರಿ, ಖಾಸಗಿ ಸಾರಿಗೆ ಸೇವೆಗಳು ಲಭ್ಯವಿರುವುದಿಲ್ಲ. ಅನಗತ್ಯವಾಗಿ ಖಾಸಗಿ ವಾಹನಗಳು ತಿರುಗಲು ಬಿಡುವುದಿಲ್ಲ ಎಂದಿರುವ ಅವರು, ತುರ್ತು ಸಂದರ್ಭದಲ್ಲಿ ಸರಕಾರ, ಪೊಲೀಸ್ ಇಲಾಖೆ ಸ್ಪಂದಿಸಲಿದೆ ಎಂದಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

fourteen − four =