ಮರಳು ಅಡ್ಡೆಗೆ ದಾಳಿ ನಡೆಸಲು ತೆರಳಿದ್ದ ಜಿಲ್ಲಾಧಿಕಾರಿ – ಉಪವಿಭಾಗಾಧಿಕಾರಿಗೆ ಕೊಲೆ ಯತ್ನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಾಲೂಕಿನಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟಹಾಕಲು ತೆರಳಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರ ಮೇಲೆ ಕೊಲೆ ಯತ್ನ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ.

Call us

Call us

Visit Now

ಅಕ್ರಮ ಮರಳುಗಾರಿಕೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಹಲವು ದೂರುಗಳು ಬರುತ್ತಿದ್ದು, ಜಿಲ್ಲಾಧಿಕಾರಿಗಳೇ ಸ್ವತಃ ಬಂದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳೂವಂತೆ ಆಗ್ರಹಿಸುತ್ತಿದ್ದರು. ಹಾಗಾಗಿ ಭಾನುವಾರ ರಾತ್ರಿ ೧೦ ಗಂಟೆಯ ಸುಮಾರಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅವರ ಅಂಗರಕ್ಷಕ ಹಾಗೂ ಜಿಲ್ಲಾಪಂಚಾಯತಿಯ ಗುತ್ತಿಗೆ ವಾಹನದ ಚಾಲಕ, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಅವರ ಪತಿ, ಹಾಗೂ ಚಾಲಕನೊಂದಿಗೆ ಎರಡು ವಾಹನಗಳಲ್ಲಿ ತೆರಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ತೆರಳಿದ್ದರು.

Click here

Click Here

Call us

Call us

ಹಳ್ನಾಡಿ – ಕಡ್ಲೂರು ಮರಳು ಧಕ್ಕೆಗೆ ದಾಳಿ:
ಹಳ್ನಾಡಿ ಧಕ್ಕೆಯ ಕಡೆಗೆ ವಾಹನದಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಗಳು ಬೈಕಿನಲ್ಲಿ ಬೆಂಬತ್ತಿಕೊಂಡು ಬರುತ್ತಿದ್ದುದು ಗಮನಕ್ಕೆ ಬಂದಿದೆ. ಕೆಲವು ಲಾರಿಯ ಚಾಲಕರು ಲಾರಿಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಧಕ್ಕೆಯ ಬಳಿ ಜಿಲ್ಲಾಧಿಕಾರಿಗಳ ತಂಡ ತಲುಪಿದ ವೇಳೆ ಕೆಲವೊಂದು ಉತ್ತರಭಾರತದ ಕಾರ್ಮಿಕರು ಅಲ್ಲಿ ಟೆಂಟ್ ಹಾಕಿ ಅಲ್ಲಿ ಮರುಳು ತೆಗೆಯುತ್ತಿದ್ದರು ಅಲ್ಲದೆ ಹೆಚ್ಚಿನ ಮರಳು ಕೂಡ ದಾಸ್ತಾನು ಮಾಡಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬಳಿಕ ಕಂಡ್ಲೂರು ಮರಳುಗಾರಿಕೆ ಧಕ್ಕೆಯ ಬಳಿ ತೆರಳುತ್ತಿದ್ದ ವೇಳೆ ಕೂಡ ಸುಮಾರು ಬೈಕುಗಳಲ್ಲಿ ಹಿಂಭಾಲಿಸಿಕೊಂಡ ಬರುತ್ತಿದ್ದರು. ಕಂಡ್ಲೂರು ಬ್ರಿಡ್ಜ್ ಬಳಿ ಧಕ್ಕೆಯ ಬಳಿ ಸುಮಾರು ಕಾರ್ಮಿಕರ ಟೆಂಟ್ ಇದ್ದು, ಅಲ್ಲಿ ಜಿಲ್ಲಾಧಿಕಾರಿಗಳನ್ನು ಕಂಡ ಕೂಡಲೇ ಕಾರ್ಮಿಕರು ಓಡಿ ಹೋಗಿದ್ದಾರೆ.

ಹಲ್ಲೆ ಹಾಗೂ ಕೊಲೆ ಯತ್ನ:
ಧಕ್ಕೆಯಿಂದ ಓಡಿಹೋದ ಕಾರ್ಮಿಕರನ್ನು ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಹಾಗೂ ಡ್ರೈವರ್ ಅವರನ್ನು ಹಿಡಿಯವ ಸಲುವಾಗಿ ಬೆನ್ನಟ್ಟಿದಾಗ ಕಾರ್ಮಿಕರೆಲ್ಲ ಅಲ್ಲಿಯೇ ಪಕ್ಕದಲ್ಲಿದ್ದ ಮನೆಯ ಒಳಗಡೆ ಒಡಿದ್ದು, ಕೂಡಲೇ ಆ ಮನೆಯಿಂದ ಸುಮಾರು ಮಂದಿ ಮಹಿಳೆಯರು, ವೃದ್ದರು ಹೊರಗಡೆ ಬಂದಿದ್ದು, ಅವರ ಜೊತೆ ಬೈಕಿನಲ್ಲಿ ಬಂದ ಜನರು ಕೂಡ ಸೇರಿಕೊಂಡು ಸುಮಾರು 60ಕ್ಕೂ ಅಧಿಕ ಮಂದಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಧಿಕಾರಿ ತಂಡದ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅದೇ ವೇಳೆ ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಹಾಗೂ ಡ್ರೈವರ್ ಮೇಲೆ ಮೊದಲು ಹಲ್ಲೆ ನಡೆಸಿದ್ದು ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ತಾನು ಜಿಲ್ಲಾಧಿಕಾರಿ ಎಂದು ಪರಿಚಯಿಸಿಕೊಂಡಾಗ ಜಿಲ್ಲಾಧಿಕಾರಿಗೆ ಅವಾಚ್ಯಾ ಶಬ್ದಗಳಿಂದ ಬೈದದಲ್ಲದೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಯ ಮೇಲೆ ಹಲ್ಲೆಯನ್ನು ಮಾಡಲು ಕೂಡ ಹೋದರು ಅಲ್ಲದೆ ಪಕ್ಕದಲ್ಲೇ ಇದ್ದ ಉಪವಿಭಾಗಾಧಿಕಾರಿಯ ಪತಿ ಹಾಗೂ ಡ್ರೈವರ್ ಮೇಲೆ ಕೂಡ ಹಲ್ಲೆ ನಡೆಸಲು ಬಂದಿದ್ದು ಸ್ಥಳದಲ್ಲೇ ಇದ್ದ ಅಂಪಾರು ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಾದಿಕಾರಿ ಸಹಾಯಕ್ಕೆ ಬಂದರು ಆಗ ಅವರಿಗೂ ಕೂಡ ಹಲ್ಲೆ ನಡೆಸಿದ್ದಾರೆ. ಬಳಿಕ ಇನ್ನೂ ಹೆಚ್ಚು ಹೊತ್ತು ಇರುವುದು ಅಪಾಯ ಎಂದು ಅರಿತ ಜಿಲ್ಲಾಧಿಕಾರಿಗಳು ಅಲ್ಲಿಂದ ವಾಪಾಸು ಹೊಗಲು ನಿರ್ದರಿಸಿ ಎರಡೂ ವಾಹನಗಳಲ್ಲಿ ವೇಗವಾಗಿ ವಾಪಾಸು ಬಂದರು ಅದರೆ ಈ ವೇಳೆ ಗ್ರಾಮ ಲೆಕ್ಕಿಗರು ಅಲ್ಲಿದ್ದು ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೂಡಲೇ ಅವರನ್ನು ರಕ್ಷಿಸುವ ಉದ್ದೇಶದಿಂದ ಪೋಲಿಸರಿಗೆ ಮಾಹಿತಿ ನೀಡಿ ಕೂಡಲೇ ಸ್ಥಳಕ್ಕೆ ಹೋಗುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದರು. ಆದರೆ ಪೋಲಿಸರು ಅಲ್ಲಿಗೆ ತಲುಪುವಾಗಲೇ ಜನರೆಲ್ಲಾ ಸೇರಿ ಅವರಿಗೆ ಹೊಡೆದಿದ್ದು ಪೋಲಿಸರ ವಾಹನ ನೋಡಿ ಬಳಿಕ ಆತನನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Click Here

ಉಡುಪಿ ಠಾಣೆಯಲ್ಲಿ ಎಫ್‌ಐಆರ್:
ಪೋಲಿಸರ ಜೊತೆ ಮರಳು ಅಡ್ಡೆಗಳಿಗೆ ಹೊರಟಾಗ ಅಕ್ರಮ ದಂದೆಕೋರರಿಗೆ ಮಾಹಿತಿ ಲಭಿಸಿ ಅಲ್ಲಿಂದ ಪರಾರಿಯಾಗುತ್ತಿದ್ದರು ಇದರಿಂದ ಜನ ಜಿಲ್ಲಾಡಳಿತದ ವಿರುದ್ದವೇ ಆರೋಪ ಮಾಡುತ್ತಿದ್ದರು ಅದ್ದರಿಂದ ತಾನು ಸ್ವತಃ ತನ್ನ ಗನ್ ಮ್ಯಾನ್ ಜೊತೆ ಧಾಳಿ ಮಾಡಲು ಇಂತಹ ಒಂದು ರಿಸ್ಕ ತೆಗೆದುಕೊಂಡು ಹೋಗಿದ್ದೆ ಎಂದಿರುವ ಜಿಲ್ಲಾಧಿಕಾರಿಗಳು, ಈಗ ಉಡುಪಿಯ ನಗರ ಠಾಣೆಯಲ್ಲಿ ಈ ಕುರಿತು ಎಫ್ ಐ ಆರ್ ದಾಖಲಿಸುತ್ತೇನೆ. ನಾವು ಎಲ್ಲರೂ ಜೊತೆಯಾಗಿ ಸರಕಾರಿ ಕರ್ತವ್ಯವದ ವೇಳೆ ಕೊಲೆಯತ್ನ ಹಾಗೂ ಹಲ್ಲೆ ಕುರಿತು ಪ್ರಕರಣ ದಾಖಲಿಸಲು ಸೂಚಿಸಿದ್ದು ಗ್ರಾಮ ಲೆಕ್ಕಿಗರನ್ನು ಕೂಡ ಇಲ್ಲಿಗೆ ಕರೆಯಿಸಿದ್ದೇನೆ. ಗ್ರಾಮ ಲೆಕ್ಕಿಗರಿಗೆ ಹೊಡೆಯುವುದಾಗಿ ಹೇಳೀದ ಆಡಿಯೋ ಕ್ಲಿಪ್ ಹಾಗೂ ತಮಗೆ ಹೆದರಿಸಿದ ವ್ಯಕ್ತಿಗಳ ಫೋಟೊ ನಮ್ಮಲ್ಲಿದ್ದು ಸಾಕ್ಷಿಯಾಗಿ ಅದನ್ನು ಪೋಲಿಸರಿಗೆ ನೀಡಲಿದ್ದೇವೆ ಎಂದಿದ್ದಾರೆ.

ಆರು ಮಂದಿ – ಲಾರಿ ವಶ:
ಹಳ್ಳಾಡಿಯಲ್ಲಿ ಬಿಟ್ಟು ಹೋಗಿದ್ದ ಲಾರಿಯ ಕೀಗಳನ್ನು ಸೀಜ್ ಮಾಡಲಾಗಿದೆ. ಧಕ್ಕೆಯಿಂದ ಅಲ್ಲಿದ್ದ ಸುಮಾರು ೬ ಮಂದಿಯನ್ನು ಹಿಡಿದು ಮತ್ತೊಂದು ವಾಹನದಲ್ಲಿ ಹಾಕಿ ಕುಂದಾಪುರ ಪೋಲಿಸರಿಗೆ, ಕುಂದಾಪುರ ತಹಶೀಲ್ದಾರ್ ಸಮಕ್ಷಮ ಅಕ್ರಮ ಮರುಳುಗಾರಿಕೆ ಕಾರ್ಮಿಕರ ವಿರುದ್ದ ಮೊಕದ್ದಮೆ ದಾಕಲು ಮಾಡಲಾಗಿತ್ತು.

ಅಕ್ರಮ ಮರಳುಗಾರಿಕೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಹಲವಾರು ದೂರುಗಳು ನಿರಂತರವಾಗಿ ಬರುತ್ತಿದ್ದು ಈ ಅಕ್ರಮ ಮರಳುಗಾರಿಕೆ ತಡೆಯಲು ೨ ಮೊಬೈಲ್ ಚೆಕ್ ಪೋಸ್ಟ್ ಹಾಗೂ ಶಿರೂರು ಮತ್ತು ಹೊಸಂಗಡಿನಲ್ಲಿ ಚೆಕ್ ಪೋಸ್ಟ್ ಕೂಡ ಹಾಕಿದ್ದು ಆದರೂ ಕೂಡ ಅಕ್ರಮ ಮರಳುಗಾರಿಕೆ ನಿಂತಿರಲಿಲ್ಲ. ಜನರಿಂದ ಜಿಲ್ಲಾಡಳಿತದ ಮೇಲೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ಪೊಲೀಸರ ಗಮನಕ್ಕೆ ತರದೇ ದಾಳಿಗೆ ಮುಂದಾಗಿದ್ದರು.

ಮರಳು ಮಾಫಿಯಾ ಆಧಿಕಾರಿಗಳ ಮೇಲೆ ಹಲ್ಲೆ, ಕೊಲೆಯತ್ನ ನಡೆಸವಷ್ಟು ಮಟ್ಟಗೆ ಬೆಳೆದು ನಿಂತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ನಮ್ಮ ಸರಕಾರಗಳು ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೇ ಹೋದಲ್ಲಿ ಇಂತಹ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಲಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Illegal sand miners tried to murder her during raid Says Udupi DC Priyanka Francis

        ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಲು ಅಧಿಕಾರಿಗಳು ತೆರಳಿದ್ದ ಕಾರು

Udupi district deputy commissioner (DC) Priyanka Francis complained to the police on the late night of Sunday April 2, that she and assistant commissioner (AC) Shilpa Nag faced murder attempt by illegal sand miners at Kandlur near Kundapura

Leave a Reply

Your email address will not be published. Required fields are marked *

3 × 4 =